ಬೆಂಗಳೂರು:ಚುನಾವಣಾ ಸಮಯ ಹತ್ತಿರವಾಗುತ್ತಿದ್ದಂತೆ ಎಲ್ಲಾ ಪಕ್ಷಗಳು ತಮ್ಮ ಸಾಧನೆಗಳನ್ನು ಮುಂದಿಡುತ್ತಾ ಪ್ರಚಾರಕಾರ್ಯ ಈಗಾಗಲೇ ಆರಂಭಿಸಿದೆ. ಜೆಡಿಎಸ್ ಪಂಚರತ್ನ ರಥಯಾತ್ರೆ ಹಾಗೂ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಕೈಗೊಂಡಿವೆ. ಫೆಬ್ರವರಿ ಅಂತ್ಯದ ವೇಳೆಗೆ ಬಿಜೆಪಿ ರಾಜ್ಯದ ನಾಲ್ಕೂ ದಿಕ್ಕುಗಳಿಂದಲೂ ಏಕಕಾಲಕ್ಕೆ ಯಾತ್ರೆಯನ್ನು ಆರಂಭಿಸಿಲು ಈಗಾಗಲೇ ತಯಾರಿ ನಡೆಸಿದೆ.
ಇತ್ತ ಪ್ರಚಾರ ಕಾರ್ಯದ ಭಾಗವಾಗಿ ರಾಜ್ಯದ ಯಾವುದೇ ಭಾಗಕ್ಕೂ ಹೋದರೂ ವಿವಿಧ ಪಕ್ಷಗಳ ಬ್ಯಾನರ್​ಗಳನ್ನು ಪ್ರಚಾರದ ಭಾಗವಾಗಿ ಕಾಣಬಹುದು. ಮತದಾರರನ್ನು ಸೆಳೆಯುವ ಉದ್ಧೇಶದಿಂದ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ವಿವಿಧ ರೀತಿಯ ಪ್ರಚಾರ ಮಾಡುತ್ತಿವೆ. ಇದೀಗ ಬಿಜೆಪಿ ಪಕ್ಷ, ಆಡಳಿತಾವಧಿಯ ಸಾಧನೆಗಳ ಬ್ಯಾನರ್​ ಹಾಗೂ ಭಿತ್ತಿ ಪತ್ರಗಳನ್ನು ಅಳವಡಿಸಿದವೆ.
ಮತ್ತೊಂದೆಡೆ ಬಿಜೆಪಿಯ ಪ್ರಚಾರಕ್ಕೆ ವಿರೋಧಿ ಬಣ ಸಕಲ ರೀತಿಯಿಂದಲೂ ವಿರೋಧಿಸುತ್ತಿವೆ. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ರಾಜ್ಯ ಬಿಜೆಪಿಯ ಪ್ರಚಾರಕಾರ್ಯಕ್ಕೆ ಪ್ರತಿರೋಧ ಒಡ್ಡುತ್ತಿದ್ದು, ಕೌಂಟರ್ ಕೊಡುತ್ತಿವೆ. ಹೀಗಾಗಿ ಪ್ರಮುಖ ಪಕ್ಷಗಳ ಕಾರ್ಯಕರ್ತರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪ್ರಬಲ ಚರ್ಚೆಗಳು ನಡೆಯುತ್ತಿವೆ.
ಇದೀಗ ರಾಜಾಜಿನಗರದ ಫ್ಲೈಓವರ್ ಮೇಲೆ ಬಿಜೆಪಿ ಸರ್ಕಾರದ ಸಾಧನೆಯ ಬಗ್ಗೆ ಅಳವಡಿಸಿದ್ದ ಬ್ಯಾನರ್​ಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಮಸಿ ಬಳಿದು ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರದ ಆಸ್ತಿ ಮೇಲೆ ಪೋಸ್ಟರ್ ಹಾಕಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಬಿಜೆಪಿ ಸಾಧನೆ ಮೇಲೆ 40 ಪರ್ಸೆಂಟ್ ಕಮಿಷನ್ ಎಂದು ಬರೆದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 2 =
Remember me
