ಬೆಂಗಳೂರು:ಇತ್ತೀಚೆಗೆ ಖಾಸಗಿ ಹೋಟೆಲ್​ನಲ್ಲಿ ಲಸಿಕೆ ಕೊಡಿಸಿ ವಿವಾದಕ್ಕೆ ಒಳಗಾಗಿದ್ದ ಕಾಂಗ್ರೆಸ್​ ಯುವ ಮುಖಂಡ ನಲಪಾಡ್, ಮತ್ತೊಂದು ಗೊಂದಲಕ್ಕೆ ಕಾರಣರಾಗಿದ್ದರಿಂದ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆಗಾಗಿ ಹೈಗ್ರೌಂಡ್ಸ್​ ಪೊಲೀಸ್​ ಠಾಣೆಗೆ ಕರೆದೊಯ್ದ ಪ್ರಸಂಗವೂ ನಡೆದಿದೆ.
ಕೋವಿಡ್ ಪರಿಸ್ಥಿತಿ ನಿರ್ವಹಣೆ ವೇಳೆ ನಲಪಾಡ್​ ಅವರು ಗೊಂದಲಕ್ಕೆ ಕಾರಣರಾಗಿದ್ದಾರೆ ಎಂಬ ಆರೋಪದ ಮೇಲೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಬೆಡ್ ಸಿಕ್ಕಿಲ್ಲ ಎಂದು ಪ್ರತಿಭಟನೆ ಮಾಡುತ್ತಿದ್ದ ಮಹಿಳೆಯನ್ನು ಸರ್ಕಾರಿ ಆಂಬುಲೆನ್ಸ್​ನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲು ಬಂದಾಗ, ನಲಪಾಡ್​ ಅಲ್ಲಿಗೆ​ ಕಾಂಗ್ರೆಸ್ ಕೇರ್ಸ್ ಆಂಬುಲೆನ್ಸ್​ ಕರೆಸಿ ಅದೇ ಆಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದರು. ಇದರಿಂದ ಅಲ್ಲಿ ಪೊಲೀಸರು ಹಾಗೂ ನಲಪಾಡ್ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಕೆಲಕಾಲ ಗೊಂದಲ ಉಂಟಾದ್ದರಿಂದ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಗೆದ್ದ ನಲಪಾಡ್‌ಗೆ ಮುಖಭಂಗ: ರಕ್ಷಾ ರಾಮಯ್ಯಗೆ ಒಲಿದ ರಾಜ್ಯ ಯುವ ಕಾಂಗ್ರೆಸ್​ ಅಧ್ಯಕ್ಷ ಗಾದಿ
ನಾವು ಕೆಪಿಸಿಸಿ ಕಚೇರಿಯಲ್ಲಿ ಕೋವಿಡ್​ ವಾರ್​ರೂಮ್​ನಲ್ಲಿದ್ದಾಗ, ಬೆಡ್ ಬೇಕು, ಬಿಯು ನಂಬರ್ ಇದ್ದರೂ ಬೆಡ್ ಸಿಗುತ್ತಿಲ್ಲ ಎಂದು ಮಹಿಳೆಯೊಬ್ಬರು ಕರೆ ಮಾಡಿ ಹೇಳಿದ್ದರು. ನಮ್ಮ ಕಾಂಗ್ರೆಸ್ ಕೇರ್ಸ್​ ಸರ್ವಿಸ್​ಗೆ ಕರೆ ಮಾಡಿದ್ದ ಆ ಮಹಿಳೆ, ವಿಧಾನಸೌಧದ ಬಳಿ ಇದ್ದೇನೆ ಎಂದಿದ್ದರಿಂದ ನೆರವು ನೀಡುವ ಸಲುವಾಗಿ ಅಲ್ಲಿಗೆ ತೆರಳಿದ್ದೆವು ಎಂದು ನಲಪಾಡ್ ತಿಳಿಸಿದ್ದಾರೆ. ಅಲ್ಲಿ ನಾವು ಇದನ್ನು ಪ್ರಿಪ್ಲ್ಯಾನ್ಡ್​ ಆಗಿ ಮಾಡಿದ್ದೇವೆ ಎಂದು ಆರೋಪಿಸಿದ ಪೊಲೀಸರು ನಮ್ಮನ್ನು ವಶಕ್ಕೆ ಪಡೆದಿದ್ದರು. ಪ್ರಿವೆಂಟಿವ್ ಅರೆಸ್ಟ್​ ಪ್ರಕ್ರಿಯೆ ನಡೆಸಿ ನಮ್ಮನ್ನು ಪೊಲೀಸರು ಬಿಟ್ಟು ಕಳಿಸಿದ್ದು, ಆ ಮಹಿಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಬೆಡ್​ ಸಿಕ್ಕಿದೆ ಎಂದು ನಲಪಾಡ್ ತಿಳಿಸಿದ್ದಾರೆ.
ಭಾರತಕ್ಕೆ ಕರೊನಾ ಮೂರನೇ ಅಲೆ ಪ್ರವೇಶ ಯಾವತ್ತು ಗೊತ್ತಾ?; ಇಲ್ಲಿದೆ ನೋಡಿ ಮಾಹಿತಿ…

ಡಿಸೆಂಬರ್‌ವರೆಗೂ ಇರುತ್ತೆ ಈ ಕರೊನಾ ಕಾಟ: ಎಚ್ಚರಿಕೆ ನೀಡಿದ ಡಾ. ಮಂಜುನಾಥ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 12 =
Remember me
