ಬೆಂಗಳೂರು: ಕಾಂಗ್ರೆಸ್​ನ ಮುಂಚೂಣಿ ನಾಯಕರಲ್ಲಿ ಒಮ್ಮತ ಮೂಡಿಸಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕರೆದಿದ್ದ ಹಿರಿಯ ನಾಯಕರ ಸಭೆಯಲ್ಲಿ ಒಗ್ಗಟ್ಟಿನ ಮಂತ್ರ ಬೋಧಿಸಲಾಯಿತು.
ವಿಧಾನಸಭೆ ಅಧಿವೇಶನ ಸೋಮವಾರ ಆರಂಭವಾಗುತ್ತಿದ್ದು, ಈ ವೇಳೆ ಪಕ್ಷದ ನಾಯಕರೆಲ್ಲ ಒಂದೇ ತೀರ್ವನಕ್ಕೆ ಬದ್ಧರಾಗಿರಬೇಕು ಹಾಗೂ ಆಡಳಿತ ಪಕ್ಷದ ಎದುರು ಭಿನ್ನತೆ ಕಾಣಬಾರದು ಎಂಬ ಉದ್ದೇಶದಿಂದ ಸಭೆ ನಡೆಸಲು ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸೂಚಿಸಿದ್ದರು ಎಂದು ತಿಳಿದುಬಂದಿದೆ.
ಇತ್ತೀಚೆಗೆ ಪಕ್ಷದ ಸ್ಥಾನಮಾನ, ಜವಾಬ್ದಾರಿ ಹಂಚಿಕೆಯಲ್ಲಿ ಉಂಟಾದ ವ್ಯತ್ಯಾಸವಾಗಿ ನಾಯಕರೆಲ್ಲ ಒಂದೊಂದು ದಿಕ್ಕಿಗೆ ಮುಖ ತಿರುಗಿಸಿದ್ದರು. ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಮತ್ತು ಪ್ರತಿಪಕ್ಷ- ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕಿಸುವ ವಿಚಾರದಲ್ಲಿ ಕೆಲವರು ಆಕಾಂಕ್ಷಿಗಳಾಗಿದ್ದರು. ಮತ್ತೆ ಕೆಲವರು ತಮ್ಮ ನಾಯಕರ ಪರವಾಗಿ ಹೈಕಮಾಂಡ್ ಪ್ರತಿನಿಧಿಗೆ ವರದಿ ನೀಡಿದ್ದರು. ಜತೆಗೆ ಪರಸ್ಪರ ಟೀಕೆಗಳನ್ನೂ ಮಾಡಿಕೊಂಡಿದ್ದರು.
ಇದೀಗ ರಾಜ್ಯ ಸರ್ಕಾರವನ್ನು ಕಟ್ಟಿಹಾಕಲು ಒಗ್ಗಟ್ಟಾಗಿದ್ದರೆ ಮಾತ್ರ ಸಾಧ್ಯವಿದೆ. ಯಾವುದೇ ಕಾರಣಕ್ಕೂ ಬಿಜೆಪಿಯನ್ನು ಹಣಿಯಲು ಸಿಕ್ಕಿರುವ ಅವಕಾಶ ಬಿಟ್ಟುಕೊಡಬಾರದು ಎಂಬ ಬಗ್ಗೆ ಮಾತ್ರವಲ್ಲದೆ, ಬೀದರ್​ನ ಶಾಹೀನ್ ಶಾಲೆ ಪ್ರಕರಣ, ನೆರೆ ಪರಿಹಾರ ಕಡೆಗಣನೆ, ಗೋಲಿಬಾರ್, ದೇಶದ್ರೋಹ ಪ್ರಕರಣ ದಾಖಲು ಕುರಿತೂ ಸಭೆಯಲ್ಲಿ ಚರ್ಚೆ ನಡೆಯಿತೆಂದು ತಿಳಿದುಬಂದಿದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ನಾಯಕರಾದ ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್, ರಾಮಲಿಂಗಾರೆಡ್ಡಿ, ಎಂ.ಕೃಷ್ಣಪ್ಪ, ರಮೇಶ್ ಕುಮಾರ್, ಎಚ್.ಕೆ.ಪಾಟೀಲ್, ಯು.ಟಿ.ಖಾದರ್ ತಂತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ಮತ್ತೆ ಸಭೆ
ವಿಧಾನಸಭೆ ಅಧಿವೇಶನದಲ್ಲಿ ಪಕ್ಷದ ಕಾರ್ಯತಂತ್ರ ಹೇಗಿರಬೇಕು ಮತ್ತು ಶಾಸಕರು ಯಾವ ರೀತಿ ಸಹಕಾರ ಕೊಡಬೇಕೆಂದು ಮಾರ್ಗದರ್ಶನ ನೀಡಲು ಕರೆಯಲಾಗಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕೇವಲ 18 ನಿಮಿಷದಲ್ಲೇ ಮುಗಿದುಹೋಯಿತು. ಸಿದ್ದರಾಮಯ್ಯ ಕರೆದಿದ್ದ ಸಭೆಗೆ ಬೆರಳೆಣಿಕೆ ಸಂಖ್ಯೆಯಲ್ಲಿ ಶಾಸಕರು ಹಾಜರಾಗಿ ದ್ದರು. ಭಾನುವಾರವಾದ್ದರಿಂದ ದೂರದಿಂದ ಬರಬೇಕಿದ್ದ ಶಾಸಕರು ಭಾನುವಾರ ರಾತ್ರಿ ಹಾಗೂ ಸೋಮವಾರ ಮುಂಜಾನೆ ಬೆಂಗಳೂರಿಗೆ ಬರುತ್ತಿದ್ದಾರೆ. ಈ ಕಾರಣಕ್ಕೆ ಸಂಖ್ಯೆ ಕಡಿಮೆಯಾಯಿತೆನ್ನಲಾಗಿದೆ. ಹೀಗಾಗಿ ಸೋಮವಾರ ಬೆಳಗ್ಗೆ ಅಧಿವೇಶನ ಆರಂಭಕ್ಕೆ ಮುನ್ನ 10 ಗಂಟೆಗೆ ಮತ್ತೆ ಸಭೆ ಕರೆಯ ಲಾಗಿದೆ. ಅಲ್ಲಿ ಪಕ್ಷದ ತೀರ್ಮಾನ ಪ್ರಕಟಿಸಲಾಗುತ್ತದೆ ಎನ್ನಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 15 =
Remember me
