ಬೆಂಗಳೂರು:ಕರ್ನಾಟಕದಲ್ಲಿ ನಡೆಯುವ ವಿಧಾನಸಭೆ ಚುನಾವಣೆ ಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯದಂತೆ ತಡೆಯಲು ನೆರೆ ರಾಜ್ಯದ ಮುಖ್ಯಮಂತ್ರಿ ಕೈ ಶಾಸಕನ ಮೂಲಕ ರಣತಂತ್ರ ರೂಪಿಸಿದ ರೋಚಕ ಬೆಳವಣಿಗೆಯೊಂದು ನಡೆದಿದೆ. ಕಾಂಗ್ರೆಸ್ ಏಕ ಪಕ್ಷವಾಗಿ ಅಧಿಕಾರಕ್ಕೆ ಬರುವುದನ್ನು ತಡೆಯಲು ತೆಲಂಗಾಣ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್​ಗೆ 500 ಕೋಟಿ ರೂ. ಆಫರ್ ನೀಡಿದ್ದಾರೆ ಎಂಬ ಗುಲ್ಲೆದ್ದಿದೆ. ತೆಲಂಗಾಣ ಕಾಂಗ್ರೆಸ್ ಘಟಕದ ಅಧ್ಯಕ್ಷ ರೇವಂತ ರೆಡ್ಡಿ ಈ ಆರೋಪ ಮಾಡಿದ್ದರು. ಆದರೆ ಸ್ಪಷ್ಟನೆ ನೀಡಿರುವ ಜಮೀರ್ ಅಹ್ಮದ್, ನಾನು ಕೆಸಿಆರ್ ಅವರನ್ನು ಭೇಟಿ ಮಾಡಿದ್ದು ನಿಜ. ತಾಂಡೂರು ಶಾಸಕ ರೋಹಿತ್ ರೆಡ್ಡಿ ನನ್ನ ಸ್ನೇಹಿತ. ಅವರು ಸಿಎಂ ಭೇಟಿ ಮಾಡಿ ಎಂದು ಕೇಳಿಕೊಂಡಿದ್ದರು, ಹೀಗಾಗಿ ಭೇಟಿ ಮಾಡಿದೆ. ಆದರೆ, ರಾಝುಕೀಯ ಚರ್ಚೆ ನಡೆದಿಲ್ಲ. ಆಫರ್ ಬಗ್ಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಸೋಲಿಸಲು ಕೆಸಿಆರ್ ಸುಪಾರಿ ನೀಡಿದ್ದಾರೆ ಎಂಬುವ ವಿಚಾರ ಗೊತ್ತಿಲ್ಲ. ಯಾರು ಯಾರನ್ನಾದರೂ ಭೇಟಿ ಮಾಡುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಸಿದರೆ ಕೆ.ಚಂದ್ರಶೇಖರ್ ರಾವ್​ಗೆ ಲಾಭ ಏನು? ಕೆಸಿಆರ್ ಹೋರಾಟ ಬಿಜೆಪಿ ವಿರುದ್ಧವೇ ಹೊರತು ಕಾಂಗ್ರೆಸ್ ವಿರುದ್ಧ ಅಲ್ಲ ಎಂದು ಹೇಳಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಸಲು ಕಾಂಗ್ರೆಸ್ ಮುಖಂಡರಿಗೆ 500 ಕೋಟಿ ರೂ. ನೀಡಲಾಗಿದೆ ಎಂದು ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷರು ಮಾಡಿರುವ ಆರೋಪಕ್ಕೆ ಕಾಂಗ್ರೆಸ್​ನವರೇ ಉತ್ತರ ಕೊಡಬೇಕು. ಈ ಬಗ್ಗೆ ನಮಗೇನೂ ಖುಷಿಯಾಗುವ ಪ್ರಶ್ನೆಯಿಲ್ಲ.
|ಬಸವರಾಜ ಬೊಮ್ಮಾಯಿಸಿಎಂ
ಗುಸುಗುಸು:ಮುಸ್ಲಿಂ ಸಮುದಾಯದಲ್ಲಿ ಪ್ರಸ್ತುತ ಪ್ರಭಾವಿ ಎನಿಸಿಕೊಂಡಿರುವ ಜಮೀರ್ ಅಹ್ಮದ್ ಅವರನ್ನು ಕೆಸಿಆರ್ ತಮ್ಮ ಭಾರತೀಯ ರಾಷ್ಟ್ರ ಸಮಿತಿ ಕರ್ನಾಟಕ ಘಟಕದ ಅಧ್ಯಕ್ಷರಾಗುವಂತೆ ಕೋರಿಕೊಂಡಿದ್ದರು, ರಾಜ್ಯದಲ್ಲಿ ಪಕ್ಷ ಬೆಳೆಸಲು ಸೂಕ್ತ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದರು ಎಂದು ಕಾಂಗ್ರೆಸ್ ವಲಯದಲ್ಲಿ ಚರ್ಚೆ ನಡೆದಿದೆ. ಜಮೀರ್ ಹೊಸ ಪಕ್ಷದ ಅಧ್ಯಕ್ಷರಾದರೆ ರಾಜ್ಯದ ಮುಸ್ಲಿಂ ಮತಗಳು ಕಾಂಗ್ರೆಸ್​ಗೆ ಪೂರ್ಣಪ್ರಮಾಣದಲ್ಲಿ ಬರುವುದಿಲ್ಲ. ಜತೆಗೆ ಕೆಲವು ಬೆರಳೆಣಿಕೆ ಕ್ಷೇತ್ರಗಳಲ್ಲಿ ಹೊಸ ಪಕ್ಷ ಗೆಲ್ಲಲೂ ಬಹುದು. ಇನ್ನೊಂದು ಮಗ್ಗುಲಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲು ಬೇಕಾಗುವ 113 ಮ್ಯಾಜಿಕ್ ನಂಬರ್ ತಲುಪಲು ಸಾಧ್ಯವಾಗುವುದಿಲ್ಲ. ಈ ವೇಳೆ ತನ್ನ ಸ್ನೇಹಿತ ಪಕ್ಷ ಜೆಡಿಎಸ್​ಗೆ ಅವಕಾಶ ಒದಗಿಬರಲಿದೆ ಎಂಬುದು ಕೆಸಿಆರ್ ಲೆಕ್ಕಾಚಾರವಾಗಿದ್ದಿರಬಹುದು ಎಂದು ಕಾಂಗ್ರೆಸ್ ಮುಖಂಡರೊಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ. 500 ಕೋಟಿ ಸುಪಾರಿ ಕೊಡುತ್ತಾರೆಂಬುದು ಬಾಯಿ ಮಾತಿನ ಆರೋಪ. ಹೊಸ ಪಕ್ಷ ಕಟ್ಟಲು ನೆರವು ನೀಡಲು ನೆರೆ ರಾಜ್ಯದ ಸಿಎಂ ವಾಗ್ದಾನ ಮಾಡಿದ್ದನ್ನೇ ಈ ರೀತಿ ವಿಶ್ಲೇಷಿಸಲಾಗುತ್ತದೆ. ನವೆಂಬರ್, ಡಿಸೆಂಬರ್ ವೇಳೆಗೆ ಮೂರು ಬಾರಿ ಜಮೀರ್, ಕೆಸಿಆರ್ ಸಂಗಾತಿಗಳನ್ನು ಭೇಟಿ ಮಾಡಿದ್ದಾರೆಂಬ ಮಾಹಿತಿಯೂ ನಮ್ಮ ಪಕ್ಷದಲ್ಲಿದೆ ಎಂದರು.
ಹೈದರಾಬಾದ್​ನಲ್ಲಿ ಮಾಲ್ ನಿರ್ವಿುಸುವ ಉದ್ದೇಶದ ಭೇಟಿ:ಜಮೀರ್ ಅಹ್ಮದ್ ಆಪ್ತರ ಪ್ರಕಾರ, ಹೈದರಾಬಾದ್​ನಲ್ಲಿ ವೈಶಿಷ್ಟ್ಯಪೂರ್ಣವಾದ ದಕ್ಷಿಣ ಭಾರತದ ಅತಿ ದೊಡ್ಡ ಮಾಲ್ ನಿರ್ವಿುಸುವ ಉದ್ದೇಶವಿದ್ದು ಈ ವಿಚಾರವಾಗಿ ಕೆಸಿಆರ್ ಜತೆ ಸಭೆ ನಡೆದಿತ್ತು. ಕರ್ನಾಟಕದ ಒಬ್ಬ ಸಂಸದರು, ಸಿನಿಮಾ ನಿರ್ವಪಕರು ಸೇರಿ ಈ ಮಾಲ್ ಪಾಲುದಾರರಾಗುತ್ತಾರೆ. ಇದರ ಹೊರತಾಗಿ ರಾಜಕೀಯ ಚರ್ಚೆ ನಡೆದಿರಬಹುದು. ಕಾಂಗ್ರೆಸ್ ಸೋಲಿಸುವ ಲೆಕ್ಕಾಚಾರದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜಮೀರ್ ಅಹ್ಮದ್ ಕೂಡ ಇದೇ ದಾಟಿಯಲ್ಲಿ ಮಾತನಾಡಿದ್ದು, ಯಾರು ಆರೋಪ ಮಾಡಿದ್ದಾರೆ ಅವರನ್ನೆ ಕೇಳಬೇಕು. ನಿಖರವಾಗಿ ನನ್ನ ಹೆಸರನ್ನೇ ಹೇಳಿಲ್ಲ. ಬಹಳ ಜನ ಕೆಸಿಆರ್ ಭೇಟಿ ಮಾಡಿದ್ದಾರೆ, ಅದು ಪ್ರಚಾರ ಆಗಿಲ್ಲ, ನಾನು ಹೋಗಿಬಂದಿದ್ದು ಮಾತ್ರ ಪ್ರಚಾರ ಆಗಿದೆ ಎಂದಿದ್ದಾರೆ. ಜಮೀರ್ ಅಹ್ಮದ್ ಭಾರತ್ ಜೋಡೋ ಯಾತ್ರೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿಲ್ಲ, ಪಕ್ಷದ ಅಲ್ಪಸಂಖ್ಯಾತ ಮುಖಂಡರ ಸಭೆ ಹೊರತು ಇತರ ಸಭೆಗಳಲ್ಲಿ ಸರಿಯಾಗಿ ಪಾಲ್ಗೊಳ್ಳುತ್ತಿಲ್ಲ. ಮೈಸೂರಿನಲ್ಲೇ ವಾಸ್ತವ್ಯ ಇದ್ದರೂ ಸಿದ್ದರಾಮಯ್ಯರನ್ನು ಭೇಟಿ ಮಾಡಿಲ್ಲ. ಈ ಎಲ್ಲ ಸಂಗತಿಗಳು ಊಹಾಪೋಹಕ್ಕೆ ರೆಕ್ಕೆಪುಕ್ಕ ಹುಟ್ಟಿಕೊಳ್ಳಲು ಕಾರಣವಾಗಿದೆ.
ಮಾಂಗಲ್ಯ ಕದ್ದ ಕಳ್ಳ ಪೊಲೀಸ್ ಠಾಣೆ ಹಿಂದಿನ ಮನೆಯಲ್ಲೇ ನೆಲೆಸಿದ್ದ; ಮೊದಲ ಕಳ್ಳತನದ ಟೆನ್ಷನ್​ಗೇ 20 ಕೆ.ಜಿ. ದೇಹತೂಕ ಕಳ್ಕೊಂಡಿದ್ದ!

ಮಕ್ಕಳಾಗಲಿ ಎಂದು ಮಹಿಳೆಗೆ ಮನೆಯವರೇ ಮನುಷ್ಯರ ಎಲುಬಿನ ಪುಡಿ ತಿನ್ನಿಸಿದ್ರು!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × 2 =
Remember me
