ಬೆಂಗಳೂರು:ಬೆಂಗಳೂರಿನ ಕೆ.ಜಿ. ಹಳ್ಳಿ ಹಾಗೂ ಡಿ.ಜೆ. ಹಳ್ಳಿ ಗಲಭೆ ಪ್ರಕರಣ ಪೂರ್ವನಿಯೋಜಿತವೆಂಬ ಸಂಗತಿ ಬೆಳಕಿಗೆ ಬಂದ ಬೆನ್ನಲ್ಲೇ, ದಾಂಧಲೆಕೋರರು ಪೊಲೀಸರನ್ನೂ ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂಬ ಆತಂಕಕಾರಿ ವಿಚಾರ ಬಯಲಾಗಿದೆ. ಹತ್ಯೆಯ ಉದ್ದೇಶದಿಂದಲೇ ಗಲಭೆಕೋರರು ಮಾರಕಾಸ್ತ್ರ, ಪೆಟ್ರೋಲ್ ಬಾಂಬ್​ಗಳೊಂದಿಗೆ ಠಾಣೆ ಮೇಲೆ ದಾಳಿ ನಡೆಸಿದ್ದರು; ಸ್ವಲ್ಪ ಯಾಮಾರಿದ್ದರೂ ಹಲವರ ಜೀವಕ್ಕೆ ಅಪಾಯವಾಗುತ್ತಿತ್ತು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ.
ಡಿ.ಜೆ. ಹಳ್ಳಿ ಠಾಣೆ ಇನ್​ಸ್ಪೆಕ್ಟರ್ ಎನ್.ಎನ್. ಕೇಶವಮೂರ್ತಿ ಕೊಟ್ಟಿರುವ ದೂರಿನ ಮೇಲೆ ಎಫ್​ಐಆರ್ ದಾಖಲಾಗಿದೆ. ಆ.11ರ ರಾತ್ರಿ ದೂರು ಕೊಡುವ ನೆಪದಲ್ಲಿ ಠಾಣೆಗೆ ಬಂದ ಗಲಭೆಕೋರರು ನಡೆಸಿದ ಸಂಚಿನ ಬಗ್ಗೆ ಇದರಲ್ಲಿ ಉಲ್ಲೇಖಿಸಿದ್ದಾರೆ. ‘ಪೊಲೀಸರ ಕೈಯಲ್ಲಿರುವ ಬಂದೂಕುಗಳನ್ನು ಕಿತ್ತುಕೊಂಡು ಅವರನ್ನು ಕೊಂದುಬಿಡಿ’ ಎಂದು ಕೂಗುತ್ತಾ ಪೆಟ್ರೋಲ್ ಬಾಂಬ್​ಗಳಿಂದ ಠಾಣೆ ಮೇಲೆ ದಾಳಿ ನಡೆಸಿದರು ಎಂದು ತಿಳಿಸಿದ್ದಾರೆ.
ಪೊಲೀಸರನ್ನು ಮುಗಿಸಿಬಿಡಿ!:ಫೇಸ್​ಬುಕ್​ನಲ್ಲಿ ಅವಹೇಳನಕಾರಿ ಪೋಸ್ಟ್ ಪ್ರಕರಣ ಸಂಬಂಧ ಆರೋಪಿ ಪಿ. ನವೀನ್​ನನ್ನು ಬಂಧಿಸಿ ರಾತ್ರಿ 8 ಗಂಟೆಗೆ ಠಾಣೆಗೆ ಕರೆತರಲಾಯಿತು. ಆರೋಪಿ ಮೇಲೆ ಹಲ್ಲೆ ನಡೆಸುವ ಉದ್ದೇಶದಿಂದ ಗಲಭೆಕೋರರಾದ ಅಫ್ನಾನ್, ಮುಜಾಮಿಲ್ ಪಾಷಾ, ಸೈಯದ್ ಮಸೂದ್, ಅಯಾಜ್, ಅಲ್ಲಾಬಕಾಶ್ ಠಾಣೆಯ ಸ್ವಲ್ಪ ದೂರದಲ್ಲಿ ಕದ್ದು ನಿಂತಿದ್ದರು. ರಾತ್ರಿ 8.45ಕ್ಕೆ ಏಕಾಏಕಿ ಈ ಐವರು ಆರೋಪಿಗಳು 300ಕ್ಕೂ ಅಧಿಕ ಜನರೊಂದಿಗೆ ಮಚ್ಚು, ದೊಣ್ಣೆ, ಲಾಂಗ್, ರಾಡ್, ಕಲ್ಲು, ಇಟ್ಟಿಗೆ, ಪೆಟ್ರೋಲ್ ಬಾಂಬ್ ಹಿಡಿದುಕೊಂಡು ಠಾಣೆ ಮೇಲೆ ದಾಳಿ ನಡೆಸಿದರು. ‘ಪೊಲೀಸರನ್ನು ಕೊಲ್ಲಿ..ಪೊಲೀಸರನ್ನು ಬಿಡಬೇಡಿ.. ಅವರನ್ನು ಮುಗಿಸಿಬಿಡಿ’ ಎಂದು ಕೂಗುತ್ತಾ ಹಲ್ಲೆ ನಡೆಸಿದರು. ಮುಖ್ಯಪೇದೆ ಶ್ರೀಧರ್ ತಲೆಗೆ ಕಲ್ಲು ತಗುಲಿ ತೀವ್ರ ಗಾಯವಾಯಿತು. ಹೆಚ್ಚಿನ ಸಿಬ್ಬಂದಿ ಕಳಿಸಿಕೊಡುವಂತೆ ಮೇಲಧಿಕಾರಿಗಳಿಗೆ ತಿಳಿಸಲಾಯಿತು.
ಈ ವೇಳೆ ದುಷ್ಕರ್ವಿುಗಳು ಠಾಣೆಯ ಬಳಿಯಿದ್ದ ಖಾಸಗಿ ಮತ್ತು ಸರ್ಕಾರಿ ವಾಹನಗಳಿಗೆ ಬೆಂಕಿ ಹಚ್ಚಿದರು. ಠಾಣೆ ಒಳನುಗ್ಗಿ ಪೀಠೋಪಕರಣ, ಬಾಗಿಲು, ಕಿಟಕಿ ಗಾಜು ಒಡೆದು, ಠಾಣೆ ತಳಮಹಡಿಯಲ್ಲಿದ್ದ ಜಪ್ತಿ ಮಾಡಿದ್ದ ವಾಹನಗಳಿಗೆ ಬೆಂಕಿ ಹಚ್ಚಿದರು. ‘ನಗರದಲ್ಲಿ 144ನೇ ಸೆಕ್ಷನ್ ಜಾರಿಯಾಗಿದೆ. ಇಲ್ಲಿಂದ ಹೋಗಿ’ಎಂದು ಇನ್​ಸ್ಪೆಕ್ಟರ್ ಸೂಚನೆ ಕೊಟ್ಟರೂ ಕೇಳಲಿಲ್ಲ ಎಂದು ಎಫ್ ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.
ಆತ್ಮರಕ್ಷಣೆ ಸಲುವಾಗಿ ಗಲಭೆಕೋರರನ್ನು ಚದುರಿಸಲು ಅಶ್ರುವಾಯು ಸಿಡಿಸಲಾಯಿತು. ಅದಕ್ಕೂ ಜಗ್ಗದ ಕಿಡಿಗೇಡಿಗಳು ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದರು. ‘ನಾವು ಬಂದಿರುವ ಕೆಲಸ (ನವೀನ್ ಕೊಲೆ) ಮಾಡಿಯೇ ತೀರುತ್ತೇವೆ. ಪೊಲೀಸರಿಂದ ಏನೂ ಮಾಡಲು ಸಾಧ್ಯವಿಲ್ಲ’ ಎಂದು ಕೂಗುತ್ತಾ ಕೊಲೆ ಯತ್ನ ನಡೆಸಿದರು.ಆತ್ಮರಕ್ಷಣೆಗಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದಾಗಲೂ ಪರಿಸ್ಥಿತಿ ಹತೋಟಿಗೆ ಬಾರದೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗಾಳಿಯಲ್ಲಿ ಹಾರಿಸಿದ ಗುಂಡು ಕೆಲ ಗಲಭೆಕೋರರಿಗೆ ತಗುಲಿ ಕೆಳಗೆ ಬಿದ್ದರು. ಸ್ವಲ್ಪ ಮಂದಿ ತಪ್ಪಿಸಿಕೊಂಡು ಓಡಿದರು. ಕೆಲವರು ಬಿದ್ದು ಒದ್ದಾಡುತ್ತಿದ್ದರು.
ಪ್ರಕರಣಕ್ಕೆ ಪ್ರಚೋದನೆ ನೀಡಿದ ಆರೋಪಿಗಳಾದ ಅಫ್ನಾನ್, ಮುಜಾಮಿಲ್ ಪಾಷಾ, ಸೈಯದ್ ಮಸೂದ್, ಅಯಾಜ್, ಅಲ್ಲಾಬಕಾಶ್ ಮತ್ತು ಸಹಚರರನ್ನು ವಶಕ್ಕೆ ಪಡೆಯಲಾಗಿದೆ ಎಂದು ಕೇಶವಮೂರ್ತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದರ ಅನ್ವಯ ಡಿ.ಜೆ. ಹಳ್ಳಿ ಠಾಣೆಯಲ್ಲಿ ಆರು ಮಂದಿ ಆರೋಪಿಗಳ ವಿರುದಟಛಿ ಎಫ್​ಐಆರ್ ದಾಖಲಾಗಿದೆ.
ವಿವಿಧ ಸೆಕ್ಷನ್ ಅಡಿ ಎಫ್​ಐಆರ್ ಕೊಲೆ ಯತ್ನ ಸೇರಿ ಹಲವು ಪ್ರಕರಣಗಲಭೆಕೋರರ ವಿರುದ್ಧ ಕೊಲೆ ಯತ್ನ, ಸಾರ್ವಜನಿಕ ಆಸ್ತಿ ಹಾನಿ, ಸರ್ಕಾರದ ಆಸ್ತಿ ಹಾನಿ, ದೊಂಬಿ, ಗಲಭೆ, ಆಸ್ತಿ ನಾಶ ಮಾಡುವ ಉದ್ದೇಶದಿಂದ ಸ್ಪೋಟಕ ವಸ್ತು ಅಥವಾ ಬೆಂಕಿ ಹಚ್ಚುವುದು, ಕರ್ತವ್ಯಕ್ಕೆ ಅಡ್ಡಿ, ಶಾಂತಿ ಕದಡಲು ಪ್ರಚೋದನೆ ಸೇರಿ ವಿವಿಧ ಸೆಕ್ಷನ್ ಅಡಿ ಎಫ್​ಐಆರ್ ದಾಖಲಿಸಲಾಗಿದೆ.
ಅಶ್ರುವಾಯು ಪ್ರಯೋಗ:ಕೆಎಸ್​ಆರ್​ಪಿ ಪಡೆ ಬರುವಷ್ಟರಲ್ಲಿ ಸಾವಿರಾರು ಜನ ರಾತ್ರಿ 9.08ಕ್ಕೆ ಡಿ.ಜೆ.ಹಳ್ಳಿ ಠಾಣೆ ಬಳಿಗೆ ತೆರಳಿ ವರದಿ ಮಾಡಿಕೊಳ್ಳುವಂತೆ ಕೆಎಸ್ಸಾರ್ಪಿ ಪಡೆಗೆ ಸಂದೇಶ ಹೋಗಿತ್ತು. 9.30ಕ್ಕೆ ವಾಹನ ಜತೆ ಸಿಬ್ಬಂದಿ ಡಿ.ಜೆ.ಹಳ್ಳಿ ಠಾಣೆ ಬಳಿಗೆ ಹೋಗಿದ್ದರು. ಅಷ್ಟರಲ್ಲಿ ಠಾಣೆ ಆವರಣ ಮತ್ತು ಮುಂಭಾಗದ ರಸ್ತೆಯಲ್ಲಿ 200-300 ಜನರು ಸೇರಿದ್ದರು. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದಾಗ ಅಧಿಕಾರಿಗಳ ಸೂಚನೆಯಂತೆ ಅಶ್ರುವಾಯು ಪ್ರಯೋಗಿಸಲಾಯಿತು ಎಂದು ಪ್ರತ್ಯೇಕ ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.
10 ಲಕ್ಷ ರೂ. ಆಸ್ತಿ ನಷ್ಟ:ಲಾಠಿ ಚಾರ್ಜ್ ಮಾಡಿ, ಗಾಳಿಯಲ್ಲಿ 38 ಸುತ್ತು ಗುಂಡು ಹಾರಿಸಲಾಯಿತು. ಇದೇ ವೇಳೆ ಠಾಣೆ ಮುಂಭಾಗದಲ್ಲಿ ನಿಲ್ಲಿಸಿದ್ದ ಕೆಎಸ್ ಆರ್​ಪಿ ಬೆಟಾಲಿಯನ್​ಗೆ ಸೇರಿದ ಬಸ್​ಗೆ ದುಷ್ಕರ್ವಿುಗಳು ಬೆಂಕಿ ಹಚ್ಚಿದರು. ಗ್ರಾಂಡ್ ಶೀಟ್​ಗಳು, ಬೆಡ್​ಶೀಟ್​ಗಳು, ಮೊಬೈಲ್, ಗುಂಡುಗಳನ್ನು ಸಂಗ್ರಹಿಸಿದ್ದ ಬಾಕ್ಸ್​ಗಳು ಸೇರಿ 10 ಲಕ್ಷ ರೂ. ಮೌಲ್ಯದ ಆಸ್ತಿ ನಷ್ಟವಾಗಿದೆ. ಮತ್ತೊಂದು ವಾಹನಕ್ಕೂ ಬೆಂಕಿ ಹಚ್ಚಿರುವ ಕುರಿತು ಪ್ರತ್ಯೇಕ ಎಫ್​ಐಆರ್ ದಾಖಲಾಗಿದೆ.ಇದನ್ನೂ ಓದಿ:‘ಡಿ.ಜೆ.ಹಳ್ಳಿ ಗಲಭೆಕೋರರು ಇನ್ಮುಂದೆ ಕನಸು-ಮನಸಲ್ಲೂ ಇಂಥ ಕೆಲಸ ಮಾಡದಂಥ ಪಾಠ ಕಲಿಸುತ್ತೇವೆ…’
ಎಸ್​ಡಿಪಿಐ ವಿರುದ್ಧ ಪ್ರಕರಣ:ಗಲಭೆಗಳ ಹಿಂದೆ ಎಸ್​ಡಿಪಿಐ ಪಾತ್ರ ಇರುವ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವ ಸರ್ಕಾರ, ಸಂಘಟನೆಯ ವಿರುದ್ಧ ಸೂಕ್ತ ಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ವಿಡಿಯೋ ಫೂಟೇಜ್ ಇನ್ನಿತರ ದಾಖಲೆಗಳ ಪರಿಶೀಲನೆ ನಡೆಸಿದಾಗ ಎಸ್​ಡಿಪಿಐ ಪಾತ್ರ ಬೆಳಕಿಗೆ ಬಂದಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ
4 ಬಾರಿ ವಿಫಲ ಸ್ಕೆಚ್:ಈ ಹಿಂದೆಯೂ ನಗರದಲ್ಲಿ ನಾಲ್ಕು ಬಾರಿ ದೊಡ್ಡಮಟ್ಟದ ಗಲಭೆ ನಡೆಸಲು ವಿಫಲ ಯತ್ನ ನಡೆದಿತ್ತು ಎಂಬ ಸಂಗತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​ಆರ್​ಸಿ) ಅನುಮೋದನೆ ಪಡೆದ ಸಂದರ್ಭದಲ್ಲಿ, ಅಯೋಧ್ಯೆ ರಾಮಜನ್ಮ ಭೂವಿವಾದದ ತೀರ್ಪು ಪ್ರಕಟವಾದ ದಿನ, ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮ ವೇಳೆ ಹಿಂಸಾಚಾರ ನಡೆಸಲು ಎಸ್​ಡಿಪಿಐ ಸಂಚು ರೂಪಿಸಿತ್ತು. ಆದರೆ, ಬಿಗಿ ಪೊಲೀಸ್ ಬಂದೊಬಸ್ತ್ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿರಲಿಲ್ಲ ಎಂದು ತನಿಖೆಯಲ್ಲಿ ಗೊತ್ತಾಗಿದೆ.ಇದನ್ನೂ ಓದಿ:ಡಿಜೆ ಹಳ್ಳಿ ಗಲಭೆ ಪ್ರಕರಣ: ಅನುಮಾನ ಮೂಡಿಸಿದೆ ಬಂಧಿತ ನವೀನ್​ ಮತ್ತೊಂದು ಫೇಸ್ಬುಕ್​ ಶೇರ್!
ಬೆಂ. ನಗರ ಡಿಸಿ ನೇತೃತ್ವದಲ್ಲಿ ತನಿಖೆ:ಡಿ.ಜೆ. ಹಳ್ಳಿ ಘಟನೆ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆಗೆ ವಿಚಾರಾಣಾಧಿಕಾರಿಯಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎಸ್. ಶಿವಮೂರ್ತಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಘಟನೆಗೆ ಕಾರಣಗಳು, ಘಟನಾವಳಿಗಳ ಸರಣಿ ಹಾಗೂ ಸನ್ನಿವೇಶಗಳ ಬಗ್ಗೆ ವಿಚಾರಣೆ ನಡೆಯಲಿದೆ. ಸರ್ಕಾರಕ್ಕೆ ವರದಿ ಸಲ್ಲಿಸಲು ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ.
ಬೆಂಗಳೂರಿನಲ್ಲಿ ಗಲಭೆ ಕುರಿತು ಜಮೀರ್​ ಅಹ್ಮದ್​ ಸರಣಿ ಟ್ವೀಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 19 =
Remember me
