ಹೊಸಪೇಟೆ:ಮದ್ಯಕ್ಕಾಗಿ ಡಾಬಾ ಮಾಲೀಕರೊಂದಿಗೆ ಜಗಳ ಮಾಡಿ, ಅನುಚಿತವಾಗಿ ವರ್ತಿಸಿದ್ದ ಹಿರೇಹಡಗಲಿ ಪೊಲೀಸ್ ಠಾಣೆಯ ಪೇದೆಯೊಬ್ಬರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ.ಅರುಣ ಕೆ. ಮಂಗಳವಾರ ಆದೇಶ ಹೊರಡಿಸಿದ್ದಾರೆ. ಠಾಣೆಯ ಎಸ್‌ಬಿ ಕಾನ್ಸಟೇಬಲ್ ಕಲ್ಲೇಶ್ ಗೌಡ ಅಮಾನತುಗೊಳಗಾಗಿದ್ದಾರೆ.
ಜು.೧೭ ರಂದು ಮೈಲಾರ ಕ್ರಾಸ್‌ನಲ್ಲಿರುವ ಡಾಬಾವೊಂದರಲ್ಲಿ ಕಲ್ಲೇಶಗೌಡ ಹಾಗೂ ಇತರೆ ಇಬ್ಬರು ಪೊಲೀಸರು ಊಟ ಮಾಡುತ್ತಿದ್ದರು. ಅವರಿಗೆ ೨ ಬಾಟಲ್ ಮದ್ಯ ಕೊಡುವಂತೆ ಸಪ್ತಗಿರಿ ಡಾಬಾದ ಮಾಲೀಕರು ಕೇಳಿಕೊಂಡು ಬಂದಿದ್ದರು. ಬೇರೆ ಕೆಲಸದಲ್ಲಿದ್ದೇನೆ ಎಂದು ಮದ್ಯ ನೀಡಲು ಹಸಿರು ಮನೆ ಡಾಬಾದ ಗುರುರಾಜ ನಿರಾಕರಿಸಿದ್ದರು.
ಇದರಿಂದ ಕುಪಿತಗೊಂಡಿದ್ದ ಪೇದೆ ಕುಡಿದ ಮತ್ತಿನಲ್ಲಿ ಸಂಜೆ ಗುರುರಾಜ ಜೊತೆ ಜಗಳ ತೆಗೆದಿದ್ದಾನೆ. ಈ ಕುರಿತು ದೂರು ನೀಡಲು ಉಪ ಠಾಣೆಗೆ ಬಂದಿದ್ದ ಗುರುರಾಜ ಮತ್ತು ಆತನ ಪತ್ನಿಯೊಂದಿಗೆ ಜಗಳ ಮಾಡಿ, ಸಾರ್ವಜನಿಕರೊಂದಿಗೆ ಬೇಜವಾಬ್ದಾರಿಯಿಂದ ನಡೆದುಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಪೇದೆ ಕಲ್ಲೇಶಗೌಡ ಅವರನ್ನು ೬ ತಿಂಗಳ ಕಾಲ ಅಮಾನತುಗೊಳಿಸಿ ಎಸ್ಪಿ ಡಾ.ಅರುಣ ಕೆ. ಆದೇಶ ಹೊರಡಿಸಿದ್ದಾರೆ.
ಇಂದಿಗೂ ಸರಿಸಾಟಿಯಿಲ್ಲ ಈಕೆಯ ಸೌಂದರ್ಯಕ್ಕೆ! ಶೀಘ್ರದಲ್ಲೇ ತೆರೆಗೆ ಬರಲಿದೆ ಮಧುಬಾಲಾ ಬಯೋಪಿಕ್​

ಆಗಸ್ಟ್​ 12ಕ್ಕೆ 250 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಗಾಳಿಪಟ-೨

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − ten =
Remember me
