ಬೆಂಗಳೂರು:ನಾನು ಎಡಪಂಥೀಯವೂ ಅಲ್ಲ, ಬಲಪಂಥೀಯವೂ ಅಲ್ಲ, ನಾನು ಕಷ್ಟದಲ್ಲಿರುವ ಜನರ ಪರ.ನನಗೆ ಸಂವಿಧಾನ ಮುಖ್ಯ, ಸಂವಿಧಾನವೇ ನನ್ನ ಧರ್ಮ, ಸಂವಿಧಾನವೇ ನನ್ನ ಪಕ್ಷ. ನಾನು ಪ್ರತಿ ಪಕ್ಷದ ಮಿತ್ರ…ಇವು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಸ್ಪಷ್ಟ ಮಾತುಗಳು.
ಪ್ರೆಸ್ ಕ್ಲಬ್ ಬೆಂಗಳೂರು ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಧಾನಸಭೆಯಲ್ಲಿ ನಾವು ಯಾವುದೇ ವಿಧೇಯಕಗಳನ್ನು ಚರ್ಚೆ ಇಲ್ಲದೇ ಅಂಗೀಕರಿಸಿಲ್ಲ. ಪ್ರತಿಪಕ್ಷಗಳು ಗೈರಾಗಿದ್ದಾಗ ಆಡಳಿತ ಪಕ್ಷದವರೇ ಸಾಕಷ್ಟು ಚರ್ಚೆ ಮಾಡಿದ್ದಾರೆ ಎಂದು ಹೇಳಿದರು.
ಸ್ಪೀಕರ್ ಸ್ಥಾನ ಅಲಂಕರಿಸಿರುವುದಕ್ಕೆ ನನಗೆ ಹೆಮ್ಮೆಯಿದೆ. ಯಾವುದೇ ರೀತಿಯ ಬೇಸರವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠಗೊಳ್ಳಬೇಕಾದರೆ ವಿಧಾನಸಭಾ ಕಲಾಪಗಳು ಪರಿಣಾಮಕಾರಿಯಾಗಬೇಕು. ಆಗ ಉತ್ತಮ ಶಾಸನಗಳು ಜಾರಿಯಾಗಬಹುದು ಎಂದರು. ಸರ್ಕಾರ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ವಿಪಕ್ಷಗಳು ಕಲಾಪದಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸ್ಪೀಕರ್ ಪಾತ್ರವೂ ಮಹತ್ವದ್ದಾಗಿದೆ. ವಿಧಾನಸಭಾ ಕಲಾಪ ವ್ಯರ್ಥವಾಗದಂತೆ ನಿಭಾಯಿಸುವ ಹೊಣೆಗಾರಿಕೆ ಇದೆ ಎಂದು ಹೇಳಿದರು.
ಶಾಸಕರ ಅಮಾನತು ವಿಚಾರದಲ್ಲಿ ನಾನು ಸರ್ಕಾರದ ಒತ್ತಡಕ್ಕೆ ಮಣಿದಿಲ್ಲ. ಯಾವುದೇ ಪಕ್ಷ, ವ್ಯಕ್ತಿಗಿಂತ ಸಂಸದೀಯ ನಿಯಮ ಪಾಲನೆ ಮಾಡಿದ್ದೇನೆ. ಸಂವಿಧಾನದ ಗೌರವ ಉಳಿಸುವ ಕೆಲಸ ಮಾಡಿದ್ದೇನೆ. ಕೆಲವರು ಒಪ್ಪಬಹುದು, ಒಪ್ಪದೇ ಇರಬಹುದು, ಎಲ್ಲರನ್ನೂ ನಾನು ಸಮಾನತೆಯಿಂದ ನೋಡುವವನು. ಶಾಸಕರ ಗಲಾಟೆ ಸದನ ಮುಗಿಯುವ ತನಕ ಮಾತ್ರ. ಅದು ಈಗ ಮುಗಿದ ವಿಚಾರ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ವಿರೋಧ ಪಕ್ಷದ ನಾಯಕನಾಗಿ ಆಯ್ಕೆ ಮಾಡುವುದು ಬಿಜೆಪಿ ಆಂತರಿಕ ವಿಚಾರ ಎಂದರು.
ಕನ್ನಡ ನಮ್ಮ ಪ್ರೀತಿಯ ಭಾಷೆತಾವಾಡುವ ಕನ್ನಡದ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣದಗಳಲ್ಲಿ ಟ್ರೋಲ್ ಮಾಡಿದ್ದ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ಕನ್ನಡ ಭಾಷೆ ಪ್ರೀತಿಯ ಭಾಷೆ. ದೊಡ್ಡ ಸ್ಥಾನಕ್ಕೆ ನಾವು ಹೋಗಬೇಕಾದರೆ ಟ್ರೋಲ್ ಮಾಡುವವರ ಪಾತ್ರ ಇರುತ್ತದೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳವುದಿಲ್ಲ. ಅಲ್ಲದೆ, ನಮಗೆ ಕನ್ನಡ ಪುಸ್ತಕಕ್ಕೆ ಮಾತ್ರ ಸೀಮಿತ. ಹೊರಗಡೆ ತುಳು ಭಾಷೆಯಲ್ಲಿಯೇ ಮಾತನಾಡುತ್ತೇವೆ. ಟ್ರೋಲ್ ಮೂಲಕವಾದರೂ ನನ್ನ ಕನ್ನಡ ಭಾಷೆ ಪರಿಪೂರ್ಣವಾಗಲಿದೆ ಎಂದು ಹೇಳಿದರು.
ದೇಶದಲ್ಲಿ ಅತಿ ಹೆಚ್ಚು ಶ್ರೀಮಂತ ಶಾಸಕರು ಕರ್ನಾಟಕದಲ್ಲಿದ್ದಾರೆ ಎಂಬ ಪ್ರಶ್ನೆಗೆ, ಶಾಸಕರು ಉದ್ಯಮ ನಡೆಸುವುದು ತಪ್ಪಲ್ಲ. ಅದು ಕಾನೂನುಬದ್ಧವಾಗಿ ನಡೆಸಬೇಕು ಎಂದರು.ವಿಧಾಸಭೆ ಕಲಾಪದ ಸಂದರ್ಭದಲ್ಲಿ ಶಾಸಕರ ಪಾತ್ರ ಏನು? ಹೇಗೆ ಪ್ರಶ್ನೆ ಕೇಳಬೇಕು? ಶಾಸಕನಾಗಿ ಅಸೆಂಬ್ಲಿ ಒಳಗೆ ಹೇಗಿರಬೇಕು ಎಂಬ ಮಾಹಿತಿ ಕೊಟ್ಟಿದ್ದೇವೆ. ಪುಸ್ತಕ ಕೊಟ್ಟಿದ್ದೇವೆ. ಇದರಿಂದ ನೂತನ ಶಾಕಸರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ತಿಳಿಸಿದರು.
ವಿಧಾನಸಭೆ ಕ್ಯಾಂಪಸ್‌ಗೆ ತಂತ್ರಜ್ಞಾನವಿಧಾನಸಭೆ ಕ್ಯಾಂಪಸ್‌ಗೆ ಆಧುನಿಕ ತಂತ್ರಜ್ಞಾನ ಅಳವಡಿಸುತ್ತೇವೆ. ಜನರೂ ಸುಲಭವಾಗಿ ಬಂದು ಹೋಗಬೇಕು. ಜನರ ಹಾಗೂ ಅಧಿಕಾರಿಗಳ ಶ್ರಮ ವ್ಯರ್ಥವಾಗಬಾರದು. ಆ ರೀತಿ ವ್ಯವಸ್ಥೆ ಮಾಡಬೇಕಿದೆ. ಆನ್‌ಲೈನ್ ಮೂಲಕ ಅರ್ಜಿ ಹಾಕಿ ಬರಲು ಹಾಗೂ ಪ್ರವೇಶ ದ್ವಾರದಲ್ಲೇ ಲಾಕರ್ ಮಾಡಿ ಬ್ಯಾಗ್‌ಗಳನ್ನು ಇಟ್ಟು ಬರೀ ಪೆನ್ನು ಪೇಪರ್ ಮಾತ್ರ ಒಳಗೆ ತರಲು ಅವಕಾಶ ಕಲ್ಪಿಸಬೇಕಿದೆ. ಈ ನಿಟ್ಟಿನಲ್ಲಿ ಚರ್ಚೆ ನಡೆದಿದೆ ಎಂದು ಹೇಳಿದರು.ಪ್ರೆಸ್ ಕ್ಲಬ್ ಆ್ ಬೆಂಗಳೂರು ಅಧ್ಯಕ್ಷ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಬಿ.ಪಿ.ಮಲ್ಲಪ್ಪ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
