ನ್ಯಾಷನಲ್​ ಲಾ ಸ್ಕೂಲ್​ ಆಫ್​ ಇಂಡಿಯಾ ಯೂನಿರ್ವಸಿಟಿ (ಎನ್​ಎಲ್​ಎಸ್​ಐಯು) ಕನ್ಸಲ್ಟೆಂಟ್ಸ್​ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಡಿ.3ರರೊಳಗೆ ಅರ್ಜಿ ಸಲ್ಲಿಸಬೇಕಾಗಿದ್ದು, ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶ ಸದುಪಯೋಗ ಪಡಿಸಿಕೊಳ್ಳಬಹುದು.
ಹುದ್ದೆಯ ಹೆಸರು: ಕನ್ಸಲ್ಟೆಂಟ್ಸ್​:ಸ್ಥಳ: ಸಿಸಿಎಲ್​, ಎಲ್​ಎಲ್​ಎಸ್​ಐಯು ಆ್ಯಂಡ್​ ಅಬ್ಸರ್​ವೇಷನ್​ ಹೋಂ, ಮಡಿವಾಳ.ವೇತನ: ಅಭ್ಯರ್ಥಿಯ ವಿದ್ಯಾರ್ಹತೆ ಮತ್ತು ಅನುಭವ ಆಧರಿಸಿರುತ್ತದೆ.
ಶೈಕ್ಷಣಿಕ ಅರ್ಹತೆ:ಅಧಿಸೂಚನೆ ಪ್ರಕಾರ, ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಾನೂನು, ಸಮಾಜ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಅಥವಾ ಯಾವುದೇ ತತ್ಸಮಾನ ಪದವಿ ಹೊಂದಿರಬೇಕು. ಅಷ್ಟೇ ಅಲ್ಲ, ಭಾರತೀಯ ಕ್ರಿಮಿನಲ್​ ಕಾನೂನು ಮತ್ತು ವಿಚಾರಣೆಯ ಹಂತಗಳ ಮೂಲಭೂತ ತಿಳಿವಳಿಕೆ, ಕಾನೂನು ಸಂಶೋಧನೆ ಮತ್ತು ಡೇಟಾ ಮ್ಯಾಪಿಂಗ್​ನಲ್ಲಿ 2 ರಿಂದ 3 ವರ್ಷಗಳ ಅನುಭವ, ಬಾಲಾಪರಾಧಿ ಅಥವಾ ವಯಸ್ಕ ಕ್ರಿಮಿನಲ್​ ನ್ಯಾಯ ವ್ಯವಸ್ಥೆ ಹಾಗೂ ಪೆಂಡೆನ್ಸಿಯಲ್ಲಿ ಕೆಲಸ ಮಾಡಿದ ಅನುಭವ ಇರುವವರು ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಏನೆಲ್ಲಾ ಕೆಲಸ ಇರುತ್ತದೆ?:ಅಭ್ಯರ್ಥಿಗಳು ಹುದ್ದೆಗೆ ಆಯ್ಕೆಯಾದ ನಂತರ ಸಂಶೋಧನಾ ಸಾಧನ ಬಳಸಿಕೊಂಡು ವಿಚಾರಣೆ ಪ್ರಕ್ರಿಯೆಯ ಪ್ರಮುಖ ಹಂತಗಳನ್ನು ಮ್ಯಾಪಿಂಗ್​ ಮಾಡುವುದು, ವಿಚಾರಣೆ ಪ್ರಕ್ರಿಯೆಯಲ್ಲಿ ವಿಳಂಬಕ್ಕೆ ಕಾರಣಗಳನ್ನು ಸೆರೆಹಿಡಿಯುವುದು, ಎಕ್ಸೆಲ್​ ಬಳಸಿ ಡೇಟಾ ವಿಶ್ಲೇಷಿಸುವುದು, ಪ್ರಾಥಮಿಕ ಕರಡು ವರದಿಯನ್ನು ಸಿದ್ಧಪಡಿಸಬೇಕಾಗುತ್ತದೆ.
ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?:ಗುಣಾತ್ಮಕ ಮತ್ತು ಪರಿಮಾಣಾತ್ಮಕ ಡೇಟಾವನ್ನು ನಿರ್ವಹಿಸುವಲ್ಲಿ ಅನುಭವ, ಮೈಕ್ರೋಸಾಫ್ಟ್​ ಆಫೀಸ್​ನಲ್ಲಿ ಪ್ರಾವಿಣ್ಯತೆ ವಿಶೇಷವಾಗಿ ಎಕ್ಸೆಲ್​ನಲ್ಲಿ, ಅತ್ಯುತ್ತಮ ಮೌಖಿಕ ಮತ್ತು ಲಿಖಿತ ಸಂವಹನ ಕೌಶಲಗಳನ್ನು ಹೊಂದಿರುವ, ಕನ್ನಡ ಮತ್ತು ಇಂಗ್ಲಿಷ್​ ಮಾತನಾಡುವ, ಓದುವ ಮತ್ತು ಬರೆಯುವ ಪ್ರಾವಿಣ್ಯತೆ ಇರುವವರು ಕನ್ಸಲ್ಟೆಂಟ್ಸ್​ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ:ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಪರಿಶೀಲಿಸಿದ ನಂತರ ನಿಗದಿತ ಅರ್ಜಿ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ರೆಸ್ಯೂಮ್​ ಅನ್ನು ಇ-ಮೇಲ್​ ಐಡಿIw cclnls.ac.inಇಲ್ಲಿಗೆ ಡಿ.3ರೊಳಗೆ ಕಳುಹಿಸಬೇಕು. ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 3.12.2022ಅಧಿಸೂಚನೆಗೆ:http://bit.ly/3FfyDg4ಮಾಹಿತಿಗಾಗಿ:https://www.nls.ac.in/
ಕುಡಿದು ನಡುರಸ್ತೆಯಲ್ಲಿ ತೂರಾಡ್ತಿದ್ದವನನ್ನು ಹಿಂಬಾಲಿಸಿದ ಪೊಲೀಸರಿಗೆ ಶಾಕ್​! ಆತನ ಕೈಯಲ್ಲಿತ್ತು ಲಕ್ಷ ಲಕ್ಷ ಹಣ, ಕೆಜಿಗಟ್ಟಲೆ ಬಂಗಾರ

ಮಂಡ್ಯದಲ್ಲಿ 3 ಮಕ್ಕಳಿಗೆ ವಿಷವುಣಿಸಿ ದುರಂತ ಅಂತ್ಯ ಕಂಡ ನರ್ಸ್​! ಪ್ರೀತಿಸಿ ಮದ್ವೆಯಾದಾಕೆಯ ಬಾಳಲ್ಲಿ ಗಂಡ ಆಡಿದ ಆಟ ಅಷ್ಟಿಷ್ಟಲ್ಲ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
