ಬೆಂಗಳೂರು:ಎಂಆರ್​ಪಿಗಿಂತ ಹೆಚ್ಚು ಬೆಲೆಗೆ ಶಾಂಪೂ ಮಾರಾಟ ಮಾಡಿದ ಫ್ಲಿಪ್​ಕಾರ್ಟ್​ ಕಂಪನಿಗೆ ಗ್ರಾಹಕ ನ್ಯಾಯಾಲಯ ಶಾಕ್​ ನೀಡಿದ್ದು, ಸಂತ್ರಸ್ತ ಮಹಿಳೆಗೆ ಪರಿಹಾರವಾಗಿ 20000 ರೂಪಾಯಿ ನೀಡುವಂತೆ ಖಡಕ್​ ಸೂಚನೆ ನೀಡಿದೆ.
96 ರೂ. ಬೆಲೆಯ ಶಾಂಪೂಗೆ 199 ರೂ. ಚಾರ್ಜ್​​ ಮಾಡಿದ್ದಕ್ಕೆ ಬೆಂಗಳೂರಿನ ಗುಟ್ಟಹಳ್ಳಿ ಮೂಲದ ಸೌಮ್ಯ ಫ್ಲಿಪ್​ಕಾರ್ಟ್​ ವಿರುದ್ಧ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದರು. ಈ ಸಂಬಂಧ ತೀರ್ಪು ನೀಡಿರುವ ನ್ಯಾಯಾಲಯ, 20 ಸಾವಿರ ರೂ. ಪರಿಹಾರದೊಂದಿಗೆ ಹೆಚ್ಚುವರಿ 96 ರೂ. ಅನ್ನು ಹಿಂದಿರುಗಿಸಬೇಕೆಂದು ಆದೇಶಿಸಿದೆ.
2019ರಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯ ಈಗ ತೀರ್ಪು ನೀಡಿದೆ. ಬಿಗ್​ ಬಿಲಿಯನ್ಸ್​ ಡೇಸ್​ ಸೇಲ್​ ಸಂದರ್ಭದಲ್ಲಿ ಫ್ಲಿಪ್​ಕಾರ್ಟ್​ ಆಫರ್​ಗಳ ಲೀಸ್ಟ್​ನಲ್ಲಿ ಶಾಂಪೂ​ವನ್ನು ಇರಿಸಿತ್ತು. ಅಕ್ಟೋಬರ್ 3ರಂದು ಮಹಿಳೆ ಫೋನ್ ಪೇ ಮೂಲಕ ಶಾಂಪೂಗೆ 190 ರೂ. ಪಾವತಿಸಿದರು. ಶಾಂಪೂ ಪಡೆದ ನಂತರ ಶಾಂಪೂ ಮೂಲ ಬೆಲೆ ಅಂದರೆ, ಎಂಆರ್​ಪಿ ಕಡಿಮೆ ಇರುವುದನ್ನು ಸೌಮ್ಯ ಅರಿತುಕೊಂಡರು. ಅಲ್ಲದೆ, ತನ್ನ ಸಂದೇಹವನ್ನು ನಿವಾರಿಸಿಕೊಳ್ಳಲು ಸೌಮ್ಯಾ ಮತ್ತೊಮ್ಮೆ ಫ್ಲಿಪ್​ಕಾರ್ಟ್​ ಆ್ಯಪ್​ ಅನ್ನು ಪರಿಶೀಲಿಸಿದರು. ಈ ವೇಳೆ ಶಾಂಪೂ ಬೆಲೆ 140 ರೂ. ಮತ್ತು ಶಿಪ್ಪಿಂಗ್ ಶುಲ್ಕ 99 ರೂ. ಇರುವುದನ್ನು ನೋಡಿದ್ದಾರೆ.
ಇದರ ಬೆನ್ನಲ್ಲೇ ಮಹಿಳೆ ಫ್ಲಿಪ್‌ಕಾರ್ಟ್ ಕಸ್ಟಮರ್ ಕೇರ್ ಸಂಪರ್ಕಿಸಿದ್ದಾರೆ. ಮರುಪಾವತಿಗಾಗಿ ಶಾಂಪೂವನ್ನು ಹಿಂತಿರುಗಿಸಬಹುದು ಎನ್ನುವ ಮೂಲಕ ಕಸ್ಟಮರ್ ಕೇರ್ ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ, ಫ್ಲಿಪ್‌ಕಾರ್ಟ್ ಮಾರಾಟಗಾರರಾದ ಸೂರತ್‌ನ HBK ಎಂಟರ್‌ಪ್ರೈಸ್ ವಿರುದ್ಧ ಫ್ಲಿಪ್​ಕಾರ್ಟ್​ ಯಾವುದೇ ಕ್ರಮ ಕೈಗೊಂಡಿಲ್ಲ. ಇದಾದ ಬಳಿಕ ಸೌಮ್ಯ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ ಮತ್ತು ಫ್ಲಿಪ್​ಕಾರ್ಟ್​ ನ್ಯಾಯಾಲಯ ದಂಡದ ಬರೆ ಎಳೆದಿದೆ.(ಏಜೆನ್ಸೀಸ್​)
BBKS10: ಆ ಪದ ಬಳಸಿದ್ರೆ ಆದೇಶ ಹೊರಡಿಸಿ ಈಗಲೇ ಹೊರ ಹೋಗ್ತೀನಿ!; ಕಣ್ಣೀರಿಟ್ಟ ಕಾರ್ತಿಕ್

ಏನ್​ ಗುರಾಯಿಸೋದು! ಮೈದಾನದಲ್ಲೇ ಕ್ರಿಕೆಟಿಗರ ಕಿತ್ತಾಟ, ಶ್ರೀಶಾಂತ್ ಆರೋಪಕ್ಕೆ ಗಂಭೀರ್​ ನಗುವಿನ ಉತ್ತರ​

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:13 − 7 =
Remember me
