ದಾವಣಗೆರೆ:ಕರೊನಾ ವೈರಸ್‌ನ ಈ ಬಿಕ್ಕಟ್ಟಿನ ದಿನಗಳಲ್ಲಿ ಮದುವೆ ಮಾಡಬೇಡಿ, ಸಮಾರಂಭ ಏರ್ಪಡಿಸಬೇಡಿ ಎಂದು ಎಷ್ಟು ಘೋಷಣೆ ಮಾಡಿದರೂ ಕೆಲವರು ಅದನ್ನು ಕಿವಿಯ ಮೇಲೆ ಹಾಕಿಕೊಳ್ಳುತ್ತಲೇ ಇಲ್ಲ.
.ಇದೀಗ ದಾವಣಗೆರೆಯಲ್ಲಿ ಅದ್ಧೂರಿಯಾಗಿ ವಿವಾಹವನ್ನು ನೆರವೇರಿಸಲಾಗಿದೆ. ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಈ ವಿವಾಹ ಆಗಿರುವುದು ಕಂಟೈನ್‌ಮೆಂಟ್‌ ಏರಿಯಾದಲ್ಲಿ. ಇಸ್ಮಾಯಿಲ್ ಸಾಬ್ ಎನ್ನುವರ ಮೊಮ್ಮಗಳ ನಿಖಾ ಇದಾಗಿದೆ.
ಕರೊನಾ ಸೋಂಕಿನಿಂದ ಅತಿ ಹೆಚ್ಚು ಜನರು ಒಂದು ಪ್ರದೇಶದಲ್ಲಿ ಬಳಲುತ್ತಿದ್ದರೆ ಆ ಪ್ರದೇಶವನ್ನು ಕಂಟೈನ್‌ಮೆಂಟ್‌ ಝೋನ್‌ ಎಂದು ಹೇಳಲಾಗುತ್ತದೆ. ಇದು ನಿಷೇಧಿತ ಪ್ರದೇಶ. ಕರೊನಾ ವೈರಸ್‌ ವ್ಯಾಪಕವಾಗಿ ಹರಡುವಲ್ಲಿ ಇಂಥ ಪ್ರದೇಶಗಳು ಬಹು ದೊಡ್ಡ ಪಾತ್ರ ವಹಿಸುತ್ತವೆ. ಆದರೆ ಇದೇ ಪ್ರದೇಶದಲ್ಲಿ ಇದೀಗ ಭರ್ಜರಿಯಾಗಿಯೇ ಮದುವೆ ನಡೆದಿರುವುದು ಸುತ್ತಲಿನ ಪ್ರದೇಶದ ಜನರನ್ನು ಆತಂಕಕ್ಕೆ ಈಡು ಮಾಡಿದೆ.
ಇದನ್ನೂ ಓದಿ:ಕರೊನಾಕ್ಕೆ ಬಲಿಯಾದ ಶಾಸಕ ಜಮೀರ್ ಆಪ್ತ- ರಾಮ್‌ದಾಸ್‌ ಆಪ್ತರಿಗೆ ಜ್ವರ
ದಾವಣಗೆರೆ ಜಿಲ್ಲೆಯ ಹರಿಹರದ ಗಾಂಧಿನಗರ ಕಂಟೈನ್ಮೆಂಟ್ ಏರಿಯಾದಲ್ಲಿ ಈ ಮದುವೆ ನಡೆದಿದೆ. ಇಸ್ಮಾಯಿಲ್ ಸಾಬ್ ಎನ್ನುವವರ ಮೊಮ್ಮಗಳ ಮದುವೆ ನಡೆದಿದೆ. ಈ ಬಗ್ಗೆ ದೂರು ದಾಖಲಾಗುತ್ತಿದ್ದಂತೆಯೇ ಮದುವೆ ಮುಗಿದ ನಂತರ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.
ಆದರೂ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ ಎನ್ನುವುದು ಕೆಲವರ ಆಕ್ರೋಶ.
‌ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಪುತ್ರನಿಗೂ ಕರೊನಾ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 + two =
Remember me
