ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದಲ್ಲಿ ಏಕೈಕ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿದ್ದು, ಸಮುದಾಯವಾರು ಆದ್ಯತೆ ನೀಡಲು ಇನ್ನೂ ಮೂರು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಯಾಗಬೇಕು ಎಂಬ ಕೂಗು ದಿನ ದಿನಕ್ಕೂ ಹೆಚ್ಚಾಗುತ್ತಿದೆ.ಸಂಪುಟ ಸದಸ್ಯರೇ ಒಬ್ಬೊಬ್ಬರಾಗಿ ಸರತಿ ಮೇಲೆ ಅಭಿಪ್ರಾಯ ಹೊರಹಾಕುತ್ತಿದ್ದು, ಹೈಕಮಾಂಡ್ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಕಳೆದೊಂದು ವಾರದಿಂದ ನಡೆದಿರುವ ಬೆಳವಣಿಗೆ ಬಗ್ಗೆ ವರದಿ ಪಡೆದುಕೊಂಡಿದ್ದು, ಮೂಲ ಕಾರಣದ ಹುಡುಕಾಟ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈಗಾಗಲೇ ಆರು ಸಚಿವರು, ಕೆಲವು ಶಾಸಕರು ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಪ್ರತಿಕ್ರಿಯೆ ನೀಡಿ ಚರ್ಚೆಯನ್ನು ಮುಂದುವರಿಸಿದ್ದಾರೆ. ಇದು ಪಕ್ಷದೊಳಗಿನ ಶೀತಲ ಸಮರಕ್ಕೂ ಮುನ್ನುಡಿ ಬರೆದಂತೆ ಕಾಣಿಸುತ್ತಿದೆ.ದಲಿತ, ಮುಸ್ಲಿಮರಿಗೂ ಉಪ ಮುಖ್ಯಮಂತ್ರಿ ಸ್ಥಾನ ಕೊಡಬೇಕೆಂಬ ಬೇಡಿಕೆ ಸರ್ಕಾರ ರಚನೆಗೆ ಮುನ್ನ ಕೇಳಿಬಂದಿತ್ತು. ಬಳಿಕ ಗೌಣವಾಗಿತ್ತು. ಆದರೆ ಇತ್ತೀಚೆಗೆ ಸಹಕಾರ ಸಚಿವ ರಾಜಣ್ಣ ಅವರು ಈ ವಿಚಾರ ಬಹಿರಂಗವಾಗಿ ವ್ಯಕ್ತಪಡಿಸಿದರು. ಬಳಿಕ ಸಚಿವ ನಾಗೇಂದ್ರ ಕೂಡ ಅದೇ ದಾಟಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.ಇದೀಗ ಸಣ್ಣ ನೀರಾವರಿ ಸಚಿವ ಬೋಸರಾಜು ಮತ್ತು ಗೃಹ ಸಚಿವ ಜಿ.ಪರಮೇಶ್ವರ ಕೂಡ ದನಿಗೂಡಿಸಿದ್ದಾರೆ.
ಕೆ.ಎನ್. ರಾಜಣ್ಣ ಹೇಳಿರುವಂತೆ ಮೂವರು ಡಿಸಿಎಂ ಬೇಡಿಕೆ ಬಗ್ಗೆ ಮುಖ್ಯಮಂತ್ರಿಯವರೇ ಉತ್ತರ ಕೊಡಬೇಕು ಎಂದು ಪ್ರತಿಕ್ರಿಯಿಸಿದ್ದ ಡಿ.ಕೆ ಶಿವಕುಮಾರ್ ಬುದ್ಧಿವಂತಿಕೆ ಪ್ರದರ್ಶಿಸಿದ್ದರು. ಇದೇ ರೀತಿ, ಸಿಎಂ ಸಿದ್ದರಾಮಯ್ಯ ಕೂಡ ಜಾಣ ನಡೆ ಅನುಸರಿಸಿ, ಈ ವಿಷಯದಲ್ಲಿ ಹೈಕಮಾಂಡ್ ಏನು ಹೇಳುತ್ತದೋ ಹಾಗೆ ನಾನು ನಡೆದುಕೊಳ್ಳುತ್ತೇನೆಂದು ಪ್ರತಿಕ್ರಿಯಿಸಿದ್ದರು.ಇನ್ನು ಸುದ್ದಿವಾಹಿನಿ ಪ್ರತಿನಿಧಿ ಈ ವಿಚಾರ ಎತ್ತಿದಾಗ ‘ತಲೆ ಕಟ್ಟಿದೆಯೇ?’ ಡಿಸಿಎಂ ಶಿವಕುಮಾರ್ ಅಸಹನೆಯನ್ನೂ ವ್ಯಕ್ತಮಾಡಿದ್ದು ಗಮನ ಸೆಳೆದಿದೆ.
ಇನ್ನಷ್ಟು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕು ಎಂಬ ಬಹಿರಂಗ ಚರ್ಚೆಗೆ ಗೃಹ ಸಚಿವ ಜಿ. ಪರಮೇಶ್ವರ ಧುಮುಕಿ, ಕಾವು ಹೆಚ್ಚಿಸಿದ್ದಾರೆ.ಸಮುದಾಯವಾರು ಪ್ರಾತಿನಿಧ್ಯ ನೀಡಬೇಕು. ರಾಜಣ್ಣರ ವಾದವನ್ನ ನಾನೂ ಒಪ್ಪುತ್ತೇನೆ. ಅವಕಾಶ ಕೊಟ್ಟರೆ ಯಾರು ಬೇಡ ಎನ್ನುತ್ತಾರೆ ಎಂದು ಪರಮೇಶ್ವರ ಹೇಳಿದರು. ಹೈಕಮಾಂಡ್ ಹೇಳಿದರೆ ಮಾಡುತ್ತೇನೆ ಎಂಬ ಸಿಎಂ ಹೇಳಿಕೆ ಸರಿಯಾಗಿದೆ. ನಮ್ಮ ಪಕ್ಷದಲ್ಲಿ ಹೈಕಮಾಂಡ್ ಸುಪ್ರೀಂಅಂತಿಮವಾಗಿ ಮೂರು ಡಿಸಿಎಂ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು.ಲೋಕಸಭಾ ಚುನಾವಣೆ ಬರುತ್ತಿದೆ ಸಮುದಾಯವಾರು ಇನ್ನಷ್ಟು ಪ್ರಾತಿನಿಧ್ಯ ಕೊಡಬೇಕೆಂದು ರಾಜಣ್ಣ ಹೇಳಿದ್ದಾರೆ. ಇದನ್ನ ಹೈಕಮಾಂಡ್ ಅರ್ಥ ಮಾಡಿಕೊಳ್ಳಬೇಕಲ್ಲವೇ ಎಂದು ಹೇಳಿದ ಅವರು, ಪ್ರಾತಿನಿಧ್ಯ ಕೊಟ್ಟರೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಪಕ್ಷದ ಜತೆ ನಿಲ್ಲುತ್ತಾರೆಂಬುದು ರಾಜಣ್ಣ ವಾದ. ಇದನ್ನ ನಾನೂ ಕೂಡ ಒಪ್ಪುತ್ತೇನೆ. ಪ್ರಾತಿನಿಧ್ಯ ಕೊಟ್ಟಿದೆ ಕೆಲಸ ಮಾಡಿ ಅಂತಾ ಜವಾಬ್ದಾರಿ ನೀಡಬಹುದು. ಡಿಸಿಎಂ ವಿಚಾರವಾಗಿ ನಾನೇ ಹೈಕಮಾಂಡ್ ಬಳಿ ನೇರವಾಗಿ ತೆರಳಿ ಕೇಳುತ್ತೇನೆ, ಇದರಲ್ಲಿ ವೈಯಕ್ತಿಕ ಪ್ರಶ್ನೆ ಇಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಮೂವರು ಉಪ ಮುಖ್ಯಮಂತ್ರಿಗಳನ್ನು ಮಾಡಿದರೆ ತಪ್ಪೇನಿಲ್ಲ. ಅನೇಕ ರಾಜ್ಯಗಳಲ್ಲಿ ಮೂರು ಡಿಸಿಎಂಗಳಿದ್ದಾರೆ. ಮಾಡಿದರೂ ನಡೆಯುತ್ತೆ, ಮಾಡದಿದ್ದರೂ ನಡೆಯುತ್ತದೆ.– ಬೋಸರಾಜು, ಸಣ್ಣ ನೀರಾವರಿ ಸಚಿವ
ಹೊಸ ಡಿಸಿಎಂ ಹುದ್ದೆಗಳ ಸೃಷ್ಟಿ, ಪೂರ್ಣಾವಧಿ ಸಿಎಂ ಮತ್ತಿತರ ವಿಚಾರಗಳ ಕುರಿತು ಬಹಿರಂಗ ಚರ್ಚೆ ಅಗತ್ಯವಿಲ್ಲ. ಸಿದ್ದರಾಮಯ್ಯ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲರೂ ಅವರ ಜತೆಗಿದ್ದೆವೆ.– ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
