ಬೆಂಗಳೂರು:ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ಮುರ್ನಾಲ್ಕು ದಿನಗಳಿಂದ ನಗರದ ಹಲವೆಡೆ ಸುರಿಯುತ್ತಿರುವ ಮಳೆ ಸೋಮವಾರವೂ ಮುಂದುವರಿದಿದೆ.
ಇದನ್ನೂ ಓದಿ:ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ನಿಧನ
ಮಧ್ಯಾಹ್ನ ಮಾದವಾರ ಸೇರಿ ಕೆಲ ಪ್ರದೇಶಗಳಲ್ಲಿ ಬಿರುಸಾಗಿ ಮಳೆ ಬಿದ್ದರೆ, ಇನ್ನೂ ಕೆಲವೆಡೆ ಮೋಡ ಕವಿದ ವಾತಾವರಣ ಇತ್ತು. ರಾತ್ರಿ 11ಗಂಟೆಗೆ ಚಾಮರಾಜಪೇಟೆ, ಬಸವನಗುಡಿ, ವಿದ್ಯಾಪೀಠ, ಜೆ.ಪಿ.ನಗರ, ಜಯನಗರ, ಇಟ್ಟಮಡು, ಮೈಸೂರು ರಸ್ತೆ, ಕೃಷ್ಣರಾಜೇಂದ್ರ ಮಾರುಕಟ್ಟೆ, ಲಾಲ್‌‌ಬಾಗ್ ಸೇರಿ ನಗರದ ಹಲವೆಡೆ ಗುಡುಗು ಸಹಿತ ವರುಣಾರ್ಭಟ ಜೋರಾಗಿತ್ತು. ರಸ್ತೆ ಮೇಲೆ ನೀರು ಹರಿದ ಪರಿಣಾಮ ವಾಹನ ಸವಾರರಿಗೆ ತೊಂದರೆಯಾಯಿತು.‌
ಸತತ ಮಳೆಯಿಂದಾಗಿ ಬಿಸಿಲಿನ ತಾಪಕ್ಕೆ ತತ್ತರಿಸಿದ್ದ ರಾಜಧಾನಿಯಲ್ಲಿ ತಂಪಾದ ವಾತಾವರಣ ಕಂಡುಬರುತ್ತಿದೆ. ಮಾರ್ಚ್‌‌‌ನಿಂದ ವಾಡಿಕೆಗಿಂತ ಹೆಚ್ಚು ದಾಖಲಾಗುತ್ತಿದ್ದ ತಾಪಮಾನವೂ ಇಳಿಮುಖವಾಗುತ್ತಿದೆ. ರಾತ್ರಿ ವೇಳೆ ಸಖೆಯ ಅನುಭವ ಕಡಿಮೆಯಾಗಿದೆ.
ಸಾಧಾರಣ ಮಳೆ:ನಗರದಲ್ಲಿ ಮುಂದಿನ 4ದಿನ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಮೋಡ ಕವಿದ ವಾತಾವರಣ ಇರಲಿದ್ದು, ಚದರಿದಂತೆ ಮಳೆಯೂ ಬೀಳಲಿದೆ.
ಸರ್ವಾಧಿಕಾರಿಯ ಮತ್ತೊಂದು ವಿಚಿತ್ರ ಆದೇಶ: ಉತ್ತರ ಕೊರಿಯಾದಲ್ಲಿ ರೆಡ್​ ಲಿಪ್​ಸ್ಟಿಕ್ ಬ್ಯಾನ್! ನಿಯಮ ಉಲ್ಲಂಘಿಸಿದರೆ…?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − four =
Remember me
