ಹುಬ್ಬಳ್ಳಿ:ಸರ್ಕಾರಗಳ ತಿಕ್ಕಾಟದ ನಡುವೆ ಗುತ್ತಿಗೆದಾರರು ಸಂಕಷ್ಟದಲ್ಲಿ ಸಿಲುಕಿದ್ದು ಕಳೆದ ಎರಡು ವರ್ಷಗಳಿಂದ ಕಾಮಗಾರಿ ಬಿಲ್​ಗಳ ಬಾಕಿ ಹಣ ಗುತ್ತಿಗೆದಾರರ ಕೈ ಸೇರಿಲ್ಲ.
ಅಭಿವೃದ್ದಿ ಕಾಮಗಾರಿಗಳು ಮುಗಿದರೂ ಕೋಟ್ಯಾಂತರ ರೂಪಾಯಿ ಬಿಲ್ ಬಾಕಿ ಇದ್ದು ಹಣ ಇನ್ನೂ ಬಿಡುಗಡೆ ಆಗಿಲ್ಲ. ಧಾರವಾಡ ಜಿಲ್ಲೆಯಲ್ಲಿ ಕಳೆದ ಎರಡೂ ವರ್ಷಗಳಿಂದ ಗುತ್ತಿಗೆದಾರರಿಗೆ ನಯಾಪೈಸೆ ಬಿಡುಗಡೆ ಆಗಿಲ್ಲ ಎನ್ನಲಾಗುತ್ತಿದೆ. ಧಾರವಾಡ ಜಿಲ್ಲೆಯ ಗುತ್ತಿಗೆದಾರರಿಗೆ ಸುಮಾರು 315 ಕೋಟಿ ಬಾಕಿ ಬಿಡುಗಡೆಯಾಗಬೇಕಿದೆ. ಇನ್ನು ಹಣ ಬಿಡುಗಡೆ ಆಗದ ಕಾರಣ ನೂರಾರು ಕಾಮಗಾರಿಗಳು‌ ಅರ್ಧಕ್ಕೆ ನಿಂತಿವೆ.
ಬಸವರಾಜ ಬೊಮ್ಮಾಯಿ ಸರ್ಕಾರ, ಬೇಕಾಬಿಟ್ಟಿಯಾಗಿ ಟೆಂಡರ್ ಕರೆದಿದ್ದಾರೆ ಎಂದು ಆರೋಪಿಸಲಾಗುತ್ತಿದ್ದು, ಈ ಹಿಂದಿನ ಸರ್ಕಾರ ಮಾಡಿದ ಎಡವಟ್ಟಿನಿಂದ ಗುತ್ತಿಗೆದಾರರು ಸಂಕಷ್ಟಕ್ಕೆ ಈಡಾಗಿದ್ದಾರೆ ಎನ್ನಲಾಗಿದೆ.
ಇದೀಗ ಕಾಮಗಾರಿಗಳನ್ನ ಮುಗಿಸಿ ವರ್ಷಗಳೇ ಕಳೆದ್ರೂ ಬಿಲ್‌ ಬಿಡುಗಡೆ ಆಗುತ್ತಿಲ್ಲ. ಬಿಲ್‌ಗಾಗಿ ಕಚೇರಿ ಅಲೆದು ಅಲೆದು ಗುತ್ತಿಗೆದಾರರು ಸುಸ್ತಾಗಿ ನಿಂತಿದ್ದಾರೆ. ಇದೀಗ ಅವರು ಸಿದ್ದರಾಮಯ್ಯ ಸರ್ಕಾರವಾದ್ರೂ ಹಣ ಬಿಡುಗಡೆ ಮಾಡಲಿ ಎನ್ನುತ್ತಿದ್ದಾರೆ. ಆದರೆ ಒಂದೆಡೆ ಗ್ಯಾರಂಟಿ‌ ಯೋಜನೆಗಳಿಗೆ ಹಣ ಹೊಂದಿಸಲು ಸಿದ್ದು ಸರ್ಕಾರ ಹೆಣಗಾಟ ನಡೆಸುತ್ತಿದ್ದು ಹಣ ಯಾವಾಗ ಬಿಡುಗಡೆ ಆಗಬಹುದು ಎನ್ನುವುದು ಇನ್ನೂ ತಿಳಿಯುತ್ತಿಲ್ಲ.(ದಿಗ್ವಿಜಯ ನ್ಯೂಸ್ ಮಾಹಿತಿ)
ಕಲುಷಿತ ನೀರು ಸೇವನೆಗೆ ಜನ ಅಸ್ವಸ್ಥ; ಪಿಡಿಒ ಅಮಾನತು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
