|ರುದ್ರಣ್ಣ ಹರ್ತಿಕೋಟೆ ಬೆಂಗಳೂರುಲವ್ ಜಿಹಾದ್ ಹಾಗೂ ಅದರ ಮೂಲಕ ಉಗ್ರ ಸಂಘಟನೆಗಳನ್ನು ಬಲಪಡಿಸುವಂತಹ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧವನ್ನು ಜಾರಿಗೆ ತರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಉತ್ತರ ಪ್ರದೇಶ ಸರ್ಕಾರ ಈಗಾಗಲೇ ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿ ಮಾಡಿ ಮೊದಲ ಪ್ರಕರಣ ದಾಖಲಿಸಿದೆ. ಆದರೆ ರಾಜ್ಯದಲ್ಲಿ ಯಾವುದೇ ಸಿದ್ಧತೆ ಆರಂಭವಾಗದಿರುವ ಹಿನ್ನೆಲೆಯಲ್ಲಿ ವಿಧಾನಮಂಡಲ ಅಧಿವೇಶನ ಮುಗಿದ ಕೂಡಲೇ ಸುಗ್ರೀವಾಜ್ಞೆ ಮೂಲಕವೇ ಜಾರಿಗೆ ತರಲಾಗುತ್ತದೆ.
ರಾಜ್ಯದಲ್ಲಿ 2019ರಲ್ಲೇ ಲವ್ ಜಿಹಾದ್ ಸದ್ದು ಮಾಡಿತ್ತು. ಕರ್ನಾಟಕ ಹಾಗೂ ಕೇರಳದಲ್ಲಿ ಸಾವಿರಾರು ಲವ್ ಜಿಹಾದ್ ಪ್ರಕರಣಗಳು ನಡೆದಿವೆ. ಅದರ ಮೂಲಕ ಭಯೋತ್ಪಾದನೆ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಲಾಗಿದೆ ಎಂಬ ದೂರುಗಳೂ ಇವೆ. ಆಗಿನಿಂದಲೂ ರಾಜ್ಯದಲ್ಲಿ ಬಲವಂತದ ಮತಾಂತರ ನಿಷೇಧದ ಒತ್ತಡಗಳಿವೆ.
ಶುರುವಾಗದ ಸಿದ್ಧತೆ:ಉತ್ತರ ಪ್ರದೇಶ ಹಾಗೂ ಹರಿಯಾಣ ಸರ್ಕಾರಗಳು ಲವ್ ಜಿಹಾದ್ ನಿಷೇಧಕ್ಕಾಗಿ ಕಾಯ್ದೆ ತರುವ ಬಗ್ಗೆ ಪ್ರಸ್ತಾಪ ಮಾಡಿದ ಸಂದರ್ಭದಲ್ಲೇ ರಾಜ್ಯದ ಬಿಜೆಪಿ ಮುಖಂಡರು ಇಲ್ಲಿಯೂ ಲವ್ ಜಿಹಾದ್ ನಿಷೇಧಿಸುವ ಮಾತನಾಡಿದ್ದರು. ಮಂಗಳೂರಿನಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿಯೂ ಮುಖ್ಯಮಂತ್ರಿ ಯಡಿಯೂರಪ್ಪ ಕಾನೂನು ತರುವ ಘೋಷಣೆ ಹೊರಡಿಸಿದ್ದರು. ಆದರೆ ನಂತರ ಸಂಬಂಧಪಟ್ಟ ಇಲಾಖೆಗೆ ಸರ್ಕಾರದ ಕಡೆಯಿಂದ ವಿಧೇಯಕ ಸಿದ್ಧಪಡಿಸುವುದಕ್ಕೆ ಯಾವುದೇ ಸೂಚನೆ ಹೋಗಿಲ್ಲ. ವಿಧಾನಮಂಡಲ ಅಧಿವೇಶನ ಡಿ.7ರಂದು ಆರಂಭವಾಗಲಿದೆ. ಅಧಿವೇಶನದಲ್ಲಿ ವಿಧೇಯಕ ಮಂಡಿಸಲು ಸರ್ಕಾರ ಸಿದ್ಧವಾಗಿಲ್ಲ. ಆದ್ದರಿಂದಲೇ ಅಧಿವೇಶನ ಮುಗಿದ ನಂತರ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿ ಆರು ತಿಂಗಳೊಳಗೆ ನಡೆಯಲಿರುವ ವಿಧಾನಮಂಡಲದ ಜಂಟಿ ಅಥವಾ ಬಜೆಟ್ ಅಧಿವೇಶನದಲ್ಲಿ ವಿಧೇಯಕ ಮಂಡಿಸಿ ಕಾನೂನು ಜಾರಿಗೆ ನಿರ್ಧರಿಸಲಾಗಿದೆ.
ಅಧ್ಯಯನ ಆಗಬೇಕಿದೆ:ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಯಾಗದಿರುವುದಕ್ಕೆ ಉತ್ತರ ಪ್ರದೇಶದ ಸುಗ್ರೀವಾಜ್ಞೆ ಅಧ್ಯಯನ ನಡೆಯದಿರುವುದು, ಹರಿಯಾಣದಲ್ಲಿನ ಸಿದ್ಧತೆ ಬಗ್ಗೆ ಮಾಹಿತಿ ಪಡೆಯುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆನ್ನಲಾಗಿದೆ. ಉತ್ತರ ಪ್ರದೇಶದ ಸುಗ್ರೀವಾಜ್ಞೆ ಪ್ರತಿಯನ್ನು ಇನ್ನೂ ತರಿಸಿಕೊಂಡಿಲ್ಲ ಎಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ.
ವಿಧಾನಮಂಡಲ ಅಧಿವೇಶನ ಮುಗಿದ ಕೂಡಲೇ ಉತ್ತರ ಪ್ರದೇಶದ ಸುಗ್ರೀವಾಜ್ಞೆಯನ್ನು ತರಿಸಿ ಅಲ್ಲಿಗಿಂತ ಒಂದಷ್ಟು ಭಿನ್ನವಾಗಿ ಕಾಯ್ದೆ ರೂಪಿಸುವ ಬಗ್ಗೆ ಸರ್ಕಾರ ತೀರ್ವನಿಸಿದೆ. ಹರಿಯಾಣ ಸರ್ಕಾರ ರಚಿಸಿರುವ ತಜ್ಞರ ಸಮಿತಿಯ ತೀರ್ವನಗಳ ಬಗ್ಗೆಯೂ ಮಾಹಿತಿ ಪಡೆಯಲಾಗುತ್ತದೆ.
ತಿಂಗಳಲ್ಲಿ ಜಾರಿ:ಅಧಿವೇಶನ ಮುಗಿದ ಒಂದು ತಿಂಗಳೊಳಗಾಗಿ ಸುಗ್ರೀವಾಜ್ಞೆ ಜಾರಿಗೆ ಸರ್ಕಾರ ಚಿಂತನೆ ನಡೆಸಿದೆ.
ಉ.ಪ್ರದಲ್ಲಿ ಆಗಿದ್ದೇನು?ಕಾನ್ಪುರದಲ್ಲಿ 11 ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದ ತಕ್ಷಣವೇ ತನಿಖೆಯ ಜತೆಜತೆಗೆ ಕಾನೂನು ಆಯೋಗಕ್ಕೆ ಅಧ್ಯಯನ ನಡೆಸಲು ಸೂಚನೆ ನೀಡಲಾಯಿತು. ಮತಾಂತರದ ಜತೆಗೆ ಲವ್ ಜಿಹಾದ್ ತಡೆಯುವ ಬಗ್ಗೆ ಕಾನೂನು ಆಯೋಗ ನೇಪಾಳ, ಮ್ಯಾನ್ಮಾರ್, ಭೂತಾನ್, ಶ್ರೀಲಂಕಾ, ಪಾಕಿಸ್ತಾನದ ಕಾನೂನುಗಳನ್ನು ಅಧ್ಯಯನ ಮಾಡಿತು.
ಉತ್ತರ ಪ್ರದೇಶದಲ್ಲಿ ಏನಿದೆ ಶಿಕ್ಷೆ?
ಸಮಿತಿ ರಚನೆಗೆ ಒಲವುರಾಜ್ಯದಲ್ಲೂ ಕಾನೂನು ಆಯೋಗದಿಂದ ಸಲಹೆ ಪಡೆಯುವುದರ ಜತೆಗೆ ಸಂಪುಟ ಉಪ ಸಮಿತಿ ಹಾಗೂ ತಜ್ಞರ ಸಮಿತಿ ರಚನೆ ಮಾಡಿ ಸುಗ್ರೀವಾಜ್ಞೆ ಸಿದ್ಧಪಡಿಸಲು ಸರ್ಕಾರ ಚಿಂತನೆ ನಡೆಸಿದೆ.
ರಾಜ್ಯ ಸರ್ಕಾರದ ಯೋಚನೆಗಳೇನು?
ತೀರ್ಪಿನ ಪರಿಶೀಲನೆಮದುವೆ ಸ್ವಂತ ಇಚ್ಛೆ ಎಂಬಕೋರ್ಟ್ ತೀರ್ಪು ಗಮನದಲ್ಲಿಟ್ಟುಕೊಂಡೇ ಸುಗ್ರೀವಾಜ್ಞೆ ರೂಪಿಸುವುದು ಸರ್ಕಾರದ ಉದ್ದೇಶ. ಇಲ್ಲದಿದ್ದರೆ ಯಾರಾದರೂ ನ್ಯಾಯಾಲಯಕ್ಕೆ ಹೋದಲ್ಲಿ ಸೋಲಾಗಬಹುದೆಂಬ ಆತಂಕ ಇದೆ.
ಮತಾಂತರ ನಿಷೇಧ ಕಾಯ್ದೆ ತಂದೇ ತರುತ್ತೇವೆ. ಅದಕ್ಕೆ ಸಾಕಷ್ಟು ಸಿದ್ಧತೆ ಅಗತ್ಯವಿರುವುದರಿಂದ ಈ ಅಧಿವೇಶನದಲ್ಲಿ ಮಸೂದೆ ತರಲಾಗುತ್ತಿಲ್ಲ. ಉತ್ತರ ಪ್ರದೇಶದ ಸುಗ್ರೀವಾಜ್ಞೆ ಮತ್ತು ಹರಿಯಾಣದಲ್ಲಿ ರಚನೆಯಾಗಿರುವ ಸಮಿತಿ ವರದಿಯನ್ನು ಪರಿಶೀಲಿಸುತ್ತೇವೆ. ಹಾಗೆಯೇ ನ್ಯಾಯಾಲಯದ ಅಭಿಪ್ರಾಯ ಏನಿದೆ ಎಂಬುದನ್ನು ಗಮನಿಸುತ್ತೇವೆ.| ಬಸವರಾಜ ಬೊಮ್ಮಾಯಿಗೃಹ ಸಚಿವ
ಸಿದ್ದರಾಮಯ್ಯ ಅವರಿಗೆ ಕ್ರಾಸ್​ಬೀಡ್ ಬಗ್ಗೆ ಬಹಳ ಆಸಕ್ತಿ. ಅದು ಇಂದು ನಿನ್ನೆಯದಲ್ಲಿ ಅದು, ಇಂದಿರಾಗಾಂಧಿ ಅವರು ಯಾರನ್ನೋ ಮದುವೆಯಾಗಿದ್ದರು. ಸೋನಿಯಾ ಗಾಂಧಿ ಅವರನ್ನು ಇನ್ನು ಯಾರನ್ನೋ ಮದುವೆಯಾಗಿದ್ದರು. ಅವರದು ಇದೇ ಸಂತತಿ ತಾನೇ.| ಕೆ.ಎಸ್.ಈಶ್ವರಪ್ಪಸಚಿವ
ಕಾನೂನು ಅವಕಾಶವಿಲ್ಲ: ಸರ್ಕಾರದ ವಿರುದ್ಧ ಸಿದ್ದು ಆಕ್ರೋಶಮದುವೆ ಅವರವರ ವೈಯಕ್ತಿಕ ಆಯ್ಕೆ, ಬಿಜೆಪಿಯವರು ಲವ್ ಜಿಹಾದ್ ಕಾಯ್ದೆಯನ್ನು ವಿವೇಕವಿಲ್ಲದೆಯೇ ತರುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 21 ವರ್ಷ ತುಂಬಿದ ಯಾರಿಗಾದರೂ ಮದುವೆಯಾಗಲು ಸ್ವಾತಂತ್ರ್ಯವಿರುವುದಿಲ್ಲವೇ? ಇಂಥದ್ದೇ ಜಾತಿ, ಧರ್ಮದವರನ್ನು ಮದುವೆಯಾಗಬೇಕೆಂಬುದು ಕಾನೂನಿನಲ್ಲಿ ಇದೆಯೇ..? ಯಾರು ಯಾರನ್ನೂ ಬೇಕಾದರೂ ಮದುವೆಯಾಗಬಹುದು. ನೀವು ಹಿಂದು-ಮುಸ್ಲಿಮರನ್ನು ಮದುವೆಯಾಗಬಾರದು ಎಂದರೆ ಏನರ್ಥ, ಈಗ ಅಂತರ ಧರ್ವಿುಯ ವಿವಾಹ ಮಾಡಿಕೊಂಡವರನ್ನು ಏನು ಮಾಡಬೇಕು? ಅವರ ಮಕ್ಕಳನ್ನು ಏನು ಮಾಡಬೇಕು ಎಂದು ಪ್ರಶ್ನಿಸಿದರು.ದೇಶದಲ್ಲಿ ಮುಸ್ಲಿಮರು, ಮೊಘಲರು 600 ವರ್ಷಗಳಿಂದ ಇದ್ದಾರೆ. ಈ ದೇಶದಲ್ಲಿ ಎಷ್ಟೋ ಸಂಬಂಧಗಳು ಬೆಳೆದಿವೆ. ಬಹಳಷ್ಟು ಜನ ಹಿಂದೂ-ಮುಸ್ಲಿಂ ಕ್ರಾಸ್ ಆಗಿ ಹುಟ್ಟಿದ್ದಾರೆ ಎಂದು ಹೇಳಿದರು. ಲವ್ ಜಿಹಾದ್ ಕಾನೂನು ಜಾರಿಗೆ ತರಲು ಅವಕಾಶವಿಲ್ಲ. ಕೋರ್ಟ್​ಗೆ ಹೋದರೆ ಅದು ವಜಾ ಆಗಲಿದೆ. ಅಲಹಾಬಾದ್ ಹಾಗೂ ಕರ್ನಾಟಕ ಹೈಕೋರ್ಟ್ ತೀರ್ಪಿನ ನಂತರವೂ ಕಾನೂನು ಮಾಡಲು ಹೊರಟಿರುವುದು ತಪ್ಪು. ಬಿಜೆಪಿ ಇದನ್ನು ರಾಜ್ಯದ ಕಲ್ಯಾಣಕ್ಕೆ ಬದಲಾಗಿ ಶಾಂತಿಭಂಗವನ್ನುಂಟು ಮಾಡಲು ಮಾಡುತ್ತಿದೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 17 =
Remember me
