ಬೆಂಗಳೂರು: ‘ಆಪರೇಷನ್ ಹಸ್ತ ಕಾರ್ಯಾಚರಣೆ’ಗೆ ಪ್ರತಿತಂತ್ರ, ಕಾಂಗ್ರೆಸ್ ತೋಡಿದ ಖೆಡ್ಡಾಕ್ಕೆ ಬೀಳದಂತೆ ಪ್ರಬಲ ಹೋರಾಟ ರೂಪಿಸುವುದಕ್ಕೆ ಪ್ರತಿಪಕ್ಷ ಬಿಜೆಪಿ ದೃಢಸಂಕಲ್ಪ ಮಾಡಿದೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಸೋಮವಾರ ನಡೆದ ರಾಜ್ಯ ಕೋರ್ ಕಮಿಟಿ ಸಭೆಯು ಕಾಂಗ್ರೆಸ್ ಪಕ್ಷದ ನಡೆ, ಸರ್ಕಾರ ನೀತಿ-ನಿರ್ಧಾರಗಳ ವಿರುದ್ಧ ಹೋರಾಟ, ಜನರಿಗೆ ಧ್ವನಿಯಾಗಿ ಹೆಚ್ಚೆಚ್ಚು ಕೆಲಸ ಮಾಡುವುದರತ್ತ ಹೆಚ್ಚು ಗಮನಹರಿಸಿತು. ಕ್ಷೇತ್ರದ ಅಭಿವೃದ್ಧಿ, ಮೂಲ-ವಲಸಿಗ ವಿಚಾರ ಮುಂದಿಟ್ಟುಕೊಂಡು ಅಸಮಾಧಾನಗೊಂಡವರನ್ನು ಮನವೊಲಿಸಿ ಪಕ್ಷದಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ನಿರಂತರ ಪ್ರಯತ್ನಕ್ಕೂ ಸ್ಪಂದಿಸದಿದ್ದರೆ ಅಂಗಾಲಾಚಬೇಡಿ ಎಂಬ ಸ್ಪಷ್ಟ ನಿಲುವು ತಳೆದಿದೆ. ಬಿಜೆಪಿ ಕೇಡರ್ ಆಧಾರಿತವಾಗಿದ್ದು, ತಳಹಂತದಿಂದ ಸಂಘಟನೆ ಬಲವಾಗಿದೆ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಚೈತನ್ಯ ಹೆಚ್ಚಳಕ್ಕೆ ಆದ್ಯತೆ ನೀಡಬೇಕೆಂಬ ಒಮ್ಮತದ ಅಭಿಪ್ರಾಯವನ್ನು ಸಭೆ ವ್ಯಕ್ತಪಡಿಸಿತು ಎಂದು ಮೂಲಗಳು ತಿಳಿಸಿವೆ.
ಕೆಲವರಿಗೆ ಜವಾಬ್ದಾರಿ:ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ಸೇರಿ ಕೆಲವು ವಲಸಿಗ ಶಾಸಕರ ಜತೆಗೆ ನೇರ ಮಾತುಕತೆ, ರಾಜಿ ಸಂಧಾನದ ಜವಾಬ್ದಾರಿಯನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ಸಲ್ಲಿಸಿದ ದೂರು ಆಧರಿಸಿ ಕ್ರಮವಹಿಸಲಾಗಿದೆ. ಪಕ್ಷದೊಳಗೆ ಮೂಲ, ವಲಸಿಗ ಎಂಬ ಭಾವನೆ ಹೋಗಲಾಡಿಸಿ ಉತ್ತಮ ವಾತಾವರಣ ಸೃಜಿಸಲು ಕ್ರಮವಹಿಸಿದೆ.
ಈ ಕ್ರಮಗಳ ನಂತರವೂ ಕಾರಣ ತಿಳಿದು, ದುಡುಕಿನ ನಿರ್ಧಾರ ತೆಗೆದುಕೊಳ್ಳದಂತೆ ಸಿಟ್ಟು ಶಮನ ಮಾಡಲು ಬಿಎಸ್​ವೈ ಪ್ರಯತ್ನಿಸಲಿದ್ದು, ಇದರ ಭಾಗವಾಗಿ ಎಸ್.ಟಿ.ಸೋಮಶೇಖರ್ ಅವರನ್ನು ತಮ್ಮ ನಿವಾಸಕ್ಕೆ ಕರೆಯಿಸಿಕೊಂಡು ಸೋಮವಾರ ಮಾತುಕತೆ ನಡೆಸಿದ್ದಾರೆ. ಇದೇ ರೀತಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥ ನಾರಾಯಣರನ್ನು ಒಳಗೊಂಡ ಸಮಿತಿಗೆ ಕೆಲವರ ಮುನಿಸು ತಮಣಿ ಹೊಣೆ ನೀಡಲಾಗಿದೆ.
28ಕ್ಕೆ ಪ್ರತಿಭಟನೆ:ಅಲ್ಲದೆ, ಕಾವೇರಿ ವಿಷಯವನ್ನು ಮುಂದಿಟ್ಟುಕೊಂಡು ಆ.28ರಂದು ಬೃಹತ್ ಹೋರಾಟ ನಡೆಸಲು ನಿರ್ಧರಿಸಿದ್ದು, ಪ್ರತಿಯೊಬ್ಬ ಮುಖಂಡರು ಹಾಗೂ ಕಾರ್ಯಕರ್ತರನ್ನು ತೊಡಗಿಸಲು ಸೂಚಿಸಿದೆ. ವಿದ್ಯುತ್ ಅನಧಿಕೃತ ಲೋಡ್​ಶೆಡ್ಡಿಂಗ್​ನಿಂದ ರೈತರಿಗೆ ತಾಪತ್ರಯ, ಬೆಲೆಗಳ ಏರಿಕೆ, ಅಭಿವೃದ್ಧಿ ಯೋಜನೆಗಳೆಲ್ಲ ಕುಂಠಿತ, ಭ್ರಷ್ಟಾಚಾರ ಇನ್ನಿತರ ವಿಷಯಗಳನ್ನು ಆಧರಿಸಿ ಹಂತ ಹಂತವಾಗಿ ಚಳವಳಿ ನಡೆಸಲಿದೆ.
ಅಸಮಾಧಾನ:ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ದಿನದಿಂದಲೇ ಚಳವಳಿಗೆ ಧುಮುಕಬೇಕಿತ್ತು. ಮಹತ್ವದ ವಿಷಯದಲ್ಲಿ ವಿಳಂಬ ಧೋರಣೆ ತಳೆದದ್ದು ಸರಿಯಲ್ಲವೆಂದು ಬಿ.ಎಸ್.ಯಡಿಯೂರಪ್ಪ ಗರಂ ಆಗಿ ಅಸಮಾಧಾನ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ. ಸಂಘಟನೆ ಬಲವರ್ಧನೆ, ಕಾರ್ಯಕರ್ತರಲ್ಲಿ ಹುರುಪು ತುಂಬುವ ವಿಷಯವನ್ನು ಮುಖಂಡರು ಕಡೆಗಣಿಸುತ್ತಿದ್ದಾರೆ. ಯಾರೊಬ್ಬರೂ ಪ್ರವಾಸ, ಸಂಘಟನಾ ಸಭೆಗಳಲ್ಲಿ ಸರಿಯಾಗಿ ಪಾಲ್ಗೊಳ್ಳುತ್ತಿಲ್ಲ, ಕಾರ್ಯಕರ್ತರು ಅಹವಾಲಿಗೆ ಸ್ಪಂದಿಸುತ್ತಿಲ್ಲ. ಪಕ್ಷದ ವಿಳಂಬ, ಮುಖಂಡರ ಅಸಡ್ಡೆಯನ್ನೇ ಕಾಂಗ್ರೆಸ್ ಬಳಸಿಕೊಂಡಿದೆ. ಕಾವೇರಿ ವಿಷಯದಿಂದ ಬೇರೆಡೆ ಜನರ ಗಮನಸೆಳೆಯಲು ಆಪರೇಷನ್ ಹಸ್ತದ ವಿಷಯ ತೇಲಿಬಿಟ್ಟಿದೆ. ಹೊರಗೆ ಹೋಗುವವರನ್ನು ಗುರುತಿಸಿ ಉಳಿಸಿಕೊಳ್ಳಲು ಪ್ರಯತ್ನಿಸೋಣ. ಹಾಗೆಯೇ ಕಾಂಗ್ರೆಸ್ ಪಕ್ಷ ತೋಡಿದ ಖೆಡ್ಡಾಕ್ಕೆ ಬೀಳದಂತೆ ಎಚ್ಚರಿಕೆವಹಿಸಬೇಕು. ಕಾರ್ಯಕರ್ತ ಪಡೆಯನ್ನು ಕ್ರಿಯಾಶೀಲಗೊಳಿಸಲು ಹೋರಾಟ ಮತ್ತು ಲೋಕಸಭೆ ಚುನಾವಣೆ ಪೂರ್ವ ತಯಾರಿ ಚಟುವಟಿಕೆಗಳನ್ನು ಬಳಸಿಕೊಳ್ಳೋಣ ಎಂದು ಹೇಳಿದಾಗ ಸಭೆ ಸಹಮತ ವ್ಯಕ್ತಪಡಿಸಿತು ಎಂದು ಮೂಲಗಳು ತಿಳಿಸಿವೆ.
ಪ್ರಚಲಿತ ರಾಜಕಾರಣ, ಸಂಘಟನಾತ್ಮಕ ವಿಚಾರಗಳು, ಮುಂಬರುವ ಶಿಕ್ಷಕ, ಪದವೀಧರ ಕ್ಷೇತ್ರಗಳು, ಬಿಬಿಎಂಪಿ, ಜಿಲ್ಲಾ, ತಾಲೂಕು ಪಂಚಾಯಿತಿ, ಲೋಕಸಭೆ ಚುನಾವಣೆ ಸೇರಿ ವಿವಿಧ ವಿಷಯಗಳನ್ನು ಕೋರ್ ಕಮಿಟಿ ಸಭೆ ವಿಸõತವಾಗಿ ರ್ಚಚಿಸಿದೆ.
| ಸಿ.ಟಿ.ರವಿ, ಮಾಜಿ ಸಚಿವ.
ತೀವ್ರ ಹೋರಾಟ:ಕಾವೇರಿ ನೀರಿನ ವಿಚಾರಕ್ಕೆ ಸಂಬಂಧಿಸಿದ ಸರ್ವಪಕ್ಷಗಳ ಸಭೆಯಲ್ಲಿ ಪಾಲ್ಗೊಂಡು ಸರ್ಕಾರದ ಅನುಸರಿಸಿದ ನಿಲುವು, ರಾಜ್ಯಕ್ಕೆ ಹೇಗೆ ಮಾರಕವೆಂದು ಅಂಕಿ-ಅಂಶಗಳ ಸಹಿತ ಬಿಚ್ಚಿಡುವ ಮೂಲಕ ರಾಜ್ಯದ ಜನತೆಗೆ ಸ್ಪಷ್ಟ ಸಂದೇಶ ಕಳುಹಿಸಲು ನಿರ್ಧರಿಸಿದೆ. ರಾಜಕೀಯ ಕಾರಣ, ಲಾಭಕ್ಕಾಗಿ ಹೋರಾಡುತ್ತಿಲ್ಲ. ತಮಿಳುನಾಡಿಗೆ ತರಾತುರಿಯಲ್ಲಿ ನೀರು ಬಿಟ್ಟಿದ್ದರ ಹಿಂದೆ ಡಿಎಂಕೆ ಓಲೈಕೆ, ಮುಂದಿನ ಲೋಕಸಭೆ ಚುನಾವಣೆಯ ಲಾಭದ ಲೆಕ್ಕಾಚಾರ ಕಾಂಗ್ರೆಸ್​ನದು ಎತ್ತಿತೋರಿಸಲು ಪ್ರಮುಖರ ಸಭೆ ಪಣತೊಟ್ಟಿದೆ.
ದ್ವೇಷಕ್ಕೆ ದ್ವೇಷ ಮಾತ್ರ ಕಾಣಿಸುವುದು, ಟ್ರೋಲಿಗರಿಗೆ ಕಂಡ ಚಾಯ್​ವಾಲಾ ಯಾರು?: ನಟ ಪ್ರಕಾಶ್​ ರಾಜ್​ ಮತ್ತೊಂದು ‘ಎಕ್ಸ್​’

ಚಂದ್ರಯಾನ ಲ್ಯಾಂಡಿಂಗ್​ ದಿನಾಂಕದಲ್ಲಿ ಆಗಲಿದೆಯಾ ಬದಲಾವಣೆ?; ಇಲ್ಲಿದೆ ಲೇಟೆಸ್ಟ್ ಅಪ್​ಡೇಟ್..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + four =
Remember me
