ಬೆಂಗಳೂರು:ಬೇಸಿಗೆ ಬಂತೆಂದರೆ ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ವಾಸಮಾಡುವವರ ಬವಣೆ ಹೇಳತೀರದು.ಇದಕ್ಕೆ ಪ್ರಮುಖ ಕಾರಣ ನಗರ ಪ್ರದೇಶಗಳಲ್ಲಿ ಬಹುತೇಕ ತಾರಸಿ ಮನೆಗಳಿದ್ದು,ಬಿಸಿಲಿನಿಂದ ಕಾದ ಮನೆಗಳಲ್ಲಿ ಉಷ್ಟಾಂಶ ಹೆಚ್ಚಾಗಿರುತ್ತದೆ.ಇದಕ್ಕೆ ಸಿಂಪಲ್ ಪರಿಹಾರವೆಂದರೆ ಕೂಲ್ ರೂಫ್ ಕೋಟಿಂಗ್.
ಗ್ಲೋಬಲ್ ವಾರ್ಮಿಂಗ್ ಎಂಬುದು ಇಡೀ ಜಗತ್ತನ್ನು ಬಾದಿಸುತ್ತಿರುವ ದೊಡ್ಡ ಸಮಸ್ಯೆ.ಇತ್ತೀಚಿನ ದಿನಗಳಲ್ಲಿ ಈ ಹಿಂದೆಂದೂ ಕಾಣದ ತಾಪಮಾನ ನಾಗರೀಕರನ್ನು ಹಿಂಡೆ ಹಿಪ್ಪೆ ಮಾಡುತ್ತಿದೆ.ವಯೋವೃದ್ಧರು,ಚಿಕ್ಕಮಕ್ಕಳು ಬಿಸಿಲಿನ ತಾಪಕ್ಕೆ ಬಹಳ ಧಣಿಯುತ್ತಿದ್ದಾರೆ.ಮನೆಯ ಹೊರಗಡೆ ಹೋಗದೇ ಮನೆಯಲ್ಲಿದ್ದರೂ ಬಿಸಿಲ ತಾಪ ಕಾಡುತ್ತಿದೆ.ಇದಕ್ಕೆ ಪ್ರಮುಖ ಕಾರಣ ಟಾರ್ಸಿ ಮನೆಗಳು.ಹಿಂದಿನ ಕಾಲದಲ್ಲಿ ಹೆಂಚಿನ ಮನೆಗಳು,ಸುತ್ತುಬಾವಂತಿ ಮನೆಗಳು,ಮಾಳಿಗೆ ಅಥವ ಮುಚ್ಚಿಗೆ ಮನೆಗಳು ಇರುತ್ತಿದ್ದವು.ಈ ಮನೆಗಳಲ್ಲಿ ವೆಂಟಿಲೇಷನ್ ವ್ಯವಸ್ಥೆ ಚನ್ನಾಗಿದ್ದುದರಿಂದ ತಾಪಮಾನ ನಿಯಂತ್ರಣದಲ್ಲಿರುತ್ತಿತ್ತು.ವಿಶೇಷವಾಗಿ ಮುಚ್ಚಿಗೆ ಮನೆಗಳಲ್ಲಿ ಮರದ ಹಲಗೆಗಳ ಮೇಲೆ ಕೆಂಪು ಗೊಚ್ಚುಮಣ್ಣು ಹಾಕಿ ನಿರ್ಮಿಸುತ್ತಿದ್ದುದರಿಂದ ಬೇಸಿಗೆಯಲ್ಲಿ ತಂಪಾಗಿ ಹಾಗೂ ಮಳೆಗಾಲದಲ್ಲಿ ಬೆಚ್ಚನೆ ವಾತಾವರಣ ಇರುತ್ತಿತ್ತು.ಆದರೆ ತಾರಸಿ ಮನೆಗಳಲ್ಲಿ ಈ ಅವಕಾಶವಿಲ್ಲ.ಆದ್ದರಿಂದ ತಾರಸಿ ಮನೆಗಳನ್ನು ಬಿಸಿಲಿನಿಂದ ರಕ್ಷಿಸಲು ಇರುವ ಸರಳ ಟೆಕ್ನಿಕ್ ಕೂಲ್ ರೂಫ್ ಕೋಟಿಂಗ್.
ಸಾಮಾನ್ಯವಾಗಿ ತಾರಸಿ ಮನೆಗಳಲ್ಲಿ ನೀರು ಜಿನುಗುವ ಸಮಸ್ಯೆಗೆ ವಾಟರ್‌ಪ್ರೂಫ್ ಕೋಟಿಂಗ್ ಮಾಡಿಸುತ್ತಾರೆ.ಅದೇ ರೀತಿ ಬಿಸಿಲ ಬೇಗೆಯನ್ನು ಪ್ರತಿರೋಧಿಸುವ ಕೂಲ್ ರೂಫಿಂಗ್ ಪೇಯಿಂಟ್‌ಗಳು ಕೂಡಾ ಮಾರುಕಟ್ಟೆಯಲ್ಲಿ ಲಭ್ಯವಿದೆ.ಕೂಲ್ ರೂಫ್ ಕೋಟಿಂಗ್ ಮಾಡುವುದರಿಂದ ಸೂರ್ಯನ ಕಿರಣಗಳು ಮರು ಪ್ರತಿಲಿಸುತ್ತವೆ.ಈ ಪ್ರಕ್ರಿಯೆಯಿಂದ ರೂಫಿಂಗ್ ಮೇಲಿನ ಉಷ್ಣಾಂಶ ನಿಯಂತ್ರಣದಲ್ಲಿರುತ್ತದೆ.ಇದರಿಂದ ಮನೆಯ ಒಳಗಡೆಯ ತಾಪಮಾನ ಕಡಿಮೆಯಾಗುತ್ತದೆ.
ಕೂಲ್ ರೂಫ್ ಪೇಂಟಿಂಗ್ ವಿಧಾನ:ಮಾರುಕಟ್ಟೆಯಲ್ಲಿ ವಿವಿಧ ಬ್ರಾಂಡ್‌ಗಳ ಕೂಲ್ ರ್ೂ ಪೇಂಟ್‌ಗಳು ಲಭ್ಯ ಇವೆ. 2ಲೀಟರ್‌ನಿಂದ ಹಿಡಿದು4ಲೀಟರ್, 5ಲೀಟರ್, 10ಲೀಟರ್ ಹಾಗೂ25ಲೀಟರ್ ಕ್ಯಾನ್‌ಗಳಲ್ಲಿ ಕೂಲ್ ರ್ೂ ಪೇಂಟ್ ದೊರೆಯಲಿದೆ.ವಿವಿಧ ಕಂಪನಿಗಳ ಬೆಲೆಯಲ್ಲಿ ವ್ಯತ್ಯಾಸವಿದ್ದು ಅಂದಾಜು10ಲೀಟರ್‌ಗೆ ಮೂರುವರೆ ಸಾವಿರ ಬೆಲೆ ಇದೆ. 10ಲೀಟರ್ ಪೇಂಟ್‌ನಲ್ಲಿ ಸುಮಾರು250ಚದರಡಿ ಪೇಂಟಿಂಗ್ ಮಾಡಬಹುದು.
ಕೂಲ್ ರ್ೂ ಪೇಂಟ್ ಮಾಡುವ ಮೊದಲು ಲೋಹದ ಬ್ರಶ್ ಬಳಸಿ ಟೆರೆಸನ್ನು ಸ್ವಚ್ಛಗೊಳಿಸಬೇಕು.ಧೂಳು,ಗ್ರೀಸ್,ಎಣ್ಣೆ ಜಿಡ್ಡನ್ನು ಸ್ವಚ್ಛಗೊಳಿಸಿ ಎರಡು ಗಂಟೆ ನಂತರ ಬೇಸ್ ಕೋಟಿಂಗ್ ಹಚ್ಚಬೇಕು.ಬೇಸ್ ಕೋಟಿಂಗ್ ಹಚ್ಚಿದ ನಾಲ್ಕು ಗಂಟೆ ನಂತರ ಮೇನ್ ಕೋಟಿಂಗ್ ಹಚ್ಚಬೇಕು.ಮೇನ್ ಕೋಟಿಂಗ್ ಸಂಪೂರ್ಣ ಒಣಗಲು24ರಿಂದ48ಗಂಟೆ ಸಮಯ ಬೇಕಾಗುತ್ತದೆ.
ನ್ಯಾಚುರಲ್ ಕೂಲಿಂಗ್ ಇತರೆ ಆಯ್ಕೆಗಳು:ಹಳ್ಳಿ ಪಟ್ಟಣ ಎಂಬ ಭೇದವಿಲ್ಲದೆ ಈಗ ಎಲ್ಲೆಡೆ ಟಾರ್ಸಿ ಮನೆಗಳನ್ನು ನಿರ್ಮಿಸುವುದು ಸಾಮಾನ್ಯ.ಟಾರ್ಸಿ ಮನೆಗಳಲ್ಲಿ ವೆಂಟಿಲೇಷನ್ ಸಮಸ್ಯೆಯ ಜೊತೆಗೆ ಟೆರೆಸ್ ಮೇಲೆ ಬೀಳುವ ಬಿಸಿಲು ಮನೆಯ ಒಳಗಿನ ತಾಪಮಾನವನ್ನು ಹೆಚ್ಚಿಸುತ್ತಿದೆ.ಇದನ್ನು ತಗ್ಗಿಸಲು ಕೂಲ್ ರ್ೂ ಕೋಟಿಂಗ್ ಜೊತೆಗೆ ರ್ೂ ಗಾರ್ಡನ್ ಪರಿಕಲ್ಪನೆಯು ತಕ್ಕಮಟ್ಟಿನ ಲ ನೀಡುತ್ತದೆ.ಟಾರ್ಸಿ ಕೈತೋಟದಲ್ಲಿ ಗಿಡಗಳನ್ನು ಬೆಳೆಸುವುದರಿಂದ ಟೆರೆಸ್ ಉಷ್ಟಾಂಶ ನಿಯಂತ್ರಣವಾಗುತ್ತದೆ.ಜೊತೆಗೆ ಟೆರೆಸ್ ಮೇಲೆ ಕಬ್ಬಿಣದ ಮನೆ ನಿರ್ಮಿಸಿ ಜೆನ್ ಶೀಟ್ ಅಥವಾ ಪ್ಲಾಸ್ಟಿಕ್ ಶೀಟ್ ಹಾಕುವ ಮೂಲಕ ಉಷ್ಣಾಂಶ ನಿಯಂತ್ರಿಸಬಹುದು.ಹಾಗೂ ಹಸಿರು ಪರದೆಯನ್ನು ಟೆರೆಸ್ ಮೇಲೆ ಬಳಸುವುದರಿಂದಲೂ ಉಷ್ಣಾಂಶ ನಿಯಂತ್ರಣ ಸಾಧ್ಯ.
ಲವ್ ಜಿಹಾದ್ ತನಿಖೆಗೆ ವಿಶೇಷ ತನಿಖಾದಳ ರಚಿಸಲು ಹಿಂದು ಸಂಘಟನೆಗಳ ಆಗ್ರಹ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:7 + 15 =
Remember me
