| ವಿಲಾಸ ಮೇಲಗಿರಿ ಬೆಂಗಳೂರುದೇಶದಲ್ಲೇ ಮೊದಲು ಸಹಕಾರ ಚಳವಳಿಗೆ ಜನ್ಮ ನೀಡಿದ್ದು ಕರ್ನಾಟಕ. ಅನೇಕ ಏಳುಬೀಳುಗಳ ನಡುವೆಯೂ ಸಹಕಾರ ಚಳವಳಿ ಯಶಸ್ವಿಯಾಗಿ ಗ್ರಾಮೀಣ ಜನರಿಗೆ ಆರ್ಥಿಕ ಆಸರೆಯಾಗಿದೆ.
ಸಹಕಾರ ಬ್ಯಾಂಕ್​ಗಳು ಸಲೀಸಾಗಿ ರೈತರಿಗೆ ನೆರವಾಗುತ್ತ ಬಂದಿವೆ. ಸರ್ಕಾರ ಕೂಡ ಸಹಕಾರ ಚಳವಳಿಗೆ ಬೆನ್ನೆಲುಬಾಗಿ ನಿಂತಿದೆ. ಸಹಕಾರ ಚಳವಳಿ ಕೃಷಿ ಕ್ಷೇತ್ರಕ್ಕಂತೂ ದೊಡ್ಡ ಮಟ್ಟದ ಉತ್ತೇಜನ ನೀಡುತ್ತಿದೆ.
ಸಣ್ಣ ರೈತರಿಗೆ ಗ್ರಾಮೀಣ ಮಟ್ಟದಲ್ಲಿ ಕೃಷಿ ಸಾಲ ನೀಡುವ ಮೂಲಕ ಕೃಷಿಕರ ಸ್ವಾವಲಂಬನೆಗೆ ನೆರವಾಗಿದೆ. ಸಹಕಾರ ಬ್ಯಾಂಕ್​ಗಳು ಸರ್ಕಾರದ ಸಹಾಯಧನದೊಂದಿಗೆ ರೈತರಿಗೆ ಶೂನ್ಯ ಬಡ್ಡಿದರ ಹಾಗೂ ಕಡಿಮೆ ಬಡ್ಡಿದರದ ಸಾಲ ನೀಡುತ್ತಿವೆ. ಇದರಿಂದ ರೈತರಿಗೆ ಹೊರೆಯಾಗದ ಹಾಗೆ ಸಾಲ ಸವಲತ್ತು ದೊರೆಯುತ್ತಿದೆ.
35 ಲಕ್ಷ ರೈತರಿಗೆ ಸಾಲ ನೀಡಿಕೆ ಗುರಿ:2023-24ನೇ ಸಾಲಿನಲ್ಲಿ 35 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 25 ಸಾವಿರ ಕೋಟಿ ರೂ.ಗೂ ಹೆಚ್ಚು ಕೃಷಿ ಸಾಲ ವಿತರಿಸುವ ಗುರಿ ಹೊಂದಿದ್ದು, ಅಕ್ಟೋಬರ್ ಅಂತ್ಯಕ್ಕೆ 15.13 ಲಕ್ಷ ರೈತರಿಗೆ 12,374.22 ಕೋಟಿ ರೂ. ಸಾಲ ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಬೆಳೆ ಸಾಲ ಬಡ್ಡಿ ಸಹಾಯಧನಕ್ಕಾಗಿಯೇ ರಾಜ್ಯ ಸರ್ಕಾರ 1199.52 ಕೋಟಿ ರೂ.ಗಳ ಆಯವ್ಯಯ ಅವಕಾಶ ಕಲ್ಪಿಸಿದ್ದು, ಈವರೆಗೆ 16.32 ಲಕ್ಷ ರೈತರಿಗೆ ಸಂಬಂಧಿಸಿದ 583.02 ಕೋಟಿ ರೂ. ಅನುದಾನವನ್ನು ಸಹಕಾರ ಸಂಘಗಳಿಗೆ ಬಿಡುಗಡೆ ಮಾಡಲಾಗಿದೆ.
ವಿತರಣಾ ವ್ಯವಸ್ಥೆ ಸರಳ:ಪ್ಯಾಕ್ಸ್, ಡಿಸಿಸಿ ಬ್ಯಾಂಕ್ ಶಾಖೆ ಮತ್ತು ಪಿಕಾರ್ಡ್ ಬ್ಯಾಂಕ್​ಗಳಲ್ಲಿ ಕೃಷಿ ಸಾಲ ವಿತರಣಾ ವ್ಯವಸ್ಥೆಯನ್ನು ಸರಳೀಕರಿಸಲು ಫ್ರೂಟ್ಸ್ ತಂತ್ರಾಂಶ ಬಳಸಿಕೊಳ್ಳಲಾಗುತ್ತದೆ. ಇದರಿಂದ ಸಾಲ ವಿತರಣಾ ವ್ಯವಸ್ಥೆ ಸುಲಭವಾಗಿದೆ. ಯಾವುದೇ ಅಡೆತಡೆ ಇಲ್ಲದೆ ರೈತರಿಗೆ ಸಕಾಲಕ್ಕೆ ಸಮಸ್ಯೆಗಳಿಲ್ಲದ ಹಾಗೆ ಸಾಲ ವಿತರಣೆಯಾಗುತ್ತಿದೆ.
ಸದಸ್ಯತ್ವ ನೋಂದಣಿ:ಸಹಕಾರ ಸಂಘಗಳು ಉಳ್ಳವರ ಹಿಡಿತದಲ್ಲಿರಬಾರದು ಎಂಬ ಕಾರಣಕ್ಕೆ ಸರ್ಕಾರದ ಕಾಯ್ದೆಯಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗ, ಅಂಗವಿಕಲ, ಮಹಿಳೆಯರು, ಬಿಪಿಎಲ್​ದಾರರನ್ನು ವಿವಿಧ ಸಹಕಾರ ಸಂಘಗಳಲ್ಲಿ ಸದಸ್ಯರನ್ನಾಗಿ ನೋಂದಾಯಿಸುತ್ತಿವೆ. ಈ ಯೋಜನೆಯಡಿ ಪ್ರಸಕ್ತ ಸಾಲಿಗೆ 1 ಕೋಟಿ ರೂ. ಆಯವ್ಯಯ ಅವಕಾಶ ಮಾಡಿಕೊಳ್ಳಲಾಗಿದೆ.
ಗಿರಿಜನರ ಕಲ್ಯಾಣ:ಗಿರಿಜನರು ದೊಡ್ಡ ಪ್ರಮಾಣದಲ್ಲಿ ವಿವಿದೋದ್ದೇಶ ಸಹಕಾರ ಸಂಘಗಳ ಸದಸ್ಯರಾಗಿದ್ದಾರೆ. ಈ ಜನರು ಸಂಗ್ರಹಿಸುವ ಕಿರು ಅರಣ್ಯ ಉತ್ಪನ್ನಗಳಿಗೆ ಲ್ಯಾಂಪ್ಸ್ ಸಹಕಾರ ಸಂಘಗಳ ಮೂಲಕ ಮಾರುಕಟ್ಟೆ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಅದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 1 ಕೋಟಿ ರೂ. ಒದಗಿಸಲಾಗುತ್ತದೆ.
ಆರೋಗ್ಯಭಾಗ್ಯಕ್ಕೆ ಯಶಸ್ವಿನಿ:ಸಹಕಾರ ಸದಸ್ಯರ ಆರೋಗ್ಯ ರಕ್ಷಣೆಗಾಗಿ ಯಶಸ್ವಿನಿ ಯೋಜನೆ ಜಾರಿಗೊಳಿಸಲಾಗಿದೆ. ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಸರ್ಕಾರದ ಬೇರಾವುದೇ ಯೋಜನೆಗಿಂತ ಈ ಯೋಜನೆ ಸಹಕಾರಿಗಳಿಗೆ ಸುಲಭವಾಗಿ ಆರೋಗ್ಯ ಭಾಗ್ಯ ನೀಡುತ್ತಿದೆ.
ಸಹಕಾರ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾಗಿರುವ ಯಶಸ್ವಿನಿ ಯೋಜನೆಯಡಿ ಒಟ್ಟು 45.80 ಲಕ್ಷ ಸದಸ್ಯರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಪರಿಶಿಷ್ಟ ಜಾತಿಯ 5.67 ಲಕ್ಷ ಸದಸ್ಯರಿದ್ದು, ಪರಿಶಿಷ್ಟ ಪಂಗಡದ 3.79 ಲಕ್ಷ ಸದಸ್ಯರಿದ್ದಾರೆ. ಒಟ್ಟು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸದಸ್ಯರ 2.42 ಲಕ್ಷ ಕುಟುಂಬಗಳಿಗೆ 13.84 ಕೋಟಿ ರೂ. ಮೊತ್ತದ ವಂತಿಗೆಯನ್ನು ಸರ್ಕಾರದಿಂದ ಭರಿಸಲಾಗಿದೆ. 2022-23ನೇ ಸಾಲಿನಲ್ಲಿ 100 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಒಟ್ಟು 45,071 ಸದಸ್ಯರು ಚಿಕಿತ್ಸೆ ಪಡೆದಿದ್ದು, 74.44 ಕೋಟಿ ರೂ. ಚಿಕಿತ್ಸಾ ವೆಚ್ಚವಾಗಿದೆ.
ಅಲ್ಲದೆ, 2023-24ನೇ ಸಾಲಿಗೆ 150 ಕೋಟಿ ರೂ.ಗಳ ಆಯವ್ಯಯ ಅವಕಾಶವನ್ನು ಈ ಯೋಜನೆಗೆ ಕಲ್ಪಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಈ ಯೋಜನೆಯಡಿ ಹೊಸ ಸದಸ್ಯರನ್ನು ನೋಂದಾಯಿಸಲು ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಡಿಸೆಂಬರ್ 1ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ.
ಮಹಿಳಾ ಸಬಲೀಕರಣ:ಸಹಕಾರ ಬ್ಯಾಂಕ್​ಗಳು ರೈತರಿಗಷ್ಟೇ ಅಲ್ಲ, ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಕೊಡುಗೆ ನೀಡುತ್ತಿವೆ. ಗ್ರಾಮೀಣ ಭಾಗದ ಮಹಿಳೆಯರು ಸ್ವಉದ್ಯೋಗ ಕೈಗೊಂಡು ಸ್ವಾವಲಂಬಿ ಬದುಕು ಸಾಗಿಸಲು ಈ ಸಂಸ್ಥೆಗಳು ಕೈಜೋಡಿಸಿವೆ. ಸ್ತ್ರೀಶಕ್ತಿ ಗುಂಪುಗಳನ್ನು ರಚಿಸಿ ಅವುಗಳು ಕೈಗೆತ್ತಿಕೊಳ್ಳುವ ಸ್ವಉದ್ಯೋಗಕ್ಕೆ ನೆರವಾಗುತ್ತಿವೆ. ಆ ಮೂಲಕ ಮಹಿಳೆಯರು ಸ್ವಾವಲಂಬನೆಯ ಹಾದಿಯಲ್ಲಿ ಸಾಗಲು ನೆರವಾಗುತ್ತಿವೆ.
ಸ್ತ್ರೀಶಕ್ತಿ ಸಂಘ ರಚನೆ:ಈವರೆಗೆ 2.50 ಲಕ್ಷ ಸ್ತ್ರೀಶಕ್ತಿ /ಸ್ವಸಹಾಯ ಗುಂಪು ರಚಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 11,080 ಗುಂಪುಗಳಿಗೆ 454 ಕೋಟಿ ರೂ. ಸಾಲ ವಿತರಿಸಲಾಗಿದೆ. ಒಟ್ಟು 90,335 ಗುಂಪುಗಳಿಗೆ 2415 ಕೋಟಿ ರೂ. ಸಾಲ ಹೊರ ಬಾಕಿ ಇದೆ. ಸ್ವಸಹಾಯ ಗುಂಪುಗಳ ಸಾಲದ ಬಡ್ಡಿ ಸಹಾಯಧನಕ್ಕೆ ಈ ವರ್ಷ ಸರ್ಕಾರ 99 ಕೋಟಿ ರೂ.ಗಳ ಆಯವ್ಯಯ ಅವಕಾಶ ನೀಡಿದೆ.
ಶೂನ್ಯ ಬಡ್ಡಿದರದ ಸಾಲದ ಪ್ರಮಾಣ ಹೆಚ್ಚಳ:ಬರಗಾಲದಲ್ಲಂತೂ ಸಹಕಾರ ಸಂಘಗಳು ರೈತರಿಗೆ ದೊಡ್ಡ ಆಸರೆಯಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದ ಬಳಿಕ ಈ ಹಿಂದೆ ಇದ್ದ ಶೂನ್ಯ ಬಡ್ಡಿದರದ ಸಾಲವನ್ನು 3 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಿದೆ. ಮಧ್ಯಮಾವಧಿ ಸಾಲವನ್ನು 10 ಲಕ್ಷ ರೂ.ಗಳಿಂದ 15 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಇದಕ್ಕೆ ಶೇ.3 ಬಡ್ಡಿ ದರ ನಿಗದಿಪಡಿಸಲಾಗಿದೆ.
ಹೈನೋದ್ಯಮಕ್ಕೆ ಉತ್ತೇಜನ:ಹಾಲು ಉತ್ಪಾದಕ ಸಹಕಾರ ಸಂಘಗಳು ರೈತರಿಂದ ಖರೀದಿಸುವ ರೈತರ ಹಾಲು ಖರೀದಿ ದರವನ್ನು 3 ರೂ. ಹೆಚ್ಚಿಸಿದೆ. ಜತೆಗೆ 5 ರೂ. ಪ್ರೋತ್ಸಾಹ ಧನ ನೀಡುತ್ತಿದೆ. ಇದರಿಂದ ಹೈನುಗಾರಿಕೆಗೆ ಉತ್ತೇಜನ ದೊರೆತಿದೆ. ಕಾರಣ ಬರಗಾಲದ ನಡುವೆಯೂ ರೈತರು ಹೈನು ಉದ್ಯಮದಲ್ಲಿ ತೊಡಗಿಕೊಂಡು ಆರ್ಥಿಕ ಸ್ವಾವಲಂಬನೆಯನ್ನು ಕಾಣುತ್ತಿದ್ದಾರೆ.
ಆ 10 ಸಾವಿರ ಅದೃಷ್ಟವಂತರಲ್ಲಿ ನೀವೂ ಒಬ್ರಾ? ಚೆಕ್ ಮಾಡಿಕೊಳ್ಳುವುದು ಹೇಗೆ?

ಎಂ. ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲರಿಗೂ ಗೊತ್ತು: ಆದರೆ ಈ ಕ್ರೀಡಾಂಗಣಕ್ಕೆ ಯಾಕೆ ಆ ಹೆಸರು ಬಂತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − sixteen =
Remember me
