| ಮೃತ್ಯುಂಜಯ ಕಪಗಲ್​ ಬೆಂಗಳೂರು
ನಾಯಕತ್ವ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತಾದ ಹೇಳಿಕೆಗಳು, ದೆಹಲಿ ವರಿಷ್ಠರ ಸಂದೇಶಕ್ಕೆ ಮುಖ್ಯಮಂತ್ರಿ ಎಂರ್ಬಥದ ಅಭಿಪ್ರಾಯಗಳಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂ (ಆರ್​ಎಸ್​ಎಸ್​) ಗರಂ ಆಗಿದೆ. “ಕೇಶವ ಕೃಪಾ’ದಲ್ಲಿ ಶನಿವಾರ ನಡೆದ ಸಂ&ಪರಿವಾರ ಹಾಗೂ ಬಿಜೆಪಿ ಸಮನ್ವಯ ಸಮಿತಿ ಸಭೆಯಲ್ಲಿ ಈ ವಿಷಯವಾಗಿ ಆರ್​ಎಸ್​ಎಸ್​ನ ಮುಕುಂದ್​ ದೀರ್ಘಾವಧಿ “ಪಾಠ’ ಮಾಡಿದರು ಎಂದು ಮೂಲಗಳು ತಿಳಿಸಿವೆ.
ಕಳೆದ ಕೆಲ ತಿಂಗಳು ಸಚಿವ ಸಂಪುಟದ ಕಸರತ್ತಿನ ಮಾತುಗಳು ಬೆಂಗಳೂರಿನಿಂದ ದೆಹಲಿವರೆಗೆ ಸುಳಿದಾಡುತ್ತಿವೆ. ಸಂಪುಟದ ಬಹುತೇಕ ಸದಸ್ಯರು ಹಾಗೂ ಶಾಸಕರು ರಾಜಕೀಯ ನೀತಿ& ನಿರ್ಧಾರ ತೆಗೆದುಕೊಳ್ಳುವವರ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಮುಖ್ಯಮಂತ್ರಿ, ಸಚಿವರ ಕಾರ್ಯವಿಧಾನ ಕುರಿತು ಶಾಸಕರೇ ಅಳೆದುತೂಗುತ್ತಾರೆ. ಹೀಗಿರಬೇಕಿತ್ತು, ಹೀಗೆ ಮಾಡಬಾರದಿತ್ತು ಎಂದು ಬಹಿರಂಗ ವಿಮರ್ಶೆಗೆ ಇಳಿಯುತ್ತಾರೆ. ಇದೆಂಥ ಶಿಸ್ತಿನ ಪಕ್ಷವೆಂದು ಸಾಮಾನ್ಯ ಕಾರ್ಯಕರ್ತರು ಕೇಳುವಂತಾಗಿದೆ ಎಂಬ ಅಸಹನೆ ವ್ಯಕ್ತಪಡಿಸಿದರು ಎನ್ನಲಾಗಿದೆ.
ಗೊಂದಲಗಳು ಅಭದ್ರತೆ ಅಥವಾ ಅಸ್ಥಿರತೆಗೆ ಎಡೆಮಾಡಿಕೊಡುತ್ತವೆ. ಆಡಳಿತದ ಮೇಲೆ ಹಿಡಿತ ತಪ್ಪಿ ಅಭಿವೃದ್ಧಿ, ಯೋಜನೆ ಮತ್ತು ಕಾರ್ಯಕ್ರಮಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎನ್ನುವ ಆತಂಕವನ್ನೂ ಸಂ ತೋಡಿಕೊಂಡಿದೆ. ರಾಜ್ಯದ 2022&23ನೇ ಸಾಲಿನ ಬಜೆಟ್​ಗಿಂತ ಸಚಿವ ಸಂಪುಟದ ಕುರಿತು ಹೆಚ್ಚು ಚರ್ಚೆಯಾಗಿ ಬಿಜೆಪಿ ಪ್ರಧಾನ ಕಾರ್ಯಸೂಚಿ ಎಂಬಂತೆ ಬಿಂಬಿತವಾಗಿದೆ. ಮುಖ್ಯಮಂತ್ರಿಯೇ ಎಲ್ಲ ವಿಷಯಗಳ ಬಗ್ಗೆ ಮಾತನಾಡಬೇಕೆಂದಿಲ್ಲ. ಸಚಿವರು ತಮ್ಮ ಇಲಾಖೆ ಬದಲಿಗೆ ಪಕ್ಷದ ರಾಜಕೀಯ ನಡೆಯ ಮೇಲೆ ಗಮನ ಕೇಂದ್ರೀಕರಿಸಿದಂತಿದೆ. ಬಹಳಷ್ಟು ಸಚಿವರು ಇಲಾಖೆ ಕಾರ್ಯಚಟುವಟಿಕೆ, ಕಾರ್ಯಕ್ರಮಗಳ ಅನುಷ್ಠಾನ, ಅಧಿಕಾರಿಗಳಿಂದ ಕೆಲಸ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಮರೆತಂತಿದೆ. ಪಕ್ಷದ ಮುಖ್ಯ ವಕ್ತಾರರು,  ವಕ್ತಾರರನ್ನು ನೇಮಕ ಮಾಡಲಾಗಿದೆ. ಯಾವುದೇ ರಾಜಕೀಯ ನಿರ್ಧಾರಗಳ ಬಗ್ಗೆ ಅವರ ಮೂಲಕ ಹೇಳಿಸುವ ವ್ಯವಸ್ಥೆಯೇ ಹಳಿ ತಪ್ಪಿದೆಂದು ಮುಕುಂದ್​ ಕಿವಿ ಹಿಂಡಿದ್ದಾರೆಂದು ಮೂಲಗಳು ಹೇಳಿವೆ.
ತಾಕೀತು:ನಾಯಕತ್ವ, ಸಚಿವ ಸಂಪುಟದಲ್ಲಿ ಬದಲಾವಣೆ ಬಗ್ಗೆ ಚರ್ಚೆಗೆ ಅವಕಾಶ ಕೊಟ್ಟು ಪಕ್ಷ ಮೂಕ ಪ್ರೇಕ್ಷಕ ನಿಲುವು ತಳೆದರೆ ಬೇರೆಯೇ ಸಂದೇಶ ರವಾನೆಯಾಗುತ್ತದೆ. ಕಾಲ ಕಾಲಕ್ಕೆ ಸಲಹೆ&ಸೂಚನೆಗಳನ್ನು ಸರ್ಕಾರಕ್ಕೆ ನೀಡುವುದು ಪಕ್ಷದ ಹೊಣೆಯಾಗಿದೆ. ಎಲ್ಲವೂ ಪಕ್ಷದ ವರಿಷ್ಠರ ಕೈಯ್ಯಲ್ಲಿದೆ ಎಂಬ ವ್ಯಾಖಾನಗಳ ಬಗ್ಗೆಯೂ ಮೌನ ವಹಿಸುವುದು ಸರಿಯಲ್ಲ. ಆದಷ್ಟು ಬೇಗ ಗೊಂದಲಕ್ಕೆ ತೆರೆ ಎಳೆಯಬೇಕು. ಜನರಿಗೆ ತಪು$್ಪ ಮಾಹಿತಿ ರವಾನೆ, ಪ್ರತಿಪಕ್ಷಗಳ ಟೀಕೆಗೆ ಗ್ರಾಸವಾಗುವುದು ತಪ್ಪಲಿದೆ ಎಂಬ ಖಡಕ್​ ಸಲಹೆಯನ್ನು ಸಂ ನೀಡಿದೆ ಎಂದು ಮೂಲಗಳು ವಿವರಿಸಿವೆ.
ರಾಜ್ಯ ಸರ್ಕಾರ, ಬಿಜೆಪಿ ನಡೆಗೆ ಸಂ&ಪರಿವಾರ ಬೇಸತ್ತು ಸಮನ್ವಯ ಸಮಿತಿ ಸಭೆಗೆ ಆಹ್ವಾನ ನೀಡಿದ್ದಿಲ್ಲ. ಆದರೆ ಸಂ ಮೂಲದ ಬಿಜೆಪಿ ಹಿರಿಯ ನಾಯಕರೊಬ್ಬರು ಮನವೊಲಿಸಿ ಒಪ್ಪಿಸಿದರು ಎಂದು ತಿಳಿದಿದೆ. ಮುಕುಂದ್​ ಮಾತನಾಡುವುದಕ್ಕೆ ಮೊದಲು ಪಕ್ಷದ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ರಾಜ್ಯದಲ್ಲಿ ಪಕ್ಷದ ಸಂಟನಾತ್ಮಕ ಚಟುವಟಿಕೆಗಳು, ಕಾರ್ಯಯೋಜನೆ ಬಗ್ಗೆ ವರದಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಸಂಪುಟ ವಿಸ್ತರಣೆ ಹೈಕಮಾಂಡ್​ ತೀರ್ಮಾನ
ಹುಬ್ಬಳ್ಳಿ: ಸವೋರ್ಚ್ಚ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ೂಷಣೆಯಾಗಿರುವ ಹಲವು ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಹೈಕಮಾಂಡ್​ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ನಿರ್ಧಾರ ಕೈಗೊಳ್ಳಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ನಾವೆಲ್ಲ ವಿಧಾನ ಪರಿಷತ್​ ಹಾಗೂ ರಾಜ್ಯಸಭೆ ಚುನಾವಣೆ ಪ್ರಕ್ರಿಯೆಯಲ್ಲಿದ್ದೇವೆ. ಎರಡು ದಿನದಲ್ಲಿ ವರಿಷ್ಠರನ್ನು ಫೋನ್​ ಮೂಲಕ ಸಂಪರ್ಕಿಸಿ ಚುನಾವಣೆ, ಸಂಪುಟ ವಿಸ್ತರಣೆ ಕುರಿತು ಮಾತನಾಡುತ್ತೇನೆ. ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದರ ಆಧಾರದ ಮೇಲೆ ಎಲ್ಲ ಪ್ರಕ್ರಿಯೆಗಳು ಪ್ರಾರಂಭವಾಗಲಿವೆ ಎಂದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಎಂಎಲ್​ಸಿ ಮಾಡಿ ಮಂತ್ರಿ ಸ್ಥಾನ ನೀಡುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮನೆ ಮನೆಗೆ ಅಭಿಯಾನಕ್ಕೆ ಬಿಜೆಪಿ ತಯಾರಿ
ಬೆಂಗಳೂರು:ಯಾವುದೇ ಸಂದರ್ಭದಲ್ಲಿ ಯಾವುದೇ ಚುನಾವಣೆಗಳು ಬರಲಿ ಎದುರಿಸಲು ಸಂಟನೆ ಕ್ರಿಯಾಶೀಲವಾಗಿದ್ದು, ಸಮರ್ಥವಾಗಿ ನಿಭಾಯಿಸಲು ಸನ್ನದ್ಧವಾಗಿರಬೇಕು. ಜನರ ವಿಶ್ವಾಸ ಗಳಿಸುವುದಕ್ಕೆ ಬೇಕಾದ ಭೂಮಿಕೆ ಸಿದ್ಧಗೊಳಿಸಬೇಕು ಎಂಬ ವರಿಷ್ಠರ ನಿರ್ದೇಶನದ ಭಾಗವಾಗಿ ಮನೆ ಮನೆಗೆ ಅಭಿಯಾನ ಕೈಗೆತ್ತಿಕೊಳ್ಳಲು ರಾಜ್ಯ ಬಿಜೆಪಿ ತಯಾರಾಗುತ್ತಿದೆ.
ಕೇಂದ್ರ, ರಾಜ್ಯ ಸರ್ಕಾರಗಳ ಜನಪರ ನೀತಿ&ನಿರ್ಧಾರಗಳು, ಯೋಜನೆ ಹಾಗೂ ಕಾರ್ಯಕ್ರಮಗಳ ಪ್ರಚಾರ, ಜನರ ಮನೆ ಬಾಗಿಲಿಗೆ ತಲುಪಿಸುವುದು ಅಭಿಯಾನದ ಮುಖ್ಯ ಉದ್ದೇಶ. ನಲ್ಲಿ ನೀರಿನ ಸಂಪರ್ಕ, ಶಿಕ್ಷಣ, ಆರೋಗ್ಯ ಸೇವೆ, ಪಡಿತರ, ಉದ್ಯೋಗಾವಕಾಶಗಳ ಸದ್ಬಳಕೆಗೆ ಕೌಶಲವೃದ್ಧಿ ಸೇರಿ ಪ್ರತಿ ಕುಟುಂಬದ ಅಗತ್ಯತೆಗಳನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪೂರೈಸುತ್ತಿರುವ ಪರಿಯನ್ನು ಮನವರಿಕೆ ಮಾಡಿಕೊಡಲಿದೆ ಎಂದು ರಾಜ್ಯ ಬಿಜೆಪಿ ಮೂಲಗಳು ಮಾಹಿತಿ ನೀಡಿವೆ.
ಪೂರ್ವಭಾವಿ ಸಭೆಗಳು: ಪ್ರಚಾರದ ಅಭಿಯಾನ ವ್ಯವಸ್ಥಿತ, ಅಚ್ಚುಕಟ್ಟಾಗಿ ನಿಭಾಯಿಸಲೆಂದು ವಿವಿಧ ಪ್ರಕೋಷ್ಠಗಳು ಜಿಲ್ಲಾವಾರು ಸಭೆಗಳಿಗೆ ಚಾಲನೆ ನೀಡಲಾಗಿದೆ. ಜತೆಗೆ ವಿವಿಧ ಮೋರ್ಚಾಗಳ ರಾಜ್ಯಮಟ್ಟದ ಸಭೆಗಳು ನಡೆಯಲಿವೆ. ಜಿಲ್ಲಾ ಸಮಿತಿ ಕಾರ್ಯಕಾರಿಣಿ ಸಭೆಗಳು ನಡೆಯುತ್ತಿದ್ದು, ನಂತರ ಮಂಡಲ ಮಟ್ಟದಲ್ಲಿ ವಿವಿಧ ಕಾರ್ಯಚಟುವಟಿಕೆ ಅವಲೋಕನ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಬೂತ್​ಮಟ್ಟದ ಸಮಿತಿಗಳ ರಚನೆ ಪೂರ್ಣಗೊಂಡಿದ್ದು, ಸಾಧ್ಯವಿರುವೆಡೆ ಪೇಜ್​ ಕಮಿಟಿಗಳ ರಚನೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಪ್ರತಿಯೊಂದು ಚಟುವಟಿಕೆಗಳಲ್ಲಿ ಆಯಾ ಕ್ಷೇತ್ರದ ಶಾಸಕರು ಪಾಲ್ಗೊಳ್ಳುವಿಕೆ ಸೂಚನೆಯೂ ರವಾನೆಯಾಗಿದೆ. ಮುಂಬರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆ ವೇಳೆಗೆ ಕನಿಷ್ಠ ಎರಡು ಬಾರಿ ಅಭಿಯಾನ ಹಮ್ಮಿಕೊಳ್ಳುವ ಚಿಂತನೆ ನಡೆದಿದ್ದು, ಪೂರಕವಾಗಿ ಮಾರ್ಚ್​ ಅಂತ್ಯದವರೆಗಿನ ಕಾರ್ಯಯೋಜನೆ ಅಂತಿವ ುವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − one =
Remember me
