|ರುದ್ರಣ್ಣ ಹರ್ತಿಕೋಟೆಬೆಂಗಳೂರು
ರಾಜ್ಯದಲ್ಲಿ ಪದೇಪದೆ ಉಂಟಾಗುತ್ತಿರುವ ಪ್ರವಾಹವನ್ನು ನಿಯಂತ್ರಿಸಲು ಕ್ರಿಯಾ ಯೋಜನೆಯನ್ನು ಸರ್ಕಾರ ಸಿದ್ಧಪಡಿಸಿದ್ದು, ಜಿಲ್ಲಾಡಳಿತಗಳಿಗೆ ಸಮನ್ವಯದಿಂದ ಕೆಲಸ ಮಾಡುವಂತೆ ಸೂಚನೆ ನೀಡಿದೆ. ಪ್ರಕೃತಿ ವಿಕೋಪಕ್ಕೊಳಗಾಗುವ ಪ್ರದೇಶದಲ್ಲಿ ತಕ್ಷಣದ ಪರಿಹಾರಗಳೇನು? ಜಿಲ್ಲಾಡಳಿತಗಳು ಹೇಗೆ ಸಜ್ಜಾಗಿರಬೇಕಾಗಿದೆ ಎಂಬೆಲ್ಲ ಅಂಶಗಳನ್ನು ಕ್ರಿಯಾಯೋಜನೆ ಒಳಗೊಂಡಿದೆ. ಪ್ರಕೃತಿ ವಿಪತ್ತು ಮತ್ತು ಅವುಗಳ ನಿರ್ವಹಣೆಗೆ ಪ್ರಮುಖ ಆದ್ಯತೆ ನೀಡುವಂತೆ ಸೂಚಿಸಿದೆ.
23 ಇಲಾಖೆಗಳ ಜವಾಬ್ದಾರಿ:ಪ್ರಕೃತಿ ವಿಕೋಪ ನಿಯಂತ್ರಣ ಒಂದೆರಡು ಇಲಾಖೆಗಳಿಗೆ ಸಂಬಂಧಿಸಿದ್ದಲ್ಲ. 23 ಇಲಾಖೆಗಳು ಸಮನ್ವಯದಿಂದ ಈ ಕೆಲಸ ಮಾಡಬೇಕಾಗಿದೆ. ಸರ್ಕಾರ ಹಣ ಬಿಡುಗಡೆ ಮಾಡಿದರೂ ಇಲಾಖೆಗಳ ನಡುವೆ ಸಮನ್ವಯ ಇಲ್ಲದಿದ್ದರೆ ಜನರಿಗೆ ಉಂಟಾಗುವ ಸಮಸ್ಯೆ ನಿವಾರಣೆ ಸಾಧ್ಯವಾಗುವುದಿಲ್ಲ. ಕ್ರಿಯಾ ಯೋಜನೆಯಲ್ಲಿ ಯಾವ ಇಲಾಖೆಯಿಂದ ಏನೇನು ಕೆಲಸ ಆಗಬೇಕಾಗಿದೆ ಎಂಬುದನ್ನಷ್ಟೇ ಹೇಳಿಲ್ಲ. ಪ್ರವಾಹಕ್ಕೆ ಕಾರಣಗಳೇನು? ಅದಕ್ಕೆ ಪರಿಹಾರಗಳೇನು? ಕಠಿಣ ನಿಯಮಗಳನ್ನು ಎಲ್ಲೆಲ್ಲಿ ರೂಪಿಸಬೇಕಾಗಿದೆ? ಪ್ರವಾಹದಲ್ಲಿ ಎಷ್ಟು ವಿಧಗಳಿವೆ ಎಂಬುದೆಲ್ಲವನ್ನೂ ವಿವರಿಸಲಾಗಿದೆ. ಅದರೊಂದಿಗೆ ವಿವಿಧ ಇಲಾಖೆಗಳ ಜವಾಬ್ದಾರಿಯನ್ನೂ ಮನವರಿಕೆ ಮಾಡಿಕೊಡಲಾಗಿದೆ.
ನಗರ ಪ್ರವಾಹ:ಯೋಜನಾರಹಿತವಾದ ಮಾನವ ಚಟುವಟಿಕೆಗಳಿಂದ ಬೆಂಗಳೂರು, ಮೈಸೂರು, ತುಮಕೂರು, ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ಮಂಗಳೂರು, ಉಡುಪಿ ನಗರಗಳು ಪ್ರವಾಹಕ್ಕೆ ತುತ್ತಾಗುತ್ತಿವೆ.
ಕೆರೆಗಳೇ ಮಾಯ:ರಾಜ್ಯಾದ್ಯಂತ ಜಲಾನಯನ ಪ್ರದೇಶ ಒತ್ತುವರಿಯಾಗುತ್ತಿದ್ದು, 1000 ಕೆರೆಗಳು ಮಾಯವಾಗಿವೆ ಎಂಬುದನ್ನು ಉಲ್ಲೇಖಿಸಲಾಗಿದೆ. ರಾಜಕಾಲುವೆ, ಚರಂಡಿಗಳ ಸಾಮರ್ಥ್ಯ ಕಡಿಮೆ ಇದ್ದರೆ, ಇನ್ನೊಂದೆಡೆ ಘನತ್ಯಾಜ್ಯ ನಿರ್ವಹಣೆ ಸರಿಯಾಗಿ ನಡೆಯದಿರುವುದು, ನೀರು ಹರಿದು ಬರುವಂತಹ ಪ್ರದೇಶ ಒತ್ತುವರಿ ಆಗಿರುವುದು ಸಹ ಪ್ರವಾಹದ ಸ್ಥಿತಿಗೆ ಕಾರಣವಾಗಿದೆ ಎಂದು ಹೇಳಿದೆ.
ಬಿಲ್ಡಿಂಗ್ ಬೈಲಾ ಕಡ್ಡಾಯ ಅನುಷ್ಠಾನ:ಪ್ರವಾಹಪೀಡಿತ ಪ್ರದೇಶದಲ್ಲಿ ಬಿಲ್ಡಿಂಗ್ ಬೈಲಾವನ್ನು ಕಡ್ಡಾಯವಾಗಿ ಅನುಷ್ಠಾನ ಮಾಡಬೇಕಾಗಿರುವ ಅಗತ್ಯತೆಯನ್ನು ಕ್ರಿಯಾ ಯೋಜನೆ ಎತ್ತಿ ತೋರಿಸಿದೆ. ರಾಜಕಾಲುವೆಗಳು, ಚರಂಡಿಗಳೇ ಒತ್ತುವರಿಯಾಗಿವೆ. ಚರಂಡಿಗಿಂತ 6 ಮೀಟರ್ ದೂರದಲ್ಲಿ ಮನೆಗಳು ಇರಬೇಕು ಎಂಬ ನಿಯಮ ಜಾರಿಯಾಗಿಲ್ಲ. ಪ್ರವಾಹಪೀಡಿತ ಪ್ರದೇಶಗಳ ಡಿಜಿಟಲ್ ಮ್ಯಾಪ್ ಮಾಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲೇಬೇಕಾಗಿದೆ. ಒತ್ತುವರಿ ತೆರವು ಆಗಲೇಬೇಕಾಗಿದೆ ಎಂಬುದನ್ನು ಸ್ಪಷ್ಟಪಡಿಸಿದೆ.
ಶೇ.5 ರಷ್ಟು ಹೆಚ್ಚು ಅನುದಾನ:ಕೇಂದ್ರ ಸರ್ಕಾರ 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಎಸ್​ಡಿಆರ್​ಎಂಎಫ್​ನಡಿ 1,054 ಕೋಟಿ ರೂ. ಮಂಜೂರು ಮಾಡಿದೆ. 2021ರಲ್ಲಿ ಎನ್​ಡಿಆರ್​ಎಫ್​ನಡಿ 994 ಕೋಟಿ ರೂ. ಅನುದಾನ ಬಂದಿದೆ. ಈ ಸಾಲಿಗೆ ಶೇ.5ರಷ್ಟು ಹೆಚ್ಚು ಮಾಡಿ 1.107 ಕೋಟಿ ರೂ.ಗಳನ್ನು ನೀಡಿದೆ.
ಆ್ಯಪ್​ ಬಳಕೆ:ಈಗಾಗಲೇ ರಚನೆ ಮಾಡಿರುವ ವರುಣ ಮಿತ್ರ ಕಾಲ್ ಸೆಂಟರ್ ಹಾಗೂ ಶಿಡ್ಲು ಆ್ಯಪ್​ ಬಳಕೆಗೆ ಸೂಚನೆ ನೀಡಲಾಗಿದೆ. ಈ ಆಪ್​ನಲ್ಲಿ ಕಾಲಕಾಲಕ್ಕೆ ಮಾಹಿತಿ ಲಭ್ಯವಾಗುತ್ತದೆ.
ಕ್ರಿಯಾ ಯೋಜನೆಯನ್ನು ರೂಪಿಸಿ ಜಿಲ್ಲಾಡಳಿತಗಳಿಗೆ ನೀಡಲಾಗಿದೆ. ಮುಖ್ಯಮಂತ್ರಿ ಹಾಗೂ ಕಂದಾಯ ಮಂತ್ರಿಗಳು ಸಲಹೆ, ಸೂಚನೆ ನೀಡುತ್ತಿರುತ್ತಾರೆ. ಪ್ರವಾಹ ನಿಯಂತ್ರಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಹಣಕಾಸಿನ ಸಮಸ್ಯೆಯಿಲ್ಲ.
|ಡಾ.ಮನೋಜ್ ರಾಜನ್ಪ್ರಕೃತಿ ವಿಕೋಪ ನಿಯಂತ್ರಣ ಪ್ರಾಧಿಕಾರದ ಆಯುಕ್ತರು
ಪದೇಪದೆ ಪ್ರಕೃತಿ ವಿಕೋಪ:ರಾಜ್ಯ ಪದೇಪದೆ ನೆರೆ ಅಥವಾ ಬರಕ್ಕೆ ಒಳಗಾಗುವ ಎಂಟು ರಾಜ್ಯಗಳಲ್ಲಿ ಒಂದಾಗಿದೆ. ಮೂರು ದಶಕಗಳಲ್ಲಿ 16 ವರ್ಷ ಬರ ಕಾಡಿದ್ದರೆ, 11 ವರ್ಷ ನೆರೆ ಅಪ್ಪಳಿಸಿದೆ. 2018ರಿಂದ ಸತತವಾಗಿ ಪ್ರವಾಹಕ್ಕೆ ರಾಜ್ಯ ತುತ್ತಾಗುತ್ತಿದ್ದು, 14 ಜಿಲ್ಲೆಗಳು ಪ್ರವಾಹಪೀಡಿತವಾಗಿವೆ. ಕೃಷ್ಣಾ ನದಿಯ ವ್ಯಾಪ್ತಿ, ಕರಾವಳಿ, ಮಲೆನಾಡು ಹಾಗೂ ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ಪ್ರವಾಹ ಹೆಚ್ಚಾಗಿರುತ್ತದೆ. ರಾಜ್ಯದ 912 ಗ್ರಾಪಂಗಳ 1728 ಹಳ್ಳಿಗಳು ಸದಾ ಮುಳುಗಡೆ ಭೀತಿ ಎದುರಿಸುತ್ತಿವೆ. ಆದರೆ, ಸರ್ಕಾರ ಅವುಗಳ ಶಾಶ್ವತ ಸ್ಥಳಾಂತರಕ್ಕೆ ಪ್ರಯತ್ನಿಸುತ್ತಿಲ್ಲ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 7 =
Remember me
