ಬೆಂಗಳೂರು:ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸಹಿ ಮತ್ತು ಲೆಟರ್ ಹೆಡ್ ನಕಲು ಮಾಡಿ ವಿಧಾನಸಭೆ ಸಚಿವಾಲಯಕ್ಕೆ ಪತ್ರ ಬರೆದು ಆಪ್ತ ಸಹಾಯಕರ ಉದ್ಯೋಗ ಕೊಡಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ವಂಚಕರ ಜಾಲ ಪತ್ತೆ ಮಾಡಿರುವ ವಿಧಾನಸೌಧ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ರಾಮನಗರ ಜಿಲ್ಲೆ ಕುದೂರು ನಿವಾಸಿ ಸ್ವಾಮಿ (35), ಅಂಜನ್​ಕುಮಾರ್ (35) ಬಂಧಿತರು. ಮತ್ತೊಬ್ಬ ಆರೋಪಿ ಸ್ವಾಮಿ ಪತ್ನಿ ಕೆ.ಸಿ.ವಿನುತಾ ಎಂಬುವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಸ್ಸೆಸ್ಸೆಲ್ಸಿ ಓದಿರುವ ಸ್ವಾಮಿ, ಈ ಹಿಂದೆ ಪರಿಚಿತ ಶಾಸಕರ ನೆರವಿನಿಂದ ವಿಧಾನಸೌಧದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಸೇರಿದ್ದ. ನಂತರ ಕೆಲಸ ಬಿಟ್ಟು ರಾಜಕಾರಣಿಗಳ ಜತೆ ಓಡಾಡಿಕೊಂಡಿದ್ದ.
ಶಾಮನೂರು ಶಿವಶಂಕರಪ್ಪ ಅವರು ವಿನುತಾಳನ್ನು ಆಪ್ತ ಸಹಾಯಕಿಯಾಗಿ ನೇಮಿಸಲು ಶಿಫಾರಸು ಮಾಡಿದಂತೆ ಖೊಟ್ಟಿ ಲೆಟರ್ ಹೆಡ್ ಸೃಷ್ಟಿಸಿ ಅದಕ್ಕೆ ಅವರ ಫೋರ್ಜರಿ ಸಹಿ ಮಾಡಿದ್ದ ಸ್ವಾಮಿ ನಂತರ ಆ ಶಿಫಾರಸು ಪತ್ರವನ್ನು ವಿಧಾನಸಭೆ ಸಚಿವಾಲಯಕ್ಕೆ ಕಳುಹಿಸಿದ್ದ. ಪತ್ರದ ನೈಜತೆ ಪರಿಶೀಲಿಸದ ಸಚಿವಾಲಯ ಸಿಬ್ಬಂದಿ ವಿನುತಾಳನ್ನು ಶಾಮನೂರು ಶಿವಶಂಕರಪ್ಪ ಅವರ ಆಪ್ತ ಸಹಾಯಕಿಯಾಗಿ ನೇಮಿಸಿ 2023ರ ಮೇನಲ್ಲಿ ಆದೇಶ ಹೊರಡಿಸಿದ್ದರು ಎನ್ನಲಾಗಿದೆ.
ಬಯಲಾಗಿದ್ದು ಹೇಗೆ:ಸ್ವಾಮಿಯ ಪತ್ನಿ ವಿನುತಾ, ಕರ್ತವ್ಯಕ್ಕೆ ಹಾಜರಾಗದೆ ಮನೆಯಲ್ಲೇ ಇದ್ದುಕೊಂಡು ಒಂದು ವರ್ಷದಿಂದ ವೇತನ ಪಡೆದಿದ್ದಳು. ವಿಧಾನಸಭೆ ಸಚಿವಾಲಯದಿಂದ ಪ್ರತಿ ತಿಂಗಳು ಆಕೆಯ ಬ್ಯಾಂಕ್ ಖಾತೆಗೆ 30 ಸಾವಿರ ಸಂಬಳ ಪಾವತಿಸಲಾಗಿತ್ತು. ಗರ್ಭಿಣಿಯಾಗಿರುವುದರಿಂದ ಜವಾಬ್ದಾರಿಯಿಂದ ಬಿಡುಗಡೆಗೊಳಿಸುವಂತೆ ಇತ್ತೀಚೆಗೆ ವಿಧಾನಸಭೆ ಸಚಿವಾಲಯಕ್ಕೆ ಪತ್ರ ಬರೆದಿದ್ದಳು. ಸಚಿವಾಲಯ ಸಿಬ್ಬಂದಿ ಪತ್ರದ ಬಗ್ಗೆ ಅನುಮಾನಗೊಂಡು ಪರಿಶೀಲಿಸಿದಾಗ ದಂಪತಿ ವಂಚನೆ ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿನುತಾ ಗರ್ಭಿಣಿಯಾಗಿರುವ ಕಾರಣ ಹೆರಿಗೆ ನಂತರ ಬಂಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರಕ್ಕೆ 6 ಲಕ್ಷಕ್ಕೂ ಹೆಚ್ಚು ವಂಚನೆ:ಶಾಮನೂರು ಶಿವಶಂಕರಪ್ಪ ಅವರ ಆಪ್ತ ಸಹಾಯಕಿ ಹೆಸರಿನಲ್ಲಿ 30 ಸಾವಿರ ರೂ.ನಂತೆ 11 ತಿಂಗಳು ಹಾಗೂ ಶಾಸಕ ಎಸ್.ರಘು ಹೆಸರಿನಲ್ಲಿ 11 ತಿಂಗಳು ಒಟ್ಟು 6.6 ಲಕ್ಷ ರೂ. ಸರ್ಕಾರಕ್ಕೆ ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿ.ವಿ.ರಾಮನ್​ನಗರ ಶಾಸಕ ಎಸ್.ರಘು ಹೆಸರಲ್ಲೂ ವಂಚನೆ
ದಂಪತಿ ವಂಚನೆ ಸಂಬಂಧ ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ಪಿ.ಲಲಿತಾ ಆ.20ರಂದು ವಿಧಾನಸೌಧ ಠಾಣೆಗೆ ದೂರು ದಾಖಲಿಸಿದ್ದರು. ಸ್ವಾಮಿಯನ್ನು ಬಂಧಿಸಿ ವಿಚಾರಿಸಿದಾಗ ಆತ ಇದೇ ರೀತಿ ಬೆಂಗಳೂರಿನ ಸಿ.ವಿ.ರಾಮನ್​ನಗರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ರಘು ಅವರ ಹೆಸರಿನಲ್ಲೂ ಲೆಟರ್​ಹೆಡ್ ಸೃಷ್ಟಿಸಿ ಫೋರ್ಜರಿ ಸಹಿ ಮಾಡಿ ಅಂಜನ್​ಕುಮಾರ್ ಎಂಬಾತನಿಗೆ ಶಾಸಕರ ಆಪ್ತ ಸಹಾಯಕನ ಹುದ್ದೆ ಕೊಡಿಸಿದ್ದ ಸಂಗತಿ ಬಯಲಾಗಿದೆ.ಮಾಗಡಿ ತಾಲೂಕಿನ ಅಂಜನ್​ಕುಮಾರ್​ಗೂ ವಿಧಾನಸಭೆ ಸಚಿವಾಲಯ ಹಲವು ತಿಂಗಳಿಂದ ಸಂಬಳ ಪಾವತಿಸಿತ್ತು. ಅಂಜನ್​ಕುಮಾರ್, ಶಾಸಕ ರಘು ಅವರ ಕಚೇರಿಯಲ್ಲಿ ಕೆಲಸಕ್ಕೆ ಹಾಜರಾಗದೆ ವೇತನ ಪಡೆಯುತ್ತಿದ್ದ. ಆ ಹಣದಲ್ಲಿ 5 ಸಾವಿರ ರೂ. ಇಟ್ಟುಕೊಂಡು ಉಳಿದ ಹಣವನ್ನು ಸ್ವಾಮಿಗೆ ಕೊಡುತ್ತಿದ್ದ ಎನ್ನಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − nineteen =
Remember me
