ಬೆಂಗಳೂರು ಗ್ರಾಮಾಂತರ:ದಿನನಿತ್ಯ ಬಳಕೆಯ ಕೊತ್ತಂಬರಿ ಸೊಪ್ಪಿನ ದರ ದಿಢೀರ್ ಏರಿಕೆಯಾಗಿದೆ. ಕಳೆದೆರಡು ವಾರದಿಂದ ಕಂತೆ ಕೊತ್ತಂಬರಿಗೆ 60ರಿಂದ 80 ರೂಪಾಯಿ ದರವಿತ್ತು. ಪ್ರಸ್ತುತ ದಿಢೀರ್ ಕಂತೆ ಸೊಪು್ಪ 100 ರೂಪಾಯಿಯ ಗಡಿ ದಾಟಿರುವುದು ಇತ್ತೀಚಿನ ವರ್ಷಗಳಲ್ಲಿ ಕೊತ್ತಂಬರಿ ದರ ದಾಖಲೆ ಎನಿಸಿದೆ.
ಮಳೆಯ ತೀವ್ರ ಕೊರತೆಯಿಂದ ಕಳೆದೆರಡು ತಿಂಗಳಿಂದ ತರಕಾರಿ ದರ ಗಗನಮುಖಿಯಾಗಿದ್ದ ನಡುವೆಯೇ ಸೊಪ್ಪಿನ ದರವೂ ಗಗನಕ್ಕೇರಿತ್ತು. ತರಕಾರಿಯೊಂದಿಗೆ ಸೊಪ್ಪಿನ ದರವೂ ಪೈಪೊಟಿಗೆ ಬಿದ್ದಿತ್ತು. ಈಗ ತರಕಾರಿ ದರವನ್ನು ಸೊಪ್ಪಿನ ದರ ಹಿಂದಿಕ್ಕಿದ್ದು, ಚಿಲ್ಲರೆ ಮಾರಾಟಗಾರರು ಹೈರಾಣಾಗಿದ್ದಾರೆ. ಕೊತ್ತಂಬರಿ ಸೊಪು್ಪ ಖರೀದಿಸುವ ಗ್ರಾಹಕರು ಚಿಂತೆಗೆ ಬೀಳುವಂತಾಗಿದೆ. ಸಾಮಾನ್ಯ ದಿನಗಳಲ್ಲಿ 5 ರಿಂದ 10 ರೂಪಾಯಿಗೆ ಹಿಡಿ ಸೊಪು್ಪ ಸಿಗುತ್ತಿತ್ತು. ಈಗ ಚಿಲ್ಲರೆಯಾಗಿ ಕೊತ್ತಂಬರಿ ಸಿಗುವುದಿಲ್ಲ. ಕನಿಷ್ಠ 25ರಿಂದ 30 ರೂಪಾಯಿ ಕೊಟ್ಟರಷ್ಟೆ ನಾಲ್ಕೈದು ಕಡ್ಡಿ ಸೊಪು್ಪ ಸಿಗುವ ಪರಿಸ್ಥಿತಿ ಎದುರಾಗಿದೆ.
ಆರ್ಭಟಿಸಿದ ಮಳೆ ಕಾರಣ: ವಾರದಿಂದ ವರುಣಾರ್ಭಟ ಜೋರಾಗಿದ್ದು, ಬಿರುಸು ಮಳೆಗೆ ಕೊತ್ತಂಬರಿ ಫಸಲು ನಾಶವಾಗಿದೆ. ಕಳೆದೆರಡು ತಿಂಗಳಿಂದ ಬಿಸಿಲಿನ ತಾಪಮಾನ ಮಿತಿಮೀರಿತ್ತು. ಗ್ರಾಮಾಂತರ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್​ವರೆಗೆ ತಲುಪಿತ್ತು. ಮಳೆಯ ತೀವ್ರ ಕೊರತೆ ಹಾಗೂ ಬಿಸಿಲಿನ ತಾಪಕ್ಕೆ ಬಹುತೇಕ ಬೆಳೆಗಾರರು ಸೊಪು್ಪ ಬೆಳೆಯಲು ಹಿಂದೇಟು ಹಾಕಿದ್ದರು. ನಂತರ ಮಳೆ ಆರಂಭವಾದ ದಿನಗಳಲ್ಲಿ ಮತ್ತೆ ಬೆಳೆಗಾರರು ಜಮೀನು ಹದಗೊಳಿಸಿ ಸೊಪು್ಪ ಬೆಳೆಯಲು ಮುಂದಾಗಿದ್ದರು. ಈ ಹೊತ್ತಿನಲ್ಲೇ ದಾಖಲೆ ಮಳೆ ಸುರಿದು, ಸೊಪ್ಪಿನ ಬೆಳೆ ಜಮೀನುಗಳಲ್ಲೇ ಕೊಳೆಯಲಾರಂಭಿಸಿದೆ. ಇದರಿಂದ ಎಲ್ಲ ಬಗೆಯ ಸೊಪ್ಪಿನ ದರ ಗಗನಮುಖಿಯಾಗಿದೆ. ಇದರ ನಡುವೆ ಬಹು ಅವಶ್ಯಕತೆಯ ಕೊತ್ತಂಬರಿ ಸೊಪ್ಪಿನ ದರ ಎಲ್ಲ ತರಕಾರಿ ಹಾಗೂ ಇನ್ನಿತರ ಸೊಪ್ಪಿನ ದರವನ್ನು ಹಿಂದಿಕ್ಕಿದೆ.
ತರಕಾರಿ ಬೆಲೆಗಳ ಬಿಸಿ ಏರಿಕೆ ನಡುವೆಯೇ ಸೊಪ್ಪಿನ ಬೆಲೆಯೂ ದುಬಾರಿಯಾಗಿದ್ದು, ಗ್ರಾಹಕರ ಜೇಬು ಸುಡುವಂತಾಗಿದೆ. ಅದರಲ್ಲೂ ಬಹುಬೇಡಿಕೆಯ ಕೊತ್ತಂಬರಿ ಸೊಪ್ಪಿನ ದರ ಗಗನಮುಖಿಯಾಗಿದ್ದು, ಗ್ರಾಹಕರಿಗೆ ತಲೆಬೇನೆ ತರಿಸಿದೆ. ಮೇ ತಿಂಗಳ ಆರಂಭದಲ್ಲಿ ಬಿಸಿಲಿನ ತಾಪಮಾನ ಹಾಗೂ ಮಳೆ ಕೊರತೆ ಕಾರಣದಿಂದ ಸೊಪ್ಪಿನ ದರ ಏರಿಕೆಯಾಗಿತ್ತು. ಇದೀಗ ಮೇ ಅಂತ್ಯದಿಂದ ಆರಂಭವಾದ ಬಿರು ಮಳೆಗೆ ಮತ್ತಷ್ಟು ದರ ಹೆಚ್ಚುವಂತಾಗಿದೆ.
ಹೋಟೆಲ್ ಉದ್ಯಮಕ್ಕೂ ಪೆಟ್ಟು: ಗ್ರಾಹಕರಿಗಷ್ಟೇ ಅಲ್ಲದೆ ಹೋಟೆಲ್ ಮತ್ತಿತರ ಆಹಾರ ಉದ್ಯಮಕ್ಕೂ ದೊಡ್ಡ ಪೆಟ್ಟು ಬಿದ್ದಿದೆ, ಪಾನಿಪುರಿ, ವಡೆಬೊಂಡ ವ್ಯಾಪಾರಿಗಳೂ ಕಂಗಾಲಾಗಿದ್ದಾರೆ. ಇಷ್ಟು ದುಬಾರಿ ಹಣ ತೆತ್ತು ಅಷ್ಟೇ ದರದಲ್ಲಿ ಗ್ರಾಹಕರಿಗೆ ತಿಂಡಿತಿನಿಸು ಪೂರೈಸುವುದು ಸವಾಲಿನ ಕೆಲಸವಾಗಿದೆ. ಮಾಂಸಾಹಾರಿ ಹೋಟೆಲ್ ಸೇರಿ ಎಲ್ಲ ಬಗೆಯ ಹೋಟೆಲ್​ನವರಿಗೆ ಕೊತ್ತಂಬರಿ ಸೊಪು್ಪ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಸೊಪ್ಪು ಬಳಕೆ ಹೆಚ್ಚು
ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿರುವ ಜನರು ಹೆಚ್ಚಿನ ಪ್ರಮಾಣದಲ್ಲಿ ವಿವಿಧ ಬಗೆಯ ಸೊಪ್ಪಿನ ಬಳಕೆಗೆ ಉತ್ಸುಕತೆ ತೋರಿಸುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಸೊಪ್ಪಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಅತಿವೃಷ್ಟಿ ಅನಾವೃಷ್ಟಿ ಕಾರಣದಿಂದ ಬೇಡಿಕೆಯಷ್ಟು ಸೊಪು್ಪ ಪೂರೈಕೆಯಾಗುತ್ತಿಲ್ಲ ಇದರಿಂದ ಸಹಜವಾಗಿಯೇ ಸೊಪ್ಪಿನ ದರ ಗಗನಮುಖಿ ಯಾಗಿದೆ.
ಎಲ್ಲ ಬಗೆಯ ಸೊಪ್ಪಿನ ದರ ಹೆಚ್ಚಳ
ಸೊಪ್ಪನ್ನು ಬಳಸಿ ತರಹೇವಾರಿ ಪಲ್ಯ, ಸಾಂಬಾರಿನ ಖಾದ್ಯಗಳನ್ನು ಸಿದ್ಧಪಡಿಸಲಾಗುತ್ತದೆ. ಸಾಮಾನ್ಯವಾಗಿ ಸೊಪು್ಪ ಬಳಸಿ ಮೊಸಪ್ಪಿನ ಸಾರು ಹೆಚ್ಚು ಮಾಡುವುದು ರೂಡಿ. ಏನಿಲ್ಲವೆಂದರೂ ಇದಕ್ಕೆ ನಾಲ್ಕೈದು ವಿಧದ ಸೊಪು್ಪ ಬಳಸಬೇಕು, ಈ ಹಿಂದೆ 50 ರೂಪಾಯಿ ಕೊಟ್ಟರೆ ನಾಲ್ಕೈದು ಬಗೆಯ ಸೊಪು್ಪ ಖರೀದಿಸಬಹುದಿತ್ತು. ಆದರೆ ಈಗ 100 ರೂಪಾಯಿ ಕೊಟ್ಟರೂ ಹಿಡಿಯಷ್ಟು ಸೊಪು್ಪ ಕೊಂಡೊಯ್ಯುವುದು ಕಷ್ಟಸಾಧ್ಯ ಎಂಬಂತಾಗಿದೆ. ಮೆಂತ್ಯಾ ಕಂತೆಗೆ 50, ಪಾಲಾಕು 60, ದಂಡು 40, ಅವರೆ 35 ರಿಂದ 40, ಸಬ್ಬಸಿಗೆ 50 ರಿಂದ 60 ರೂಪಾಯಿ ಹೀಗೆ ಏರಿಕೆಯಾಗಿದೆ. ಜತೆಗೆ ಮಾರುಕಟ್ಟೆಗಳಲ್ಲೇ ಸೊಪು್ಪ ಸಿಗುತ್ತಿಲ್ಲ. ಇನ್ನು ರಸ್ತೆ ಬದಿ ಮಾರುವವರು ಮನೆಗಳ ಬರುವ ತಳ್ಳುಗಾಡಿಯವರು ದುಬಾರಿ ದರಕ್ಕೆ ಹೆದರಿ ನಾಪತ್ತೆಯಾಗಿದ್ದಾರೆ.
ಕೊತ್ತಂಬರಿ ಸೊಪ್ಪನ್ನು ಬಳಸದಿದ್ದರೆ ಯಾವುದೇ ತಿನಿಸಿ ರುಚಿಸುವುದಿಲ್ಲ. ಹೋಟೆಲ್​ಗಳಿಗೆ ಬರುವ ಗ್ರಾಹಕರನ್ನು ಸಂತೃಪ್ತಗೊಳಿಸಿದಿದ್ದರೆ ನಮ್ಮ ವ್ಯಾಪಾರಕ್ಕೇ ಕುತ್ತು ಬರುತ್ತದೆ. ದರ ಎಷ್ಟೇ ಏರಿಕೆಯಾದರೂ ತಿನಿಸುಗಳ ತಯಾರಿಕೆಯಲ್ಲಿ ರಾಜಿ ಮಾಡಿಕೊಳ್ಳುವಂತಿಲ್ಲ. ಇದರಿಂದ ನಷ್ಟ ಎದುರಿಸಬೇಕಾದ ಪರಿಸ್ಥಿತಿ ನಿರ್ವಣವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + six =
Remember me
