ಗದಗ:ತಮ್ಮ ಹೆಂಡತಿಯನ್ನು ತವರು ಮನೆಗೆ ಬಿಟ್ಟು ಬರಲು ಬಂದಿದ್ದ ಹುಬ್ಬಳ್ಳಿಯ ವ್ಯಕ್ತಿಯೊಬ್ಬರಿಗೆ ಕರೊನಾ ಸೋಂಕು ಇದ್ದ ಹಿನ್ನೆಲೆಯಲ್ಲಿ ಹೆಂಡತಿ ತವರು ಹಾಗೂ ಅವರ ಅಕ್ಕಪಕ್ಕದ ಅನೇಕ ಮಂದಿಗೆ ಸೋಂಕು ಹರಡಿರುವ ಘಟನೆ ಗದಗ ತಾಲೂಕಿನ ಹರ್ತಿ ಗ್ರಾಮದಲ್ಲಿ ನಡೆದಿದೆ.
ಹರ್ತಿ ಗ್ರಾಮದಲ್ಲಿ ಇರುವ ತಮ್ಮ ಹೆಂಡತಿಯ ತವರಿಗೆ ಬಿಟ್ಟುಬರಲು ಈ ವ್ಯಕ್ತಿ ಬಂದಿದ್ದಾರೆ. ಆದರೆ ಬರುವ ಮೊದಲು ಅವರಿಗೆ ಕರೊನಾ ಸೋಂಕು ಇರುವುದು ತಿಳಿದಿರಲಿಲ್ಲ. ಮಾವನ ಮನೆಗೆ ಬಂದು ಹೆಂಡತಿ, ಮಗುವನ್ನು ಬಿಟ್ಟು ಜೂನ್ 6 ರಂದು ಅವರು ಹುಬ್ಬಳ್ಳಿಗೆ ವಾಪಸಾಗಿದ್ದಾರೆ.
ಮಾರನೆಯ ದಿನವೇ ಅಂದರೆ ಜೂನ್ 7 ರಂದು ಅವರಿಗೆ ಅನಾರೋಗ್ಯ ಬಾಧಿಸಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾದರು. ಮಾಮೂಲಿನಂತೆ ಅವರಿಗೂ ಕರೊನಾ ಟೆಸ್ಟ್​ ಮಾಡಿಸಿದಾಗ ಕರೊನಾ ಇರುವುದು ದೃಢಪಟ್ಟಿದೆ.
ಇದನ್ನೂ ಓದಿ:ಚೀನಾದ ಭಯಾನಕ ರಹಸ್ಯ ಬಯಲು: ಗಡಿ ಕಬಳಿಸಿ ಮೆಗಾಸಿಟಿ ನಿರ್ಮಾಣ!
ಅವರು ಹರ್ತಿ ಗ್ರಾಮಕ್ಕೆ ಹೋಗಿರುವ ವಿಷಯ ತಿಳಿಯುತ್ತಲೇ ಅಳಿಯನ ಸಂಪರ್ಕದಲ್ಲಿದ್ದವರನ್ನು ಟೆಸ್ಟ್ ಮಾಡಿದಾಗಹೆಂಡತಿಯ ಅಕ್ಕ, ಮಾವ ಸೇರಿದಂತೆ ಅನೇಕ ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಡೀ ಗ್ರಾಮವನ್ನು ಕಂಟೈನ್​ಮೆಂಟ್​ ಝೋನ್​ ಎಂದು ಘೋಷಣೆ ಮಾಡಲಾಗಿದೆ.
ಇದು ಒಂದೆಡೆಯಾದರೆ, ಇವರಿಂದ ಗ್ರಾಮದ ವೈದ್ಯನಿಗೂ ಸೋಂಕು ತಗುಲಿದೆ. ಆದರೆ ಅತ್ಯಂತ ವಿಷಾದದ ಸಂಗತಿ ಎಂದರೆ, ಅದಾಗಲೇ ಸುತ್ತಲಿನ ಹತ್ತಾರು ಗ್ರಾಮಗಳಿಗೆ ಈ ವೈದ್ಯ ಚಿಕಿತ್ಸೆಗೆಂದು ಹೋಗಿರುವ ಕಾರಣ, ಎಲ್ಲಾ ಗ್ರಾಮಗಳಲ್ಲಿಯೂ ಭೀತಿ ಆವರಿಸಿದೆ.
ಅಷ್ಟಕ್ಕೇ ಮುಗಿದಿಲ್ಲ, ಈ ವೈದ್ಯರ ಪತ್ನಿ ಶಿಕ್ಷಕಿಯಾಗಿದ್ದು, ಅವರೂ ಶಾಲೆಗೆ ಹೋಗಿರುವ ಕಾರಣ, ಆ ಎಲ್ಲಾ ಶಿಕ್ಷಕರಿಗೂ ಸೋಂಕಿನ ಭೀತಿ ಎದುರಾಗಿರುವ ಕಾರಣ, ಶಾಲೆಗೆ ಬೀಗ ಹಾಕಿ ಶಿಕ್ಷಕರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಹಾಗೇ ಡಾಕ್ಟರ್ ಸಂಪರ್ಕದಲ್ಲಿರುವವ ಪತ್ತೆ ಕಾರ್ಯವನ್ನು ಗ್ರಾಮೀಣ ಭಾಗದಲ್ಲಿ ಆರೋಗ್ಯ ಇಲಾಖೆ ಹಾಗೂ ಆಶಾ ಕಾರ್ಯಕರ್ತೆಯರು ಮಾಡುತ್ತಿದ್ದಾರೆ.
ಹೆಂಡತಿಯನ್ನು ಆಕೆ ಪಾಲಕರು ಬಿಡ್ತಿಲ್ಲ, ಕರೆಸಿಕೊಳ್ಳೋದು ಹೇಗೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen + 15 =
Remember me
