ಹೂವಿನಹಡಗಲಿ (ಬಳ್ಳಾರಿ):ಇವರ ಹೆಸರು ಹಾಲಮ್ಮ. ವಯಸ್ಸು ಬರೋಬ್ಬರಿ 100. ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯವರು. ಇವರೀಗ ಕರೊನಾ ಗೆದ್ದ ಕರ್ನಾಟಕದ ಮೊದಲ ಶತಾಯುಷಿ ಎಂಬ ಹೆಸರು ಪಡೆದಿದ್ದಾರೆ.
ಮನೆ​ಯಲ್ಲೇ ಚಿಕಿತ್ಸೆ ಪಡೆ​ದಿರುವ ಈ ಅಜ್ಜಿ, ಸಂಪೂರ್ಣ ಗುಣಮುಖರಾಗಿದ್ದಾರೆ.
ಸ್ಟೇಟ್‌ ಬ್ಯಾಂಕ್‌ ಇಂಡಿ​ಯಾದಲ್ಲಿ ಹಾಲಮ್ಮ ಮೊದಲು ಉದ್ಯೋಗಿಯಾಗಿದ್ದರು. ಇವರ ಮಗನಿಗೆ ಇದೇ ತಿಂಗಳ 3ರಂದು ಕರೊನಾ ಸೋಂಕು ತಗುಲಿದ್ದು ತಿಳಿದಿತ್ತು. ಅವರನ್ನು ಬಳ್ಳಾರಿಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ತಾಯಿ ಹಾಲಮ್ಮ, ಪತ್ನಿ ಮತ್ತು ಮಗನನ್ನು ಮನೆಯಲ್ಲೇ ಮನೆಯಲ್ಲಿಯೇ ಕ್ವಾರಂಟೈನ್‌ ಮಾಡಲಾಗಿತ್ತು. ಪರೀಕ್ಷೆ ಮಾಡಿದ್ದಾಗ ಎಲ್ಲರಲ್ಲಿಯೂ ಸೋಂಕು ದೃಢಪಟ್ಟಿತ್ತು.
ಮಗ ಬಿಟ್ಟು ಉಳಿದವರನ್ನು ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಅಜ್ಜಿ ಬಹುಬೇಗನೇ ಚೇತರಿಸಿಕೊಂಡಿದ್ದಾರೆ.
ಇದನ್ನೂ ಓದಿ:ಕರೊನಾ ಭಯವೇ ಇವರಿಗೆ ಬಂಡವಾಳ; ಮನೆಗೆ ಬರೋರ ಬಗ್ಗೆ ಇರಲಿ ಎಚ್ಚರ..!
ತಮ್ಮ ಈ ಯಶಸ್ಸಿನ ಗುಟ್ಟು ಹೇಳುವ ಶತಾಯುಷಿ ಅಜ್ಜಿ, ‘ನಾನು ಈ ಸೋಂಕಿಗೆ ಭಯ​ಪ​ಟ್ಟಿಲ್ಲ, ಇದು ಮಾರ​ಣಾಂತಿಕ ಕಾಯಿಲೆ ಅಲ್ಲ. ಯಾರೂ ಭಯ​ಪ​ಡ​ಬೇಡಿ’ ಎಂದಿದ್ದಾರೆ. ಧೈರ್ಯ ಎಲ್ಲದಕ್ಕೂ ಮುಖ್ಯವಾದದ್ದು, ಭಯ ಪಟ್ಟರೆ ಎಲ್ಲವೂ ನಷ್ಟವಾಗುತ್ತದೆ. ನಾನು ಬಿಸಿ ನೀರನ್ನು ಚೆನ್ನಾಗಿ ಕುಡಿಯುತ್ತಿದ್ದೆ. ಜತೆಗೆ ಔಷಧ ತೆಗೆದುಕೊಳ್ಳುತ್ತಿದ್ದೆ. ನಿತ್ಯ ಅನ್ನ, ಸಾಂಬಾರು, ಗಂಜಿ ಹಾಗೂ ಸೇಬು ಹಣ್ಣು ನಮ್ಮ ಆಹಾರವಾಗಿತ್ತು. ಇದರ ಜತೆಗೆ ಧೈರ್ಯ ಮುಖ್ಯವಾಗಿತ್ತು. ಆದ್ದರಿಂದ ನಾನು ಚೇತರಿಸಿಕೊಂಡಿದ್ದೇನೆ ಎನ್ನುವ ಹಾಲಮ್ಮ, ಸೋಂಕು ಬಂದಾಗ ಅಳುಕದೇ ಧೈರ್ಯದಿಂದ ಇರಿ ಎಂಬ ಕಿವಿಮಾತನ್ನೂ ಹೇಳಿದ್ದಾರೆ.
ಬೆಂಗಳೂರಿನ 99 ವರ್ಷದ ಅಜ್ಜಿ, ಚಿತ್ರದುರ್ಗದಲ್ಲಿ 96 ವರ್ಷದ ಅಜ್ಜಿ, ಬಳ್ಳಾರಿ ಕೋವಿಡ್‌ ಆಸ್ಪತ್ರೆಯಲ್ಲಿ 93 ವರ್ಷದ ವೃದ್ಧೆಯೊಬ್ಬರು ಇದಾಗಲೇ ಕರೊನಾದಿಂದ ಗುಣಮುಖರಾಗಿದ್ದಾರೆ. ಮುಂಬೈ​ನಲ್ಲಿ 101 ವರ್ಷದ ಅರ್ಜುನ ನರಿಂಗ್ರೇ​ಕ​ರ್‌ ಅವರು ಕೋವಿಡ್‌ ಗೆದ್ದಿದ್ದಾರೆ.
ಸ್ವದೇಶಿ ‘ಕೋವಾಕ್ಸಿನ್’‌ ಚಿಕಿತ್ಸೆಗೆ ಮುನ್ನುಡಿ: ಯುವಕನ ಮೇಲೆ ಪ್ರಯೋಗ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:eighteen − eight =
Remember me
