ಬೆಂಗಳೂರು:ಜಗತ್ತಿನ ಎಲ್ಲೆಡೆಯಂತೆ ರಾಜ್ಯದಲ್ಲೂ ಕರೊನಾ ಹಾವಳಿ ಇಟ್ಟಿರುವುದೇನೋ ನಿಜ. ಆದರೆ ಕರೊನಾ ಬಂದ ತಕ್ಷಣ ಭಯ ಬೀಳಬೇಕಾಗಿಲ್ಲ. ಏಕೆಂದರೆ ಇದುವರೆಗೆ ಸೋಂಕಿಗೆ ಒಳಗಾದವರಲ್ಲಿ ಸತ್ತವರಿಗಿಂತ ಚೇತರಿಸಿಕೊಂಡು ಗುಣವಾದವರೇ ಅತ್ಯಧಿಕ. ಗುಣವಾದವರು ಹಾಗೂ ಮೃತಪಟ್ಟವರ ಪ್ರಮಾಣಕ್ಕೂ ಅಜಗಜಾಂತರವಿದೆ.
ಈ ಮಾಹಿತಿಯನ್ನು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರೇ ಬಹಿರಂಗಪಡಿಸಿದ್ದಾರೆ. ರಾಜ್ಯದಲ್ಲಿ ಇಂದು ಹೊಸದಾಗಿ 1,630 ಕೋವಿಡ್-19 ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿವೆ. ಮತ್ತು ಗುಣಮುಖರ ಪೈಕಿ ಇವತ್ತೇ 1,333 ಜನ ಬಿಡುಗಡೆ ಹೊಂದಿದ್ದಾರೆ. ಇಂದು 1,22,454 ಟೆಸ್ಟ್ ನಡೆಸಲಾಗಿದ್ದು, ಅವುಗಳಲ್ಲಿ 1,02,480 (83.68%) RT-PCR ಟೆಸ್ಟ್ ಆಗಿವೆ. ಈವರೆಗೂ ರಾಜ್ಯದಲ್ಲಿ 8,41,432 ಜನ ಗುಣವಾಗಿದ್ದು, ಚೇತರಿಕೆ ದರ 95.82% ಮತ್ತು ಮರಣ ಪ್ರಮಾಣ 1.33% ರಷ್ಟಿದೆ ಎಂದು ಸಚಿವರು ತಿಳಿಸಿದ್ದಾರೆ.
ಅದಾಗ್ಯೂ ರಾಜ್ಯದಲ್ಲಿ 24,890 ಸಕ್ರಿಯ ಪ್ರಕರಣಗಳಿದ್ದು, ಆ ಪೈಕಿ ಗಂಭೀರ ರೋಗಲಕ್ಷಣಗಳಿಂದಾಗಿ 405 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ಒಂದೇ ದಿನ ಕರೊನಾಗೆ 19 ಮಂದಿ ಬಲಿಯಾಗಿದ್ದು, ಇದುವರೆಗೂ ಕರೊನಾದಿಂದಾಗಿ ಮೃತಪಟ್ಟವರ ಸಂಖ್ಯೆ 11,714ಕ್ಕೆ ತಲುಪಿದೆ.
ರಾಜ್ಯದಲ್ಲಿ ಇಂದು 1,630 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 1,333 ಜನ ಗುಣಮುಖ ಹೊಂದಿದ್ದಾರೆ. ಇಂದು 1,22,454 ಟೆಸ್ಟ್ ನಡೆಸಲಾಗಿದ್ದು, ಅವುಗಳಲ್ಲಿ 1,02,480 (83.68%) RT-PCR ಟೆಸ್ಟ್ ಆಗಿವೆ. ಈವರೆಗೂ ರಾಜ್ಯದಲ್ಲಿ 8,41,432 ಜನ ಗುಣಮುಖರಾಗಿದ್ದು ಚೇತರಿಕೆ ದರ 95.82% ಮತ್ತು ಮರಣ ಪ್ರಮಾಣ 1.33% ರಷ್ಟಿದೆ.@BSYBJP@DHFWKA
— Dr Sudhakar K (@mla_sudhakar)November 25, 2020

ಪಿಣರಾಯಿ ವಿಜಯನ್ ಈ ದೇಶದಲ್ಲೇ ಅತಿ ಭ್ರಷ್ಟ ಮುಖ್ಯಮಂತ್ರಿ; ಆರೋಪಿಸಿದ್ಯಾರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − ten =
Remember me
