ಬೆಂಗಳೂರು:ರಾಜ್ಯದಲ್ಲಿ ಮಂಗಳವಾರ ಹೊಸದಾಗಿ 8,191 ಕೋವಿಡ್​-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗಿನ ಸೋಂಕಿತರ ಒಟ್ಟು ಸಂಖ್ಯೆ 7,26,106ಗೆ ತಲುಪಿದೆ. ಆದಾಗ್ಯೂ ಕಳೆದ ಮೂರು ದಿನಗಳಿಂದ ಹೊಸದಾಗಿ ಪತ್ತೆಯಾಗುವ ಸೋಂಕಿತರಿಗಿಂತ ಆಸ್ಪತ್ರೆಯಿಂದ ಬಿಡುಗಡೆ ಆಗುತ್ತಿರುವವರ ಸಂಖ್ಯೆ ಅಧಿಕವಾಗಿರುವುದು ಸಾರ್ವಜನಿಕರ ಆತಂಕವನ್ನು ತಗ್ಗಿಸಿದೆ.
ಇದನ್ನೂ ಓದಿ:ಕರೊನಾ ಸೋಂಕು; ಎರಡು ತಿಂಗಳಲ್ಲೇ ಅತಿ ಕಡಿಮೆ, ಸೋಂಕಿನ ಪ್ರಮಾಣದಲ್ಲೂ ನಿರಂತರ ಇಳಿಕೆ..
ಗುಣಮುಖರ ಪೈಕಿ ಮಂಗಳವಾರ ಒಂದೇ ದಿನ 10,421 ಮಂದಿ ಆಸ್ಪತ್ರೆಗಳಿಂದ ಬಿಡುಗಡೆ ಆಗಿದ್ದು, ಇದುವರೆಗೆ ಗುಣವಾಗಿರುವವರ ಸಂಖ್ಯೆ 6,02,505ಕ್ಕೆ ಏರಿಕೆಯಾಗಿದೆ. ಆದರೆ ರಾಜ್ಯದಲ್ಲಿ ಇನ್ನೂ 1,13,459 ಸಕ್ರಿಯ ಪ್ರಕರಣಗಳಿದ್ದು, ಅವರಲ್ಲಿ ಗಂಭೀರ ಲಕ್ಷಣಗಳಿರುವ 919 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ:ಕರೊನಾ ಬುಲೆಟಿನ್​: ನಿನ್ನೆಗಿಂತ ಇಂದು ಚೆನ್ನ…
ಮತ್ತೊಂದೆಡೆ ಇವತ್ತೊಂದೇ ದಿನ 87 ಮಂದಿ ಕರೊನಾಗೆ ಬಲಿಯಾಗಿರುವುದು ವರದಿಯಾಗಿದ್ದು, ಈ ವರೆಗೆ ಕೋವಿಡ್​-19 ಸೋಂಕಿನಿಂದಾಗಿ 10,123 ಮಂದಿ ಮೃತಪಟ್ಟಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
