ಮಂಡ್ಯ:ಆರಂಭದಿಂದ ನಿರಾಳವಾಗಿದ್ದ ಮಂಡ್ಯ ಜಿಲ್ಲೆಗೆ ದೆಹಲಿಯ ನಿಜಾಮುದ್ದೀನ್​ನ ತಬ್ಲಿಘಿ ನಂಟಿನ ಜತೆಗೆ ಈಗ ನಂಜನಗೂಡಿನ ನಂಜು ಸೇರ್ಪಡೆಯಾಗಿದ್ದು ಸೋಂಕಿತರ ಸಂಖ್ಯೆ ಈಗ ಐದಕ್ಕೇರಿದೆ. ನಂಜನಗೂಡಿನ ಜುಬಿಲಿಯಂಟ್ ಕಾರ್ಖಾನೆಯಲ್ಲಿ ಮೊದಲಿಗೆ ಸೋಂಕು ದೃಢಪಟ್ಟ ವ್ಯಕ್ತಿ ಜತೆಯಲ್ಲಿ ಕೆಲಸ ಮಾಡುತ್ತಿದ್ದ 32 ವರ್ಷದ ಮಂಡ್ಯ ನಗರದ ಸ್ವರ್ಣಸಂದ್ರದ ಯುವಕನಿಗೂ ಸೋಂಕು ಇರುವುದು ದೃಢವಾಗಿದ್ದು ಮಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು. ಕರೊನಾ ಸೋಂಕು ದೃಢಪಟ್ಟ ಈತನಿಗೆ ಕರೊನಾಗೆ ಪೂರಕವಾದ ಯಾವುದೇ ರೋಗ ಲಕ್ಷಣಗಳು ಇರಲಿಲ್ಲ. ಆದರೆ, ಡಿಸ್ಚಾರ್ಜ್ ಮಾಡುವ ಮುನ್ನ ಕಾನೂನು ಪ್ರಕಾರ ಪರೀಕ್ಷೆಗೊಳಪಡಿಸಿದಾಗ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಈತನ ತಾಯಿ, ತಂಗಿ, ತಂಗಿ ಮಗಳನ್ನು ಕ್ವಾರಂಟೈನ್​ನಲ್ಲಿ ಇಡಲಾಗಿದೆ.
ಮೈಸೂರಲ್ಲಿ ಮತ್ತಿಬ್ಬರಿಗೆ ಸೋಂಕು:ನಂಜನಗೂಡಿನ ಜುಬಿಲೆಂಟ್ ಔಷಧ ಕಾರ್ಖಾನೆಯ ನೌಕರರ ಕುಟುಂಬದ ಇಬ್ಬರಿಗೆ ಕರೊನಾ ಸೋಂಕು ತಗುಲಿರುವುದು ಗುರುವಾರ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಮತ್ತೆ 2 ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 37ಕ್ಕೇರಿದೆ. ಈ ಪೈಕಿ ಒಬ್ಬ ಗುಣಮುಖನಾಗಿದ್ದಾನೆ. ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೋಂಕಿತ ರೋಗಿ ಸಂಖ್ಯೆ 104ರ ತಂದೆ ಮತ್ತು ರೋಗಿ ಸಂಖ್ಯೆ 159ರ ತಂದೆಗೆ ಕರೊನಾ ವೈರಸ್ ತಗುಲಿದೆ. ಇವರಿಬ್ಬರು ಕ್ರಮವಾಗಿ 55 ಮತ್ತು 68ರ ವಯೋಮಾನದವರು. ರೋಗ ಬಾಧಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಇವರನ್ನು ಈಗಾಗಲೇ ಹೋಮ್ ಕ್ವಾರಂಟೈನ್ ಇರಿಸಲಾಗಿತ್ತು. ಇದೀಗ ಇವರನ್ನು ಕೋವಿಡ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್​ಗೆ ಸ್ಥಳಾಂತರ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು. ಕಳೆದ ಎರಡು ದಿನಗಳಲ್ಲಿ ಮೈಸೂರಿನಲ್ಲಿ ಹೊಸದಾಗಿ ಕರೊನಾ ಬಾಧಿತರು ಪತ್ತೆಯಾಗಿರಲಿಲ್ಲ. ಇದರಿಂದ ಜಿಲ್ಲೆಯ ಜನರು ಕೂಡ ಕೊಂಚ ಸಮಾಧಾನಗೊಂಡಿದ್ದರು. ಆದರೆ, ಗುರುವಾರ ಮತ್ತೆ ಇಬ್ಬರಲ್ಲಿ ಕರೊನಾ ಸೋಂಕು ಇರುವುದು ಪತ್ತೆಯಾಗಿದೆ.
ಬಾಗಲಕೋಟೆಯಲ್ಲಿ ಮಕ್ಕಳಿಗೂ ಸೋಂಕು:ಜಿಲ್ಲೆಯ ಒಂದೇ ಕುಟುಂಬದ ಮೂವರು ಮಕ್ಕಳಿಗೆ ಕರೊನಾ ಸೋಂಕು ಪತ್ತೆ ಆಗಿದ್ದು, ರಾಜ್ಯದಲ್ಲಿ ಮೊದಲ ಪ್ರಕರಣ ಇದಾಗಿದೆ. 4, 9 ಮತ್ತು 13 ವರ್ಷ ವಯಸ್ಸಿನ ಮೂವರು ಮಕ್ಕಳಿಗೆ ಸೋಂಕು ಇರುವುದು ದೃಢಪಟ್ಟಿರುವುದು ಜಿಲ್ಲೆಯ ಜನರನ್ನು ಆತಂಕಕ್ಕೆ ತಳ್ಳಿದೆ. ಇತ್ತೀಚೆಗೆ ಸೋಂಕಿನಿಂದ ಮೃತಪಟ್ಟಿದ್ದ ವೃದ್ಧನ ಮನೆ ಪಕ್ಕದ ಕುಟುಂಬದ ಮಹಿಳೆಯೊಬ್ಬರಿಗೆ ಸೋಂಕು ಬಂದಿತ್ತು. ಇದೀಗ ಮುಂದುವರಿದು ಮಹಿಳೆಯ ಮಗ ಹಾಗೂ ಆಕೆಯ ಮೈದುನನ ಮಗ ಮತ್ತು ಮಗಳಿಗೆ ಸೋಂಕು ಇದೆ. ಮಕ್ಕಳ ಸಂಪರ್ಕದಲ್ಲಿ ಇದ್ದವರ ಬಗ್ಗೆಯೂ ಜಿಲ್ಲಾಡಳಿತ ಮಾಹಿತಿ ಸಂಗ್ರಹಿಸುತ್ತಿದೆ.
ಸೌದಿ ರಾಜಮನೆತನದ 150 ಮಂದಿಗೆ ಕರೊನಾ ವೈರಸ್​ ಸೋಂಕು: ಇಡೀ ಕುಟುಂಬ ಕ್ವಾರಂಟೈನ್​ನಲ್ಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
