ಬೆಂಗಳೂರು:ಮೇ ಆರಂಭದೊಂದಿಗೆ ತೀವ್ರಗತಿಯಲ್ಲಿ ಏರಿಕೆ ಕಂಡಿದ್ದ ಕರೊನಾ ಸೋಂಕು ಲಾಕ್​ಡೌನ್​ನಿಂದ ಕೊಂಚ ನಿಯಂತ್ರಣಕ್ಕೆ ಬಂದಿದ್ದು, ಜುಲೈ ವೇಳೆಗೆ ತೀವ್ರತೆ ತಗ್ಗಲಿದೆ. ಆದರೆ, 3ರಿಂದ 5 ತಿಂಗಳಲ್ಲಿ 3ನೇ ಅಲೆ ಬರುವುದು ನಿಶ್ಚಿತ. ಈಗಾಗಲೆ ಕೆಲ ದೇಶಗಳು ನಾಲ್ಕನೇ ಅಲೆ ಎದುರಿಸುತ್ತಿವೆ. ಹಾಗಾಗಿ ಇನ್ನೂ ಒಂದು ವರ್ಷ ಕೋವಿಡ್ ನಿಯಮಗಳ ಪಾಲನೆ ಅತ್ಯವಶ್ಯಕ ಎಂದು ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಚಳಿಗಾಲದಲ್ಲಿ ಈ ವೈರಾಣು ಮತ್ತೆ ರೂಪಾಂತರಗೊಳ್ಳುವ ಸಾಧ್ಯತೆ ಇದೆ. ಅದರ ತೀವ್ರತೆ ಮತ್ತು ಹರಡುವಿಕೆ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ. ಜನರ ವರ್ತನೆ ಮತ್ತು ರೋಗ ಎದುರಿಸಲು ಮಾಡಿಕೊಳ್ಳುವ ಸಿದ್ಧತೆಯನ್ನು ಅವಲಂಬಿಸಿರುತ್ತದೆ ಎನ್ನುತ್ತಾರೆ ತಜ್ಞರು. ಆದರೆ ಎಚ್ಚರ ವಹಿಸದಿದ್ದರೆ ಮಕ್ಕಳಿಗೆ ಹಾಗೂ ಹದಿಹರೆಯದವರಿಗೆ 3ನೇ ಅಲೆ ಹೆಚ್ಚಿನ ಅಪಾಯ ಎದುರಾಗಲಿದೆ ಎಂದು ಎಚ್ಚರಿಸಿದ್ದಾರೆ. ಯಾವುದೇ ವೈರಾಣು/ಅಲೆ ತೀವ್ರತೆ ಇಳಿಮುಖವಾದ ನಂತರ ಮತ್ತೊಂದು ಅಲೆ ಬರಲು 3-5 ತಿಂಗಳ ಅವಧಿ ಬೇಕು. ಅದರಂತೆ, ರಾಜ್ಯದಲ್ಲಿ ವರ್ಷಾಂತ್ಯ ಇಲ್ಲವೆ ಮುಂದಿನ ವರ್ಷದ ಆರಂಭದಲ್ಲಿ 3ನೇ ಅಲೆ ಎದುರಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಹಾಗೂ ವೈರಾಣು ತಜ್ಞ ಡಾ.ವಿ.ರವಿ.
ಮಕ್ಕಳ ಬಗ್ಗೆ ಎಚ್ಚರ:ಮೊದಲ ಅಲೆಗೆ ಹೆಚ್ಚಿನ ಸಂಖ್ಯೆಯಲ್ಲಿ 60 ವರ್ಷ ಮೇಲ್ಪಟ್ಟವರು ನಲುಗಿದ್ದರು. ಇದೀಗ 2ನೇ ಅಲೆಯಲ್ಲಿ ಮಧ್ಯ ವಯಸ್ಕರು ಅಧಿಕ ಸಂಖ್ಯೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣೆ ಅಭಿಯಾನ ನಡೆಯುತ್ತಿದ್ದು, ಈವಯೋಮಾನದವರಿಗೆಮೂರನೇ ಅಲೆ ಅಪಾಯ ಕಡಿಮೆ. ಆದರೆ ಮಕ್ಕಳು, ಹದಿಹರೆಯ ದವರಿಗೆ ಲಸಿಕೆ ಲಭ್ಯವಿಲ್ಲದ ಕಾರಣ ಹೆಚ್ಚು ಅಪಾಯ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಜನರು ಜಾಗೃತರಾಗದಿದ್ದರೆ ಕೋವಿಡ್ 3ನೇ ಅಲೆ ಮಾತ್ರವಲ್ಲ, 4-5ನೇ ಅಲೆಗಳೂ ಬರುತ್ತವೆ. ಹಾಗಾಗಿ ಇದರ ನಿಯಂತ್ರಣಕ್ಕೆ ಇರುವುದು ಒಂದೇ ಪರಿಹಾರ ಸಾಮಾಜಿಕ ಲಸಿಕೆ. ಅಂದರೆ ಮಾಸ್ಕ್, ಸಾಮಾಜಿಕ ಅಂತರ ಮತ್ತು ನೈರ್ಮಲ್ಯ. ಇವುಗಳನ್ನು ಪಾಲಿಸ ದಿದ್ದರೆ ಯಾವ ಲಸಿಕೆ ಪಡೆದರೂ ಪ್ರಯೋಜನವಿಲ್ಲ. ಹಾಗಾಗಿ ಲಸಿಕೆ ಪಡೆದಿರಲಿ, ಇಲ್ಲದಿರಲಿ ಈ ನಿಯಮಗಳನ್ನು ತಪ್ಪದೇ ಪಾಲಿಸಬೇಕು.
|ಡಾ.ವಿ.ರವಿವೈರಾಣು ತಜ್ಞ
ಗುಂಡ್ಲುಪೇಟೆ:ಕರೊನಾ ಸೋಂಕಿನಿಂದ ಮೃತಪಟ್ಟ ಮಹಿಳೆಯ ಮೃತದೇಹ ನೀಡದಿದ್ದರಿಂದ ಆಕ್ರೋಶಗೊಂಡ ಸಂಬಂಧಿಕರು ಗುರá-ವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಿಟ ಗಾಜá-ಗಳನ್ನು ಪುಡಿ ಮಾಡಿ ದಾಂಧಲೆ ನಡೆಸಿದರು. ಪಟ್ಟಣದ ನಾಯಕರ ಬೀದಿಯ ನಿವಾಸಿ ಗಂಗಮ್ಮ(52) ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ವಿಷಯ ತಿಳಿದ ಸಂಬಂಧಿಕರು ಆಸ್ಪತ್ರೆಗೆ ಆಗಮಿಸಿ ಶವವನ್ನು ವಶಕ್ಕೆ ಕೊಡುವಂತೆ ಒತ್ತಾಯಿಸಿದರು. ಸ್ವಂತ ಭೂಮಿಯಿದ್ದರೆ ಮಾತ್ರ ಶವವನ್ನು ವಾರಸುದಾರರ ವಶಕ್ಕೆ ನೀಡಲಾಗುವುದು ಎಂದು ಸಿಬ್ಬಂದಿ ತಿಳಿಸಿದ್ದಾರೆ. ಆದರೆ ಇದಕ್ಕೆ ಒಪ್ಪದ ಸಂಬಂಧಿಕರು ಆಕ್ರೋಶಗೊಂಡು ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರು. ನಂತರ ಮೃತದೇಹವನ್ನು ಪಟ್ಟಣದ ಕೋವಿಡ್ ಸ್ಮಶಾನದಲ್ಲಿ ನಿಯಮಾನುಸಾರ ಅಂತ್ಯಕ್ರಿಯೆ ನಡೆಸಲಾಯಿತು.
ರಾಜ್ಯದಲ್ಲಿ ಕಳೆದ 3 ದಿನಗಳಿಂದ ಸೋಂಕು ಪ್ರಕರಣಗಳ ಸಂಖ್ಯೆ ಕೊಂಚ ಇಳಿಕೆಯಾಗಿದ್ದು, ಗುರುವಾರ 35,297 ಹೊಸ ಪ್ರಕರಣ ವರದಿಯಾಗಿವೆ. 344 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ದಿನದ ಸೋಂಕು ಪ್ರಮಾಣ ದರ ಶೇ. 27.64ಕ್ಕೆ ಹಾಗೂ ಮರಣ ಪ್ರಮಾಣದ ದರ ಶೇ 0.97ಕ್ಕೆ ಇಳಿಕೆಯಾಗಿರುವುದು ಕೊಂಚ ನಿರಾಳತೆ ಮೂಡಿಸಿದೆ. ದಿನದ ಸೋಂಕು ಪ್ರಮಾಣ ದರ ಶೇ.33.99 ಹಾಗೂ ಮರಣ ಪ್ರಮಾಣ ದರ ಶೇ.1.21 ಇತ್ತು. ಮೇ 8ರಂದು 47,563 (482 ಸಾವು), ಮೇ 9ಕ್ಕೆ 47,930 (490 ಸಾವು), ಮೇ 10- 39,305 (596 ಸಾವು), ಮೇ 11- 39, 510 (480 ಸಾವು), ಮೇ 12ರಂದು 39,998 (517 ಸಾವು) ಪ್ರಕರಣಗಳು ವರದಿಯಾಗಿತ್ತು.
ರಾಜಧಾನಿಯಲ್ಲೂ ತಗ್ಗಿದ ಕೇಸ್:ಬೆಂಗಳೂರಿನಲ್ಲಿ 15,191, ಬಳ್ಳಾರಿ 1,865, ತುಮಕೂರು 1,798, ಮೈಸೂರು 1,260, ಮಂಡ್ಯ 1,153, ಬೆಂ.ಗ್ರಾಮಾಂತರ 1,079 ಸೇರಿ ರಾಜ್ಯದಲ್ಲಿ 35,297 ಸೋಂಕು ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 20.88 ಲಕ್ಷ ಮೀರಿದೆ. ಸಕ್ರಿಯ ಪರಕರಣಗಳ ಸಂಖ್ಯೆ 5.93 ಲಕ್ಷಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ 161, ಮೈಸೂರು 15, ಉತ್ತರ ಕನ್ನಡ ಮತ್ತು ಬಳ್ಳಾರಿ 14, ಬೆಂ.ಗ್ರಾಮಾಂತರ 13, ತುಮಕೂರು ಮತ್ತು ಮಂಡ್ಯ 11, ಹಾಸನ ಮತ್ತು ಶಿವಮೊಗ್ಗ 10 ಸೇರಿ 344 ಮಂದಿ ಸೋಂಕಿಗೆ ಬಲಿಯಾಗಿದ್ದು, ಈವರೆಗಿನ ಮೃತರ ಸಂಖ್ಯೆ 20,712 ತಲುಪಿದೆ. 34,057 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಒಟ್ಟು ಸಂಖ್ಯೆ 14.74 ಲಕ್ಷ ದಾಟಿದೆ.




ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
