ಬೆಂಗಳೂರು: ಪ್ರಯಾಣಿಕರೇ ಎಚ್ಚರ, ರಾತ್ರಿ 10 ಗಂಟೆಯೊಳಗೆ ಮನೆ ಸೇರಿಕೊಳ್ಳೋಕೆ ರೆಡಿಯಾಗಿದೆ. ಹೊಸ ರೂಪಾಂತರ ಕರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಇಂದಿನಿಂದ(ಡಿ.23) ಜ.2ರ ವರೆಗೆ ನೈಟ್​ ಕರ್ಫ್ಯೂ ಜಾರಿಯಲ್ಲಿದ್ದು, ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಯೂ ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ಬಂದ್ ಆಗಲಿದೆ.
ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ ಸಂಚಾರವೂ ರಾತ್ರಿ 10ರ ಬಳಿಕ ಸ್ಥಗಿತಗೊಳ್ಳಲಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ನೈಟ್​ ಕರ್ಫ್ಯೂ ಹಿನ್ನೆಲೆ ರಾತ್ರಿ ವೇಳೆ ಬಿಎಂಟಿಸಿ ಬಸ್​ ಬಂದ್​ ಆಗಲಿವೆ. ಆದರೆ ರಾತ್ರಿ ವೇಳೆ ಸಂಚರಿಸುವ ಇತರ ಬಸ್​ಗಳು ರಾತ್ರಿ 10ರೊಳಗೆ ಬೆಂಗಳೂರು ಬಿಡಬೇಕು. ಬೆಳಗ್ಗೆ 6 ಗಂಟೆಯೊಳಗೆ ನಿಗದಿತ ಸ್ಥಳ ತಲುಪುವಂತಿರಬೇಕು. ಸ್ವಲ್ಪ ಹೊತ್ತಿನಲ್ಲೇ ಮಾರ್ಗಸೂಚಿ ಕೈ ಸೇರಲಿದೆ. ಆ ನಂತರ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.ಇದನ್ನೂ ಓದಿರಿಹೊಸ ರೂಪಾಂತರ ಕರೊನಾ ಭೀತಿ: ಇಂದಿನಿಂದ ಮತ್ತೆ ನೈಟ್​ ಕರ್ಫ್ಯೂ ಜಾರಿ
ಒಟ್ಟಿನಲ್ಲಿ ನ್ಯೂ ಇಯರ್​ ಮತ್ತು ಕ್ರಿಸ್​ಮಸ್​ ಆಚರಣೆಯ ಸಂಭ್ರಮದಲ್ಲಿದ್ದ ಬಹುತೇಕರಿಗೆ ‘ಬ್ರಿಟನ್​’ ಕರೊನಾ ನಿರಾಶೆ ಜತೆಗೆ ಆತಂಕವನ್ನೂ ಮೂಡಿಸಿದೆ. ಸಂಜೆ ವೇಳೆಗೆ ನೈಟ್​ ಕರ್ಫ್ಯೂ ಬಗ್ಗೆ ಸ್ಪಷ್ಟತೆ ಸಿಗಲಿದೆ.
ಗಂಡನ ರಾಸಲೀಲೆ ವೃತ್ತಾಂತ ಬಿಚ್ಚಿಟ್ಟ ಹೆಂಡತಿ! ಈತನ ಚಾನ್ಸ್​ ಆಸೆಗೆ ಬಲಿಯಾದ್ರೆ ಬದುಕೇ ನರಕ…

ಬೈಕ್​ನಲ್ಲಿ ಕುಳಿತು ನಿದ್ರೆಗೆ ಜಾರಿದ ತಾಯಿ-ಮಕ್ಕಳು ತರಗೆಲೆಯಂತೆ ರಸ್ತೆಗೆ ಉರುಳಿದರು! ಬೆಚ್ಚಿಬೀಳಿಸುತ್ತೆ ಈ ದೃಶ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − one =
Remember me
