ಬೆಂಗಳೂರು:ಹೊಸ ರೂಪಾಂತರ ಕರೊನಾ ಭೀತಿ ಹಿನ್ನೆಲೆಯಲ್ಲಿ ಇಂದಿನಿಂದಲೇ ಜಾರಿಯಾಗಿದ್ದ ಕರ್ಫ್ಯೂನಲ್ಲಿ ಸಮಯ ಮತ್ತು ದಿನಾಂಕದಲ್ಲಿ ಬದಲವಾಣೆ ಮಾಡಿ ರಾಜ್ಯ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ.
ನೈಟ್​ ಕರ್ಫ್ಯೂ ಇಂದು(ಬುಧವಾರ) ರಾತ್ರಿ 10ರಿಂದಲೇ ಜಾರಿ ಆಗಲಿದೆ ಎಂದು ಬುಧವಾರ ಬೆಳಗ್ಗೆಯಷ್ಟೇ ಸಿಎಂ ಯಡಿಯೂರಪ್ಪ ಘೋಷಿಸಿದ್ದರು. ಅದರಂತೆ ಕರ್ನಾಟಕದಲ್ಲಿ ರಾತ್ರಿ 10 ರಿಂದ ಬೆಳಗ್ಗೆ 6ರ ವರೆಗೆ ಕರ್ಫ್ಯೂ ಜಾರಿಯಲ್ಲಿರಬೇಕಿತ್ತು. ಆದರೀಗ ಈ ಆದೇಶ ಇಂದಿನಿಂದಲ್ಲ ನಾಳೆಯಿಂದ (ಗುರುವಾರ) ಜಾರಿಗೆ ಬರಲಿದೆ. ಅಲ್ಲದೆ ರಾತ್ರಿ 11 ರಿಂದ ಬೆಳಗಿನ ಜಾವ 5ರ ವರೆಗೆ ಮಾತ್ರ ಕರ್ಫ್ಯೂ ಇರಲಿದೆ ಎಂದು ಸಿಎಂ ಬಿ.ಎಸ್​.ಯಡಿಯೂರಪ್ಪ ಆದೇಶಿಸಿದ್ದಾರೆ.
ಲಂಡನ್​ನಲ್ಲಿ ಪತ್ತೆಯಾದ ಹೊಸ ಪ್ರಭೇದ ಕರೊನಾ ವೈರಸ್​ ಹಾವಳಿ ತಡೆಗೆ ರಾಜ್ಯಾದ್ಯಂತ ಡಿ.24ರಿಂದ ಜ.2ರ ಬೆಳಗಿನ ಜಾವ 5 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಇಂದಿನಿಂದ ಜಾರಿ ಮಾಡಲು ಉದ್ದೇಶಿಸಿದ್ದ ರಾತ್ರಿ ಕರ್ಫ್ಯೂ ಬದಲಾಗಿ ನಾಳೆ, ಅಂದರೆ ದಿನಾಂಕ 24.12.2020 ರಿಂದ ಜನವರಿ 01, 2021 ರವರೆಗೆ, ರಾತ್ರಿ 11:00 ಗಂಟೆಯಿಂದ ಬೆಳಗ್ಗೆ 5:00 ಗಂಟೆಯವರೆಗೆ (ದಿನಾಂಕ 02.01.2021ರ ಬೆಳಗ್ಗೆ 5:00 ಗಂಟೆ) ಜಾರಿಯಲ್ಲಿರುತ್ತದೆ. (1/2)
— CM of Karnataka (@CMofKarnataka)December 23, 2020

ಕೇಂದ್ರ ಸರ್ಕಾರದ ಸಲಹೆ ಹಾಗೂ ತಜ್ಞರ ಅಭಿಪ್ರಾಯದಂತೆ ರೂಪಾಂತರ ಕರೊನಾ ವೈರಾಣು ಸೋಂಕು ನಿಯಂತ್ರಿಸಲು ಈ ಕ್ರಮ ಅನಿವಾರ್ಯ ಎಂದು ಸಮರ್ಥಿಸಿಕೊಂಡಿದ್ದಾರೆ. ಆಸ್ಪತ್ರೆ, ಔಷಧ ಅಂಗಡಿಯಂತಹ ತುರ್ತು ಅಗತ್ಯ ಸೇವೆಗೆ ನಿರ್ಬಂಧ ಇರುವುದಿಲ್ಲ.ಈ ಮೊದಲು ರಾತ್ರಿ 10ರಿಂ ಬೆಳಗ್ಗೆ 6ರವರೆಗೆ ಕರ್ಫ್ಯೂ ಇರಲಿದೆ ಎಂದು ಸಿಎಂ ಹೇಳಿದ್ದರು. ಸಂಜೆ ವೇಳೆಗೆ ನಿರ್ಧಾರದಲ್ಲಿ ಸ್ವಲ್ಪ ಸಡಿಸಿರುವ ಸಿಎಂ, ಸಮಯ ಮತ್ತು ದಿನಾಂಕದಲ್ಲೂ ಬದಲಾವಣೆ ಮಾಡಿ ಟ್ವೀಟ್​ ಮಾಡಿದ್ದಾರೆ.
ಕುಮಾರಸ್ವಾಮಿ ಈಗಲೂ… ಮುಂದೆಯೂ ನನ್ನ ಸ್ನೇಹಿತ ಎಂದ ಡಿಕೆಶಿ

ನವ ವಿವಾಹಿತೆಯನ್ನು ಕೊಂದು ಮನೆಯಲ್ಲೇ ಹೂತಿಟ್ಟ! 15 ದಿನದ ಬಳಿಕ ಬಯಲಾಯ್ತು ರಹಸ್ಯ

ಪತ್ನಿ ಊರಿಗೆ ಹೋದಳೆಂದು ಸ್ನೇಹಿತೆಯನ್ನ ಮನೆಗೆ ಕರೆಸಿಕೊಂಡ ಟೆಕ್ಕಿಗೆ ಕಾದಿತ್ತು ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 6 =
Remember me
