ಬೆಂಗಳೂರು:ರಾಜ್ಯದಲ್ಲಿ ಅ.12ರ ವೇಳೆಗೆ ಕೋವಿಡ್-19 ಸೋಂಕಿತರ ಸಂಖ್ಯೆ 7 ಲಕ್ಷಕ್ಕೆ ಏರಿಕೆಯಾಗಲಿದ್ದು, ಸಾವಿನ ಸಂಖ್ಯೆ 11 ಸಾವಿರ ಗಡಿ ದಾಟಲಿದೆ. ಹೀಗಾಗಿ ಮುಂಬರುವ ಕೆಲ ವಾರಗಳು ರಾಜ್ಯಕ್ಕೆ ನಿರ್ಣಾಯಕ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಸದ್ಯ ರಾಜ್ಯದಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗಿದ್ದರೂ, ಕಡಿಮೆ ಮರಣ ಪ್ರಮಾಣದೊಂದಿಗೆ ಉತ್ತಮ ಸ್ಥಾನದಲ್ಲಿದೆ. ಆದರೆ ಕೋವಿಡ್ ನಿಯಂತ್ರಣ ಕುರಿತು ಕಾರ್ಯಕ್ಷಮತೆ ಹೆಚ್ಚಿಸುವುದರ ಜತೆಗೆ ಸುಧಾರಣಾ ಮಾರ್ಗಗಳನ್ನು ಕಂಡುಕೊಳ್ಳದಿದ್ದರೆ, ಕರ್ನಾಟಕ ಮಹಾರಾಷ್ಟ್ರ ಆಗುವುದಕ್ಕೆ ಹೆಚ್ಚು ಸಮಯ ಬೇಕಿಲ್ಲ ಎಂದಿದ್ದಾರೆ.
ಆರೋಗ್ಯ ಸೇವೆ ಬಲಪಡಿಸಬೇಕು: ಕೋವಿಡ್ ಕುರಿತು ಅಧ್ಯಯನ ನಡೆಸಿರುವ ಪಬ್ಲಿಕ್ ಹೆಲ್ತ್ ಫೌಂಡೇಷನ್ ಆಫ್ ಇಂಡಿಯಾ ಮತ್ತು ಮ್ಯಾನೇಜ್ಮೆಂಟ್ ಕನ್ಸಲ್ಟಿಂಗ್ ಸಂಸ್ಥೆ ಪ್ರಾಕ್ಸಿಮಾ ಒಳಗೊಂಡ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಪ್ರಾಜೆಕ್ಟ್ ಜೀವನ್ ರಕ್ಷಾ, ಕೋವಿಡ್-19 ಪರೀಕ್ಷೆ ಒಂದು ನಿರ್ದಿಷ್ಟ ಸಮಯದಲ್ಲಿ ಒಂದು ಪ್ರದೇಶದಲ್ಲಿ ವೈರಸ್ ಹರಡುವಿಕೆ ಪ್ರಮಾಣ ಅರಿಯಲು ಪ್ರಬಲ ಸಾಧನವಾಗಿದೆ. ಆದರೆ ರೋಗಿಗಳು ಮತ್ತು ಮೃತರ ಶೇಕಡವಾರು ಪ್ರಮಾಣ ಅರಿಯಲು ವೈದ್ಯಕೀಯ ಹಸ್ತಕ್ಷೇಪದ ಅಗತ್ಯವಿದ್ದು, ಇದು ರಾಜ್ಯಗಳ ಪ್ರಗತಿಯನ್ನು ನಿರ್ಣಯಿಸಲು ನೆರವಾಗಲಿದೆ ಎಂದು ತಿಳಿಸಿದೆ.
ಗ್ರಾಮೀಣ ಪ್ರದೇಶದಲ್ಲಿ ರೋಗ ವೇಗವಾಗಿ ಹರಡುತ್ತಿದ್ದು, ಅಲ್ಲಿನ ಸರ್ಕಾರಿ ಆಸ್ಪತ್ರೆಗಳ ಜತೆಗೆ ಖಾಸಗಿ ಆಸ್ಪತ್ರೆಗಳ ಸೇವೆಯನ್ನು ಬಲಪಡಿಸಿ ಬಳಕೆ ಮಾಡಿಕೊಳ್ಳಬೇಕು. ಕಡಿಮೆ ಸೋಂಕು ಪರೀಕ್ಷೆ ಹಾಗೂ ವರದಿ ವಿಳಂಬದಿಂದಾಗಿ ಸೋಂಕು ಉಲ್ಬಣಿಸಿದ್ದು, ವೇಗವಾಗಿ ಹರಡಲು ಕಾರಣವಾಗಿದೆ ಎಂದು ವರದಿ ಹೇಳಿದೆ.
ರಾಜ್ಯದಲ್ಲಿ ಕಳೆದ ಎರಡು ತಿಂಗಳಿನಿಂದ ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಜುಲೈನಲ್ಲಿ ಶೇ. 9.18, ಆಗಸ್ಟ್​ನಲ್ಲಿ ಶೇ. 11.82 ಇದ್ದ ಸೋಂಕು ಪ್ರಮಾಣ ಸೆ.18ರ ವೇಳೆಗೆ 12.22ಕ್ಕೆ ಏರಿಕೆಯಾಗಿದೆ. ಪರೀಕ್ಷೆ ಪ್ರಮಾಣ ಹೆಚ್ಚಳವಾದ್ದರಿಂದ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗುತ್ತಿದೆ. ಮತ್ತೊಂದೆಡೆ ಜುಲೈನಲ್ಲಿ ಶೇ. 40.11, ಆಗಸ್ಟ್​ನಲ್ಲಿ ಶೇ. 72.85 ಇದ್ದ ಚೇತರಿಕೆ ಪ್ರಮಾಣ ಈಗ ಶೇ. 78,33ಕ್ಕೆ ತಲುಪಿರುವುದು ಕೋವಿಡ್ ಭೀತಿಯ ನಡುವೆಯೂ ಕೊಂಚ ಸಮಾಧಾನ ತಂದಿದೆ. ಆದರೆ ಪರೀಕ್ಷೆ ಹೆಚ್ಚಾಗಿ ಸೋಂಕು ಪ್ರಮಾಣ ಶೇ. 5ಕ್ಕಿಂತ ಕಡಿಮೆಯಾದರೆ ಸೋಂಕು ನಿಯಂತ್ರಣ ಎಂದು ಹೇಳಬಹುದು ಎನ್ನುತ್ತಾರೆ ತಜ್ಞರು.
ಬೆಂಗಳೂರು:ರಾಜ್ಯದಲ್ಲಿ ಕೋವಿಡ್ -19 ಆರ್ಭಟ ಮುಂದುವರೆದಿದ್ದು, ಶನಿವಾರ 114 ಸೋಂಕಿತರ ಸಾವಿನೊಂದಿಗೆ ಮೃತರ ಸಂಖ್ಯೆ 8 ಸಾವಿರ ಗಡಿ ಸಮೀಪಿಸಿದೆ. ಮತ್ತೊಂದೆಡೆ 10,815 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದುವ ಮೂಲಕ ಗುಣಮುಖರ ಸಂಖ್ಯೆ 4 ಲಕ್ಷ ಗಡಿ ದಾಟಿದೆ. 8,364 ಸೋಂಕು ಪ್ರಕರಣಗಳೊಂದಿಗೆ ಸೋಂಕಿತರ ಸಂಖ್ಯೆ 5.11 ಲಕ್ಷ ತಲುಪಿದೆ. 98,564 ಸಕ್ರಿಯ ಪ್ರಕರಣಗಳಿದ್ದು, 822 ಮಂದಿ ತುರ್ತು ನಿಗಾ ಘಟಕದಲ್ಲಿದ್ದಾರೆ.
ಎಲ್ಲೆಲ್ಲಿ ಹೊಸ ಪ್ರಕರಣಗಳು?:ಬೆಂ.ನಗರ 3,733 (33 ಸಾವು), ಮೈಸೂರು 626 (12), ದಕ್ಷಿಣ ಕನ್ನಡ 432 (5), ಗದಗ 391, ಬಳ್ಳಾರಿ 300 (7), ಧಾರವಾಡ 264 (5), ಉಡುಪಿ 215 (1), ಬೆಂ.ಗ್ರಾಮಾಂತರ 189, ಚಿಕ್ಕಮಗಳೂರು 165 (1), ದಾವಣಗೆರೆ 163 (3), ತುಮಕೂರು 159 (4), ರಾಯಚೂರು 156 (1), ಬಾಗಲಕೋಟೆ 152 (1), ಉತ್ತರ ಕನ್ನಡ 129 (6), ಯಾದಗಿರಿ 127, ಕಲಬುರಗಿ 110 (3), ಹಾವೇರಿ 107 (2), ಶಿವಮೊಗ್ಗ 106 (1), ಬೆಳಗಾವಿ 100 (6), ಕೊಪ್ಪಳ 96 (7), ಮಂಡ್ಯ 94 (2), ಕೋಲಾರ 91, ಚಿತ್ರದುರ್ಗ 84, ವಿಜಯಪುರ 87 (2), ಚಿಕ್ಕಬಳ್ಳಾಪುರ 89, ಚಾ.ನಗರ 72 (7), ರಾಮನಗರ 47, ಕೊಡಗು 38, ಬೀದರ್ 23, ಹಾಸನ 19 (5).
ಜಿಪಂ ಅಧ್ಯಕ್ಷ ಕರೊನಾಕ್ಕೆ ಬಲಿ:ಹಾವೇರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸನಗೌಡ ದೇಸಾಯಿ(50) ಅವರು ಕರೊನಾಕ್ಕೆ ಶನಿವಾರ ಬಲಿಯಾಗಿದ್ದಾರೆ.
ಕರೊನಾ ಸೋಂಕಿನ ಹೆದರಿಕೆ, ನಿರ್ಲಕ್ಷತೆ ಬದಲಿಗೆ ಎಚ್ಚರಿಕೆ ವಹಿಸುವುದು ಅತೀ ಮುಖ್ಯ. ರೋಗ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಸಾರ್ವಜನಿಕವಾಗಿ ಸೋಂಕು ಹರಡುವುದನ್ನು ತಡೆಯಬಹುದಾಗಿದೆ.
| ಡಾ. ಸಿ.ಎನ್. ಮಂಜುನಾಥ್,ನಿರ್ದೇಶಕ, ಜಯದೇವ ಹೃದ್ರೋಗ ಸಂಸ್ಥೆ
ಲಾಕ್​ಡೌನ್ ನಿಯಮ ಸಡಿಲಿಕೆಯಿಂದ ಜನ ಸಂಚಾರ ಹೆಚ್ಚಾಗಿದ್ದು, ಈ ಮೊದಲು ತಜ್ಞರು ಹೇಳಿದ್ದಂತೆ ಸೆಪ್ಟೆಂಬರ್​ನಲ್ಲಿ ಸೋಂಕು ತೀವ್ರವಾಗಿ ಏರಿಕೆ ಕಂಡಿದೆ. 18 ದಿನಗಳಲ್ಲಿ 1.60 ಲಕ್ಷ ಪ್ರಕರಣ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 5 ಲಕ್ಷ ಮೀರಿದೆ. 1,313 ಮಂದಿ ಬಲಿಯಾಗಿದ್ದಾರೆ. ಮಾಸಾಂತ್ಯಕ್ಕೆ ಪ್ರಕರಣಗಳು 6 ಲಕ್ಷ ಗಡಿ ದಾಟಲಿದೆ. ಹೀಗಾಗಿ ನಿರ್ಲಕ್ಷ್ಯ ವಹಿಸದೆ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಸ್ವಯಂ ಜಾಗ್ರತೆ ವಹಿಸುವ ಅಗತ್ಯವಿದೆ.



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 2 =
Remember me
