ಬೆಂಗಳೂರು:ಕರೊನಾ ಸೋಂಕಿನಿಂದ ರಾಜ್ಯದಲ್ಲಿ ಅತಿ ಹೆಚ್ಚು ಸಾವು-ನೋವು ಸಂಭವಿಸಿದ್ದರೂ, ಸರ್ಕಾರ ಮಾಹಿತಿಗಳನ್ನು ಮುಚ್ಚಿಡುತ್ತಿದೆ ಎಂದು ಶಾಸಕ ಎಚ್​.ಕೆ. ಪಾಟೀಲ್​ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯದಲ್ಲಿ ಸಾವಿನ ಪ್ರಮಾಣ ದುಪ್ಪಟ್ಟಾಗಿದೆ. ರಾಷ್ಟ್ರೀಯ ಸರಾಸರಿ 42 ಇದ್ದರೆ, ಕರ್ನಾಟಕದಲ್ಲಿ 82 ಇದೆ. ಬೆಂಗಳೂರಿನಲ್ಲಿ ಜುಲೈ ತನಕ 49,136 ಸಾವು ಆಗಿದ್ದರೆ, 2019ರಲ್ಲಿ 37,001 ಸಾವು ದಾಖಲಾಗಿತ್ತು. ಈ ವರ್ಷ ಹೆಚ್ಚುವರಿಯಾಗಿ 12,135 ಸಾವು ವರದಿಯಾಗಿದೆ. ಆದರೂ, ಕರೊನಾದಿಂದ 1,886 ಜನ ಮಾತ್ರವೇ ಬೆಂಗಳೂರಿನಲ್ಲಿ ಸತ್ತಿದ್ದಾರೆಂದು ಸರ್ಕಾರ ಮಾಹಿತಿ ನೀಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.ಇದನ್ನೂ ಓದಿರಿಬಾಲಕನ ಪ್ರಾಣ ತೆಗೆದ ಜೋಕಾಲಿ, ಆನ್​ಲೈನ್​ ಪಾಠ ಕೇಳುತ್ತಲೇ ಪ್ರಾಣಬಿಟ್ಟ!
ಅಂಕಿ-ಅಂಶ ಬಚ್ಚಿಟ್ಟು, ಜನರಿಗೆ ತಪ್ಪು ಮಾಹಿತಿ ನೀಡುವುದರಿಂದ ಪ್ರಯೋಜನವಿಲ್ಲ. ಗಂಭೀರ ಸನ್ನಿವೇಶದಲ್ಲಿ ವಿರೋಧ ಪಕ್ಷಗಳು, ತಜ್ಞರು ಮತ್ತು ವೈದ್ಯರ ತುರ್ತು ಸಭೆ ಕರೆದು ಚರ್ಚಿಸಬೇಕು. ತಕ್ಷಣದ ಕ್ರಮ ಕೈಗೊಳ್ಳಲು ಮತ್ತು ವಸ್ತುಸ್ಥಿತಿ ತಿಳಿಸಲು ಮುಂದಾಗಬೇಕು ಎಂದು ಸರ್ಕಾರಕ್ಕೆ ಎಚ್​.ಕೆ. ಪಾಟೀಲ್​ ಸಲಹೆ ನೀಡಿದರು.
ರಾಜ್ಯದಲ್ಲಿ ಕರೊನಾ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಸರ್ಕಾರ ಈ ವರ್ಷ ಡೆತ್​ ಆಡಿಟ್​ ಮಾಡಿಲ್ಲ. ಸಾವು ಯಾವ ಕಾರಣಕ್ಕೆ ಆಯ್ತು ಎನ್ನುವ ಮಾಹಿತಿ ನೀಡಿಲ್ಲ. ಉಸಿರಾಟ ಸಮಸ್ಯೆಯಿಂದ ಶೇ.8.2- 8.5 ಮೃತಪಟ್ಟಿರುವ ಮಾಹಿತಿ ಇದೆ. ಆದ್ದರಿಂದ ಈ ಸಾವಿನ ಬಗ್ಗೆ ಸಿಎಂ ಯಡಿಯೂರಪ್ಪ ಉತ್ತರಿಸಬೇಕು. ತ್ವರಿತವಾಗಿ ಅಧ್ಯಯನ ವರದಿ ಪಡೆಯಲು ಮುಂದಾಗಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಇಳಿಕೆ; ಚೇತರಿಸಿಕೊಂಡವರ ಪ್ರಮಾಣವೇ ಅಧಿಕ

‘ಡ್ರಗ್ಸ್​ ಮಾಫಿಯಾಕ್ಕೆ ಸಿಲುಕಿ ನಮ್ಮ ಮಕ್ಕಳು ಹಾಳಾಗಿಬಿಡ್ತವೆ…’ ಎಂದ ಹಿರಿಯ ರಾಜಕಾರಣಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 8 =
Remember me
