ಬೆಂಗಳೂರು:ಮಾವಿನ ಹಣ್ಣಿನಿಂದ ಕರೊನಾ ಬರೋದಿಲ್ಲ. ಈ ಹಣ್ಣನ್ನು ತಿಂದರೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತೆ. ನಿನ್ನೆ(ಬುಧವಾರ) ಮಂಡ್ಯದಲ್ಲಿ ನಾನು ಆಡಿದ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿರಿಭೋಜನಕೂಟ ಏರ್ಪಡಿಸಿದ್ದ ಮಹಿಳೆಗೆ ಕರೊನಾ, ಗ್ರಾಮಸ್ಥರಿಗೀಗ ಢವಢವ!
ಮರುವನಹಳ್ಳಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಲು ಮಾವಿನಹಣ್ಣು ಕಾರಣ ಎಂದು ಹೇಳುವ ಮೂಲಕ ಸಚಿವರು ಚರ್ಚೆ ಗ್ರಾಸವಾಗಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವರು, ಕೆ.ಆರ್​.ಪೇಟೆ ತಾಲೂಕಿನ ಮರುವನಹಳ್ಳಿಯನ್ನು ಸೀಲ್ಡೌನ್ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಮಹಿಳಾ ಸ್ವಸಹಾಯ ಸಂಘದ ಸುಮಾರು 14 ಸದಸ್ಯರು ಮೀಟಿಂಗ್ ನಡೆಸಿದ್ದರು. ಅಲ್ಲದೆ, ಮಾವಿನ ಹಣ್ಣನ್ನು ಕತ್ತರಿಸಿ ಹಂಚಿಕೊಂಡು ತಿಂದಿದ್ದರು. ಇದರಿಂದಾಗಿ ಅವರೆಲ್ಲರಿಗೂ ಪರಸ್ಪರ ಸೋಂಕು ಹರಡಿರಬಹುದು ಎಂದು ಕ್ವಾರಂಟೈನ್ ಮಾಡಿದ್ದೇವೆ. ಹೀಗೆಂದು ಹೇಳಿಕೆ ನೀಡಿದ್ದೆ ಅಷ್ಟೆ. ಮಾವಿನ ಹಣ್ಣಿನಿಂದ ಕರೊನಾ ಬರಲ್ಲ ಎಂದಿದ್ದಾರೆ.
ಇದನ್ನೂ ಓದಿರಿಮಂಡ್ಯದ ಮರುವನಹಳ್ಳಿಯಲ್ಲಿ ಸೋಂಕು ಹೆಚ್ಚಲು ಮಾವಿನಹಣ್ಣು ಕಾರಣವಂತೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
