ಬೆಂಗಳೂರು: ಸದಾ ಜನರಿಂದ ತುಂಬಿರುತ್ತಿದ್ದ ವಿಧಾನಸೌಧ ಮತ್ತು ವಿಕಾಸಸೌಧಕ್ಕೂ ಕರೊನಾ ಎಫೆಕ್ಟ್ ಕಾಡಿದೆ. ಲಾಕ್​ಡೌನ್ ಪ್ರಾರಂಭವಾದ ಬಳಿಕ ಶೇ.20 ನೌಕರರೂ ಬರುತ್ತಿಲ್ಲ. ಐಎಎಸ್ ಅಧಿಕಾರಿಗಳು ಮಾತ್ರ ಆಗಾಗ ಬಂದು ಹೋಗುತ್ತಿದ್ದಾರೆ. ಆರ್ಥಿಕ ಇಲಾಖೆಯಲ್ಲಿ ಮಾತ್ರ ಕೆಲ ಅಧಿಕಾರಿಗಳು ಒಂದು ದಿನವೂ ತಪ್ಪದೆ ಕಚೇರಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಕರೊನಾ
ಸಂದರ್ಭದಲ್ಲಿ ತುರ್ತು ಹಣ ಬಿಡುಗಡೆ ಮಾಡಬೇಕಾದ ಸೂಚನೆಗಳು ಆಗಿಂದಾಗ್ಗೆ ಬರುತ್ತಿರುವ ಕಾರಣ ಆರ್ಥಿಕ ಇಲಾಖೆ ಈ ಹೊತ್ತಿನಲ್ಲಿಯೂ ಸಕ್ರಿಯವಾಗಿ ಕಾರ್ಯ ನಿರ್ವಹಣೆ ಮಾಡಲು ವ್ಯವಸ್ಥೆ ಮಾಡಿಕೊಂಡಿದೆ. ಸಚಿವರ ಕಚೇರಿ ಸಿಬ್ಬಂದಿ ಕೆಲಸಕ್ಕೆ ಗೈರಾಗುತ್ತಿದ್ದಾರೆ. ಸಭೆಗಳು ಮತ್ತು ಸಂಪುಟ ಸಭೆ ಇದ್ದಾಗ ಮಾತ್ರ ಸಚಿವರ ಆಪ್ತ ಸಹಾಯಕರು ಸೇರಿ ಕೆಲವೇ ಸಿಬ್ಬಂದಿ ಬರುತ್ತಿದ್ದಾರೆ. ಕೆಲ ಸಚಿವರ ಕಚೇರಿಯಲ್ಲಿ ಟೈಪಿಸ್ಟ್​ಗಳಿಲ್ಲದೆ ಸಮಸ್ಯೆ ತಲೆದೋರಿದೆ.
ಸಿಎಂ ಕಚೇರಿಯೂ ಹೊರತಾಗಿಲ್ಲ: ಸಿಎಂ ಕಚೇರಿಯಲ್ಲಿಯೂ ಕಡಿಮೆ ಸಿಬ್ಬಂದಿ ಮತ್ತು ನೌಕರರು ಕೆಲಸಕ್ಕೆ ಬರುತ್ತಿದ್ದಾರೆ. ಕೆಲಸಕ್ಕೆ ಬರುವಂತೆ ಅಧಿಕಾರಿಗಳು, ಕೆಲ ನೌಕರರಿಗೆ ತಾಕೀತು ಮಾಡಿದರೂ ಕ್ಯಾರೆ ಅನ್ನುತ್ತಿಲ್ಲ. ‘ಏನೇ ಕೆಲಸ ಇದ್ದರೂ, ಪೋನ್ ಮೂಲಕ ಹೇಳಿ ಸಾರ್.. ಇಲ್ಲಿಂದಲೇ ಮಾಡಿ ಕಳುಹಿಸುತ್ತೇವೆ’ ಎಂದು ಕೆಲವರು ಸಮಜಾಯಿಷಿ ನೀಡುತ್ತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಸರ್ಕಾರದ ಕೆಲಸ ನಿಭಾಯಿಸುವುದು ಹೇಗೆ ಎನ್ನುವುದು ನಮಗೆ ಸವಾಲಾಗಿದೆ ಎನ್ನುತ್ತಾರೆ ಹಿರಿಯ ಅಧಿಕಾರಿಗಳು.
ದಿನಸಿ ಕೂಪನ್ ಹಂಚಲು ಲಾಂಗ್​ನಿಂದ ಹೊಡೆದಾಟ!

ಸರ್ಕಾರಿ ಕಚೇರಿಗಳು ಖಾಲಿ ಖಾಲಿ- ಕೆಲ ಇಲಾಖೆಗಳಲ್ಲಿ ತುರ್ತು ಕೆಲಸಗಳಿಗಷ್ಟೇ ಆದ್ಯತೆ | ನಿತ್ಯ ನೂರಾರು ಕೋಟಿ ರೂ. ನಷ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 7 =
Remember me
