ಬಾಗಲಕೋಟೆ:ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಂದು ಬೆಳಗ್ಗೆ ಬಳ್ಳಾರಿಯ ಗುಳೇದಗುಡ್ಡದಲ್ಲಿ ಮದುವೆ ಸಂಭ್ರಮ ಕಳೆಗಟ್ಟುತ್ತಿತ್ತು, ವಧು-ವರ ಇಬ್ಬರೂ ಇಷ್ಟೊತ್ತಿಗೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು. ಅಷ್ಟರಲ್ಲಿ ಆವರಿಸಿದ ಕರೊನಾ ಛಾಯೆ ಎಲ್ಲವನ್ನೂ ಹಾಳುಮಾಡಿದೆ.
ಬಳ್ಳಾರಿ ಯುವಕನ ಜೊತೆ ಗುಳೇದಗುಡ್ಡದ ಯುವತಿಯ ಮದುವೆ ಇಂದು ನಿಶ್ಚಯವಾಗಿತ್ತು. ಇತ್ತ ಮದುಮಗ ಹಾಗೂ ಸಂಬಂಧಿಕರು ಬಳ್ಳಾರಿಯಿಂದ ಬಸ್​ ಮಾಡಿಕೊಂಡು ಗುರುವಾರ ರಾತ್ರಿಯೇ ವಧುವಿನ ಊರಿಗೆ ಬಂದಿದ್ದರು. ಶುಕ್ರವಾರ ಬೆಳಗ್ಗೆ ಮೂಹೂರ್ತ ನೆರವೇರಬೇಕಿತ್ತು. ಅಷ್ಟರಲ್ಲಿ ವರನ ತಾಯಿಗೆ ಕರೊನಾ ಪಾಸಿಟಿವ್​ ಇದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ರಾತ್ರಿಯೇ ಗ್ರಾಮಕ್ಕೆ ಭೇಟಿ ನೀಡಿದ ತಾಲೂಕು ಆಡಳಿತ ಸಿಬ್ಬಂದಿ, ಮದುವೆ ರದ್ದು ಮಾಡಿ ಸಂಬಂಧಿಕರನ್ನು ವಾಪಸ್​ ಕಳಿಸಿದರು.ಇದನ್ನೂ ಓದಿರಿಗರ್ಭಿಣಿಗೆ ಕರೊನಾ ಇಲ್ಲದಿದ್ದರೂ ಇದೆ ಅಂದ್ರು… 6 ದಿನದ ಹಸುಗೂಸನ್ನೇ ಬಲಿ ಪಡೆದ್ರು!
ವರನ ತಾಯಿ ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಳೇದಗುಡ್ಡದ ಮರಡಿಮಠದ ಸಮೀಪ ಇರುವ ವದುವಿನ ಸ್ವಗೃಹದಲ್ಲಿ ಮದುವೆ ನಡೆಯಲಿದ್ದ ಪ್ರದೇಶವನ್ನು ಸ್ಯಾನಿಟೈಸ್​ ಮಾಡಲಾಗಿದೆ. ಸ್ಥಳಕ್ಕೆ ಬಾಗಲಕೋಟೆ ಉಪವಿಭಾಗಾಧಿಕಾರಿ ಗಂಗಪ್ಪ ಸೇರಿ ಅಧಿಕಾರಿಗಳು ಭೇಟಿ ನೀಡಿದ್ದರು. ನೂರಾರು ಕನಸುಹೊತ್ತು ಸಪ್ತಪದಿಗೆ ಹೆಜ್ಜೆ ಹಾಕುವ ಸಂಭ್ರಮದ ಕ್ಷಣಕ್ಕೂ ಕರೊನಾ ಭೀತಿ ಅಡ್ಡಿಪಡಿಸಿದೆ.
ಕೋವಿಡ್​ನಿಂದ ದೇಶದಲ್ಲಿ ಲಕ್ಷಾಂತರ ಜನರೇನೂ ಸತ್ತಿಲ್ಲ… ಲಾಕ್​ಡೌನ್​ ಬೇಡ: ಪ್ರತಾಪ್​ಸಿಂಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 3 =
Remember me
