ಉಡುಪಿ:ಲಾಕ್​ಡೌನ್​ನಿಂದಾಗಿ ಸಲೂನ್​​ಗಳೆಲ್ಲ ಬಂದ್​ ಆಗಿದ್ದವು. ಹಾಗಾಗಿ ಅದೆಷ್ಟೋ ಜನರು ಸರಿಯಾಗಿ ಹೇರ್ ಕಟಿಂಗ್​ ಮಾಡಿಸಲಾಗದೆ ಕಷ್ಟಪಟ್ಟಿದ್ದುಂಟು. ಈಗ ಲಾಕ್​ಡೌನ್ ಸಡಿಲಿಕೆಯಾಗಿದ್ದು, ಕೆಲವೆಡೆ ಕ್ಷೌರದ ಅಂಗಡಿಗಳು ಬಾಗಿಲು ತೆರೆದು ಕಾರ್ಯ ಆರಂಭಿಸಿವೆ. ಜನರೂ ಸಹ ತಲೆ ಭಾರ ಕಡಿಮೆ ಮಾಡಿಕೊಳ್ಳಲು ಅಲ್ಲಿಗೆ ಓಡುತ್ತಿದ್ದಾರೆ.
ಇದನ್ನೂ ಓದಿ:ಕರ್ನಾಟಕಕ್ಕೆ ಕೊವಿಡ್​-19 ಕಂಟಕ, ಸೋಂಕಿತರ ಸಂಖ್ಯೆ 2282ಕ್ಕೆ ಏರಿಕೆ; ಚಿತ್ರದುರ್ಗಕ್ಕೆ ಶಾಕ್​
ಆದರೆ, ಹೀಗೆ ಸಲೂನ್​ಗಳಿಗೆ ಹೋಗುವ ಮುನ್ನ ಎಚ್ಚರ ಇರಲಿ. ಯಾಕೆಂದರೆ ಇಲ್ಲೊಂದು ಸಲೂನ್​​ನಲ್ಲಿ ಕರೊನಾ ಸೋಂಕಿತ ಹೇರ್​ ಕಟಿಂಗ್ ಮಾಡಿಸಿದ ಪರಿಣಾಮ ಅದೀಗ ಬಂದ್​ ಆಗಿದೆ.
ಉಡುಪಿಯ ಕಾಪು ತಾಲೂಕಿನಲ್ಲಿ ಘಟನೆ ನಡೆದಿದೆ. ಜಿಲ್ಲಾ ಪಂಚಾಯಿತಿಯ ಹೊರಗುತ್ತಿಗೆ ನೌಕರನೋರ್ವ ವಾರದ ಹಿಂದೆ ಸರಕಾರಿ ಗುಡ್ಡೆಯಲ್ಲಿ ಕ್ಷೌರ ಮಾಡಿಸಿದ್ದ. ಆದರೆ ಈ ಯುವಕನಿಗೆ ಕರೊನಾ ಇರುವುದು ನಿನ್ನೆ (ಸೋಮವಾರ) ದೃಢಪಟ್ಟಿದೆ. ಇದೀಗ ಕ್ಷೌರದ ಅಂಗಡಿ ಬಂದ್​ ಆಗಿದ್ದು, ಆ ಯುವಕ ಬಂದು ಹೋದ ಮೇಲೆ ಯಾರ್ಯಾರು ಬಂದಿದ್ದರೋ ಅವರನ್ನೆಲ್ಲ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಸಲೂನ್​ ಮಾಲೀಕರು ಸಹ ಆತಂಕದಲ್ಲಿದ್ದಾರೆ. (ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:ಕರ್ನಾಟಕಕ್ಕೆ ಕೊವಿಡ್​-19 ಕಂಟಕ, ಸೋಂಕಿತರ ಸಂಖ್ಯೆ 2282ಕ್ಕೆ ಏರಿಕೆ; ಚಿತ್ರದುರ್ಗಕ್ಕೆ ಶಾಕ್​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
