ಬೆಂಗಳೂರು:ವಿಕಾಸಸೌಧ, ವಿಧಾನಸೌಧ, ಸಿಎಂ ಗೃಹ ಕಚೇರಿ, ಸಚಿವರ ನಿವಾಸಕ್ಕೂ ಎಂಟ್ರಿ ಕೊಟ್ಟಿರುವ ಕರೊನಾ ಸೋಂಕು ಇದೀಗ ಇದೀಗ ಶಾಸಕರ ಭವನಕ್ಕೂ ವಕ್ಕರಿಸಿದೆ.
ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಮಾರಕರೋಗ ಕರೊನಾ ಸೋಂಕು ಕಾಣಿಸಿಕೊಳ್ಳದ ಜಾಗ ಯಾವುದು ಎಂದು ಹುಡುಕುತ್ತ ಹೊರಟರೆ ಬಹುಶಃ ಅಂತಹ ಜಾಗ ಸಿಗೋದು ತುಂಬಾ ಕಷ್ಟಕರ. ಅಷ್ಟರಮಟ್ಟಿಗೆ ಎಲ್ಲೆಡೆ ತನ್ನ ಕದಂಬಬಾಹು ಚಾಚುತ್ತಿರುವ ಮಹಾಮಾರಿ ಕರೊನಾ ಶಾಸಕರ ಭವನದಲ್ಲಿ ಕಾರು ತೊಳೆಯುವ ವ್ಯಕ್ತಿಯಲ್ಲೂ ಕಾಣಿಸಿಕೊಂಡಿದೆ.
ಇದನ್ನೂ ಓದಿರಿಮತ್ತೆ 20 ದಿನ ದೇಶಾದ್ಯಂತ ಕಂಪ್ಲೀಟ್​ ಲಾಕ್​ಡೌನ್​?
ಶಾಸಕರ ಭವನದಲ್ಲಿ ಶಾಸಕರ, ಸಚಿವರ ಮತ್ತು ಅಧಿಕಾರಿಗಳ ಕಾರು ತೊಳೆಯುತ್ತಿದ್ದ ವ್ಯಕ್ತಿಗೆ ಕರೊನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಶಾಸಕರ ಭವನದಲ್ಲೂ ಹೈ ಅಲರ್ಟ್ ಮಾಡಲಾಗಿದೆ.
ಪೊಲೀಸ್​, ವೈದ್ಯ, ಬಿಎಂಟಿಸಿ, ಕೆಎಸ್​ಆರ್​ಟಿಸಿ ಸಿಬ್ಬಂದಿಗೂ ಕಾಡುತ್ತಿರುವ ಕೊರನಾ, ರಾಜ್ಯದ ವೈದ್ಯಕೀಯ ಸಚಿವ ಡಾ. ಸುಧಾಕರ್​ ಸಂಸಾರಕ್ಕೂ ಕಂಟಕ ತಂದಿದೆ. ಸುಧಾಕರ್​ ಅವರ ತಂದೆ, ಪತ್ನಿ, ಮಗಳಿಗೂ ಸೋಂಕು ತಗುಲಿದೆ. ಮಾಗಡಿ ಮಾಜಿ ಶಾಸಕ ಬಾಲಕೃಷ್ಣ ಅವರ ಪುತ್ರಿಗೂ ಸೋಂಕು ದೃಢಪಟ್ಟಿದೆ. ಈ ನಡುವೆ ಶಾಸಕರ ಭವನದಲ್ಲಿ ಕಾರು ತೊಳೆಯುವ ವ್ಯಕ್ತಿಗೂ ಸೋಂಕು ಬಂದಿರುವುದು ಮತ್ತಷ್ಟು ಆತಂಕ ಹೆಚ್ಚಿಸಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಚಿಕಿತ್ಸೆ ದರ ಎಷ್ಟಿದೆ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 2 =
Remember me
