ಮಂಗಳೂರು:ಸುಳ್ಯ ತಾಲೂಕಿನ ಅರಂತೋಡುವಿನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ 62 ಮಂದಿಗೆ ಕರೊನಾ ವೈರಸ್ ತಗುಲುವ ಭೀತಿ ಎದುರಾಗಿದೆ. ಸದ್ಯ ಆರೋಗ್ಯ ಇಲಾಖೆ ಅವರನ್ನೆಲ್ಲ ಕ್ವಾರಂಟೈನ್​ ಮಾಡಿದೆ.
ಇದನ್ನೂ ಓದಿ:ಗರ್ಭಿಣಿ ಆನೆಗೆ ಸ್ಫೋಟಕ ತುಂಬಿದ ಪೈನಾಪಲ್​​ ತಿನ್ನಲು ಕೊಟ್ಟ ಜನರು; ದಾರುಣವಾಗಿ ಮೃತಪಟ್ಟ ಮುಗ್ಧ ಪ್ರಾಣಿ
ಕರೊನಾ ಸೋಂಕಿತನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ವ್ಯಕ್ತಿಯೋರ್ವ ಈ ಮದುವೆಯಲ್ಲಿ ಭಾಗವಹಿಸಿದ್ದೇ ಭಯಕ್ಕೆ ಕಾರಣವಾಗಿದೆ. ಈ 62 ಮಂದಿ ಸೋಂಕಿತನ ದ್ವಿತೀಯ ಸಂಪರ್ಕ ಎಂದು ಪರಿಗಣಿಸಿ ಕ್ವಾರಂಟೈನ್​ ಮಾಡಲಾಗಿದೆ.
ಇದನ್ನೂ ಓದಿ:ಪುಟ್ಟ ಮಗು ಹೇಳಿದಂತೆ ಕೇಳುವುದು ಈ ಆನೆ; ಮುದ್ದುಕ್ಕಿಸುವ ಈ ಟಿಕ್​ಟಾಕ್​ ವಿಡಿಯೋ ಎಲ್ಲಿಯದು ಗೊತ್ತಾ?
ಮಲೇಷಿಯಾದಿಂದ ಮೇ 22ರಂದು ಬೆಂಗಳೂರಿಗೆ ಬಂದಿದ್ದ ವೈದ್ಯರೋರ್ವರು ಸರ್ಕಾರಿ ಕ್ವಾರಂಟೈನ್​ ಮುಗಿಸಿದ್ದರು. ಅಲ್ಲಿಂದ ಮಂಗಳೂರಿಗೆ ಹೋಗಿ ಪರೀಕ್ಷೆ ಮಾಡಿಸಿದ ವೈದ್ಯನಲ್ಲಿ ಕರೊನಾ ಪಾಸಿಟಿವ್​ ಕಂಡುಬಂದಿತ್ತು.ಈ ವೈದ್ಯನ ಪ್ರಾಥಮಿಕ ಸಂಪರ್ಕಕ್ಕೆ ಬಂದ ವ್ಯಕ್ತಿ ಅರಂತೋಡು ಮದುವೆಯಲ್ಲಿ ಭಾಗವಹಿಸಿದ್ದ. ಅದೀಗ ಮದುವೆಯಲ್ಲಿ ಇದ್ದ ಎಲ್ಲರ ಆತಂಕಕ್ಕೆ ಕಾರಣವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
