ಬೆಂಗಳೂರು:ನನ್ನ ಇಡೀ ಕುಟುಂಬಕ್ಕೆ ಕರೊನಾದಿಂದ ತೊಂದರೆಯಾಗಿದೆ. ನಾನೂ ಕೂಡ ಕರೊನಾ ಸಂಕಷ್ಟಕ್ಕೆ ಸಿಲುಕಿದ್ದೆ. ಈಗ ಚೇತರಿಸಿಕೊಂಡಿದ್ದೇನೆ. ನನಗೆ 70 ವರ್ಷ ವಯಸ್ಸು. ನನ್ನ ಇಡೀ ಜೀವಮಾನದಲ್ಲಿ ಹೇಗೆ ಕೆಲಸ ಮಾಡಿದ್ದೇನೆ ಎನ್ನುವುದನ್ನು ಮಾಧ್ಯಮಗಳೂ ಗಮನಿಸಿವೆ ಎಂದು ಭಾವುಕರಾಗಿ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ ಕಣ್ಣೀರು ಹಾಕಿದರು.
ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಕಾರಜೋಳ, ಕಲಬುರಗಿಯಲ್ಲಿ ಭಾರಿ ಮಳೆಯಿಂದಗಿ ಅನಾಹುತಗಳು ಸಂಭವಿಸಿವೆ. ನಾನು ಮತ್ತು ನನ್ನ ಕುಟುಂಬ ಕರೊನಾ ಸಂಕಷ್ಟಕ್ಕೆ ಸಿಲುಕಿದೆ. ಕಲಬುರಗಿ ಜನರ ಕಷ್ವನ್ನು ಖುದ್ದು ಆಲಿಸಬೇಕಿದ್ದ ನಾನು ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇನೆ. 600 ಕಿ.ಮೀ. ಪ್ರಯಾಣಿಸಲು ಆಗುತ್ತಿಲ್ಲ… ಎಂದು ಕಣ್ಣೀರು ಹಾಕಿದರು.
ಶಿರಾ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಅಲ್ಲಿಗೆ ಹೋಗಿದ್ದೆ. ಶಿರಾ ಬಿಜೆಪಿ ಅಭ್ಯರ್ಥಿ ಹೊಸಬರು. ಅವರ ಭವಿಷ್ಯದ ದೃಷ್ಟಿಯಿಂದ ಒಂದು ಸಲ ಮುಖ ತೋರಿಸಿ ಹೋಗಿ ಎಂದು ಹೇಳಿದ್ದರು. ಹಾಗಾಗಿ ನಾನು ಅನಿವಾರ್ಯವಾಗಿ ಶಿರಾಗೆ ಹೋಗಿ ಬಂದೆ ಎಂದು ಸಮರ್ಥಿಸಿಕೊಂಡ ಕಾರಜೋಳ, ಸಿಎಂ ಸೂಚನೆಯಂತೆ ಕಂದಾಯ ಸಚಿವ ಆರ್. ಅಶೋಕ್ ಕಲಬುರಗಿ ಮತ್ತು ಯಾದಗಿರಿಗೆ ಹೋಗಿ ಪರಿಶೀಲಿಸಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಪ್ರಾಣ ಹಾನಿ ಆಗಿಲ್ಲ. ಕೇಂದ್ರದಿಂದ ಹೆಲಿಕಾಪ್ಟರ್​, ಬೋಟ್​ ಎಲ್ಲ ಬಂದಿವೆ. ಸರ್ಕಾರ ಕಲಬುರಗಿ ಜನರ ಜತೆಗಿದೆ. ಕಲಬುರಗಿ ಡಿಸಿ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದರು.
ಬೇಸಿಗೆಯಲ್ಲಿ ತಂಪಿರಲಿ ಎಂಬ ಕಾರಣಕ್ಕೆ ಉತ್ತರ ಕರ್ನಾಟಕ ಭಾಗದ ಜನ ಕಲ್ಲು, ಮಣ್ಣಿನಿಂದ ಮನೆ ಕಟ್ಟಿ ಕೊಂಡಿರುತ್ತಾರೆ. ಈ ಮನೆಗಳೀಗ ಮಳೆಯಿಂದಾಗಿ ಬೀಳುತ್ತಿವೆ. ಅಂತಹ ಮನೆಗಳನ್ನು ಸರ್ವೇ ಮಾಡಿ ಪುನರ್​ ನಿರ್ಮಾಣ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ನನಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಗಲಿದೆ: ಶ್ರೀರಾಮುಲು

ಅಪ್ಪನಾಗೋ ಸಂಭ್ರಮದ ಘಳಿಗೆಯನ್ನ ಮೊದಲೇ ಅನುಭವಿಸಿದ್ದ ಚಿರು..!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:sixteen − thirteen =
Remember me
