ಬೆಂಗಳೂರು:ಕರೊನಾ ಸೋಂಕಿತರಿಗೆ ಸರ್ಕಾರದಿಂದ ಕೆಲವೊಂದು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಇವುಗಳ ಪೈಕಿ ಕ್ವಾರಂಟೈನ್‌ಗೆ ಸಂಬಂಧಿಸಿದ ಮಹತ್ವದ ವಿಷಯಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.
ಕಡಿಮೆ‌ ರೋಗ‌ ಲಕ್ಷಣ ಇದ್ದವರಿಗೆ ಮನೆಯಲ್ಲೇ ಕ್ವಾರಂಟೈನ್‌ಗೆ ಅವಕಾಶ ಕಲ್ಪಿಸಲಾಗುವುದು. ಈ ಬಗೆಯ ಆರೈಕೆಗೆ ಮುನ್ನ ಆರೋಗ್ಯ ಇಲಾಖೆಯ ತಂಡವು ಮನೆಗೆ ಬಂದು ಪರಿಶೀಲನೆ ನಡೆಸುತ್ತದೆ. ನಂತರ ಐಸೋಲೇಷನ್‌ ಮಾಡಲಾಗುತ್ತದೆ. ಪ್ರತ್ಯೇಕ ಕೊಠಡಿ, ಶೌಚಾಲಯ ಇದ್ದರೆ ಮಾತ್ರ ಮನೆಯಲ್ಲಿ ಕ್ವಾರಂಟೈನ್​ಗೆ ಅವಕಾಶ ನೀಡಲಾಗುತ್ತದೆ. ಮನೆಯಲ್ಲಿ ಅವರನ್ನು‌ ನೋಡಿಕೊಳ್ಳಲು ಒಬ್ಬರು ಇರಲೇಬೇಕು.
ಒಂದು ವೇಳೆ ಮನೆಯಲ್ಲಿ ಈ ಸೌಲಭ್ಯಗಳು ಇಲ್ಲದಿದ್ದರೆ ಕೋವಿಡ್‌ ಕೇರ್‌ ಸೆಂಟರ್‌ಗೆ ದಾಖಲಿಸಲು ಅವಕಾಶವಿದೆ. ಪರಿಶೀಲನೆ ವೇಳೆ ಕೆಮ್ಮು, ಶೀತ, ಗಂಟಲು ನೋವು, ಉಸಿರಾಟದ ತೊಂದರೆ, ರಕ್ತದೊತ್ತಡ, ಜ್ವರ ಮೊದಲಾದವುಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಮಧುಮೇಹ, ಅಧಿಕ ರಕ್ತದೊತ್ತಡ, ಮೂತ್ರಪಿಂಡದ ತೊಂದರೆ ಮೊದಲಾದ ರೋಗಗಳ ಬಗ್ಗೆ ವಿಚಾರಿಸಲಾಗುತ್ತದೆ. ಇದರಲ್ಲಿ ಯಾವುದೇ ಗಂಭೀರ ಸಮಸ್ಯೆ ಇದ್ದಲ್ಲಿ ಮನೆ ಆರೈಕೆಗೆ ಶಿಫಾರಸು ಮಾಡುವುದಿಲ್ಲ. ಆರೈಕೆಗೊಳಪಡಿಸಿದ ನಂತರ ವೈದ್ಯರು ಯಾವ ಔಷಧ ಸೇವಿಸಬೇಕೆಂದು ಸೂಚಿಸುತ್ತಾರೆ.
ಕ್ವಾರಂಟೈನ್ ಅವಧಿಯನ್ನು 17 ದಿನಗಳಿಗೆ ಏರಿಕೆ ಮಾಡಲಾಗಿದೆ. ವೃದ್ಧರಿಗೆ ಕಡಿಮೆ ಲಕ್ಷಣ ಇದ್ದರೂ ಕ್ವಾರಂಟೈನ್ ಮಾಡಲಾಗುವುದು. 10 ದಿನಗಳವರೆಗೆ ಜ್ವರ ಇಲ್ಲದಿದ್ದರೆ. ಲಕ್ಷಣ ಇಲ್ಲದಿದ್ದರೆ ರೋಗಿ ಗುಣಮುಖನಾಗಿದ್ದಾನೆ ಎಂದು ಪರಿಗಣಿಸಲಾಗುತ್ತದೆ. ನಂತರ ಕರೊನಾ ಪತ್ತೆ ಪರೀಕ್ಷೆ ಬೇಕಿಲ್ಲ.
ಇದನ್ನೂ ಓದಿ:ಯುದ್ಧಕ್ಕೂ ಡೋಂಟ್‌ ಕೇರ್‌: ಲಡಾಖ್‌ ನೆಲದಲ್ಲಿ ಮಹಿಳಾ ಪಡೆಗೆ ‘ನಮೋ’ ನಮನ
775 ಬೆಡ್​ಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಸಿದ್ಧ ಮಾಡುವುದು, ಟೆಸ್ಟಿಂಗ್ ಸಂಖ್ಯೆ ಜಾಸ್ತಿ ಮಾಡಲು ಸರ್ಕಾರ ತೀರ್ಮಾನಿಸಿದೆ. ಕರೊನಾ ಪರೀಕ್ಷೆಗಾಗಿ ಜಿಲ್ಲೆಗಳಿಂದ ಬೆಂಗಳೂರಿಗೆ ಹೆಚ್ಚು ಪ್ರಕರಣಗಳು ಬರುತ್ತಿವೆ. ಇದರಿಂದ ‌ಇಲ್ಲಿ ಹೆಚ್ಚು ಒತ್ತಡ ಆಗುತ್ತಿದೆ. ಹೀಗಾಗಿ ಮುಂದೆ ಪ್ರತಿ ಜಿಲ್ಲೆಯಲ್ಲಿ ಟೆಸ್ಟಿಂಗ್ ಪ್ರಕ್ರಿಯೆಯನ್ನು ಜಾಸ್ತಿ ಮಾಡಲಾಗುವುದು .
ರೋಗಿಯು ಪ್ರತಿ ದಿನ ಆನ್‌ಲೈನ್‌ನಲ್ಲಿ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿ ಮಾಹಿತಿ ಒದಗಿಸಬೇಕು. ಅಗತ್ಯವಿದ್ದರೆ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಯ ಸಹಕಾರದಲ್ಲಿ ಟೆಲಿ ಕನ್ಸಲ್ಟೇಷನ್‌ ವ್ಯವಸ್ಥೆ ಮಾಡಬೇಕು. ರೋಗಿಗೆ ಉಸಿರಾಟದ ತೊಂದರೆ, ಎದೆನೋವು, ಚರ್ಮ ನೀಲಿ ಬಣ್ಣಕ್ಕೆ ತಿರುಗುವುದು ಮೊದಲಾದ ಸಮಸ್ಯೆ ಕಾಣಿಸಿಕೊಂಡರೆ ಆಸ್ಪತ್ರೆಗೆ ದಾಖಲಿಸಬೇಕು.
ರೋಗಿಯ ಕೈಗೆ ಇ-ಟ್ಯಾಗ್‌ ಬ್ಯಾಂಡ್‌ ಕಟ್ಟಿ ಚಲನವಲನ ಗಮನಿಸಲಾಗುತ್ತದೆ. ಮನೆಯ ಮುಂಭಾಗ ಐಸೋಲೇಷನ್‌ ನೋಟಿಸ್‌ ಅಂಟಿಸಿ ಅಕ್ಕಪಕ್ಕದ ಇಬ್ಬರಿಗೆ ಮಾಹಿತಿ ನೀಡಲಾಗುತ್ತದೆ. ರೋಗಿ ಪದೇ ಪದೇ ನಿಯಮ ಉಲ್ಲಂಘಿಸಿದರೆ ಎಫ್‌ಐಆರ್‌ ದಾಖಲಿಸಿ ಕೋವಿಡ್‌ ಕೇರ್‌ ಕೇಂದ್ರಕ್ಕೆ ಕಳುಹಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಆಪ್ತಮಿತ್ರ-14410 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.
ರೋಗಿಗಳು ಏನೇನು ಮಾಡಬೇಕು?* ರೋಗಿಗಳು ಕಡ್ಡಾಯವಾಗಿ ಎಂಟು ಗಂಟೆ ಎನ್‌-95 ಮಾಸ್ಕ್‌ ಧರಿಸಬೇಕು. ನಂತರ ಸೋಡಿಯಂ ಹೈಪೋಕ್ಲೋರೈಟ್‌ನಿಂದ ತೊಳೆದು ಬಿಸಾಡಬೇಕು.* ಪ್ರತ್ಯೇಕ ಕೋಣೆಯಲ್ಲಿ ವಾಸ. ಮನೆಯವರಿಂದ 2 ಮೀಟರ್‌ ದೂರ ಇರಬೇಕು.* ವೃದ್ಧರು ಹಾಗೂ ವಯೋಸಹಜ ರೋಗದಿಂದ ಬಳಲುತ್ತಿರುವವರ ಸಂಪರ್ಕಕ್ಕೆ ಬರಬಾರದು.* ಕುದಿಸಿ ಆರಿಸಿದ ನೀರು ಕುಡಿಯಬೇಕು. ದಿನಕ್ಕೆ 2 ಲೀಟರ್‌ ನೀರು ಕುಡಿಯಬೇಕು.* ಕೈಯನ್ನು ಆಗಾಗ್ಗೆ ತೊಳೆಯಬೇಕು. ಅವರು. ಮುಟ್ಟಿದ ವಸ್ತುಗಳನ್ನು ಆಗಾಗ್ಗೆ ಸ್ವಚ್ಛಗೊಳಿಸಬೇಕು.* ಧೂಮಪಾನ, ಮದ್ಯಪಾನ, ತಂಬಾಕು ಸೇವನೆ ಮಾಡುವಂತಿಲ್ಲ. ಆರೋಗ್ಯ ಸೇತು ಆ್ಯಪ್‌ ಬಳಸಬೇಕು.
ಕರೊನಾ ಸೋಂಕು: ಖಾಸಗಿ ಆಸ್ಪತ್ರೆಗಳ ದರಪಟ್ಟಿ ಬಿಡುಗಡೆ
.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty − 4 =
Remember me
