ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ ಕರೊನಾ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿದ್ದು, ಇದಕ್ಕೆ ಇತ್ತೀಚೆಗೆ ಹೊರ ರಾಜ್ಯಗಳಿಂದ ಜನರು ಬಂದಿದ್ದೇ ಕಾರಣ ಎಂಬುದು ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಸಂಖ್ಯೆಗಳಿಂದ ಸಾಬೀತಾಗಿದೆ.
ಧಾರವಾಡ ಜಿಲ್ಲೆ ಕಳೆದ ಒಂದು ವಾರದಿಂದ ಯಾವುದೇ ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗದೇ ಸಮಾಧಾನದಿಂದ ಇತ್ತು. ಮಂಗಳವಾರ ಒಂದೇ ದಿನ 9 ಜನರಲ್ಲಿ ವೈರಾಣು ಸೋಂಕು ದೃಢಪಟ್ಟವು. ಇವರೆಲ್ಲರೂ ಗುಜರಾತ್‌ನ ಅಹಮದಾಬಾದ್‌ನಿಂದ ಬಂದವರು.
ಇದನ್ನೂ ಓದಿ24 ಗಂಟೆಯಲ್ಲಿ 63 ಕೊವಿಡ್​-19 ಪ್ರಕರಣಗಳು ಪತ್ತೆ; ಸಾವಿರದತ್ತ ದಾಪುಗಾಲು ಹಾಕುತ್ತಿದೆ ಸೋಂಕಿತರ ಸಂಖ್ಯೆ
ಹೊರ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಆಗಮಿಸಲು ಅವಕಾಶ ನೀಡಿದ ಹಿನ್ನೆಲೆಯಲ್ಲಿ ಗುಜರಾತ್‌ನಿಂದ 44 ಜನರು ಧಾರವಾಡಕ್ಕೆ ಆಗಮಿಸಿದ್ದಾರೆ. ಇವರೆಲ್ಲರನ್ನೂ ಪ್ರತ್ಯೇಕವಾಗಿ ಇರಿಸಿ, ಕರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರ ಪೈಕಿ 20 ಮಂದಿ ತಬ್ಲಿಘ್ ನಂಟು ಹೊಂದಿದವರು. ಅವರ ಆರೋಗ್ಯದ ಮೇಲೆ ನಿಗಾ ಇರಿಸಿ ಪ್ರತ್ಯೇಕವಾಗಿ ಇರಿಸಲಾಗಿತ್ತು. ಸೋಂಕು ದೃಢಪಟ್ಟಿರುವ 9 ಜನರು ಈ 20 ಮಂದಿಯ ಗುಂಪಿಗೆ ಸೇರಿದವರೇ ಆಗಿದ್ದಾರೆ.
ಇದಲ್ಲದೆ, ಕರೊನಾ ಸೋಂಕಿನಿಂದ ದೂರ ಉಳಿದಿದ್ದ ಹಾಸನ ಜಿಲ್ಲೆಯಲ್ಲಿ ಮಂಗಳವಾರ ಒಂದೇ ಕುಟುಂಬದ ನಾಲ್ವರು ಸೇರಿ ಐವರಲ್ಲಿ ಸೋಂಕು ಪತ್ತೆಯಾಗಿದೆ. ಮುಂಬೈನಲ್ಲಿ ನೆಲೆಸಿದ್ದ ಚನ್ನರಾಯಪಟ್ಟಣ ತಾಲೂಕಿನ ಹಳ್ಳಿಯೊಂದರ ಒಂದೇ ಕುಟುಂಬದ ನಾಲ್ವರು ಇದರಲ್ಲಿ ಸೇರಿದ್ದಾರೆ.
ಇದನ್ನೂ ಓದಿಅಗತ್ಯವಿಲ್ಲದಿದ್ದರೂ ಆನ್‌ಲೈನ್ ಶಿಕ್ಷಣ ನೀಡಿ ಶೋಷಿಸುವ ಶಾಲೆಗಳಿಗೆ ಸಚಿವರ ಎಚ್ಚರಿಕೆ
ಮೇ 10 ರಂದು ಸೇವಾ ಸಿಂಧು ಪಾಸ್ ಪಡೆದು ಹಿರೀಸಾವೆ ಗಡಿ ಮೂಲಕ ಜಿಲ್ಲೆ ಪ್ರವೇಶಿಸಿದ್ದ ಈ ಐವರನ್ನೂ ಆರೋಗ್ಯ ಇಲಾಖೆ ಸಿಬ್ಬಂದಿ ಸಮೀಪದ ಸರ್ಕಾರಿ ಹಾಸ್ಟೆಲ್ ಕಟ್ಟಡವೊಂದರಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಿದ್ದರು. ಕರೊನಾ ಪರೀಕ್ಷೆ ವರದಿಯು ಮಂಗಳವಾರ ಕೈ ಸೇರಿದ್ದು, ಐವರಲ್ಲಿಯೂ ಕರೊನಾ ಸೋಂಕು ಕಂಡುಬಂದಿದೆ.
ದಾವಣಗೆರೆಯಲ್ಲಿ ಮಂಗಳವಾರ ಕರೊನಾ ಪಾಸಿಟಿವ್ ವರದಿ ಬಂದವರ ಪೈಕಿ ಆರು ಮಂದಿ ಗುಜರಾತ್‌ನ ಅಹಮದಾಬಾದ್‌ನಿಂದ ಬಂದವರು. ಕೋಲಾರದ ಐವರಲ್ಲಿ ಇಬ್ಬರು ಓಡಿಶಾದಿಂದ ಮತ್ತು ಒಬ್ಬರು ಚೆನೈನಿಂದ ಬಂದವರು. ಇನ್ನಿಬ್ಬರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಇನ್ನು ಬಾಗಲಕೋಟೆಯ 14 ಮಂದಿ, ಯಾದಗಿರಿಯ ಇಬ್ಬರು ಸಹ ಅಹಮದಾಬಾದ್‌ನಿಂದ ಬಂದವರು. ಮಂಡ್ಯದ ಒಬ್ಬ ವ್ಯಕ್ತಿ ಮುಂಬೈಯಿಂದ ಆಗಮಿಸಿದವರು.
ಒಟ್ಟಾರೆ ಮಂಗಳವಾರ ಪಾಸಿಟಿವ್ ಬಂದ 63 ಜನರಲ್ಲಿ ಮುಕ್ಕಾಲು ಭಾಗ ಸೋಂಕಿತರು ಹೊರರಾಜ್ಯಗಳಿಂದ ಬಂದವರು ಎಂಬುದು ಇಲ್ಲಿ ಗಮನಾರ್ಹ.
ಜಗತ್ತಿನ ಅತಿ ದುಬಾರಿ ಲಸಿಕೆಯಾಗಲಿದೆಯೇ ಕರೊನಾ ಔಷಧ ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 1 =
Remember me
