ಅಥಣಿ (ಬೆಳಗಾವಿ):ಪುಣ್ಯಕ್ಷೇತ್ರಕ್ಕೆ ಹೋಗಿ ಬಂದ ನಿಮಿತ್ತ ಗ್ರಾಮವೊಂದರಲ್ಲಿ ಸಂಬಂಧಿಕರು ಮತ್ತು ಸ್ಥಳೀಯರಿಗೆ ಭೋಜನಕೂಟ ಏರ್ಪಡಿಸಿ ಊಟ ಬಡಿಸಿದ್ದ ಮಹಿಳೆಯಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.
ಇದನ್ನೂ ಓದಿರಿVIDEO| ಮಿಡತೆ ದಾಳಿಯ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದ ಸಿನಿಮಾ ಇದು!
ಅಥಣಿ ತಾಲೂಕಿನ 44 ಜನರು ಜಾರ್ಖಂಡ್​ ರಾಜ್ಯದ ಧಾಮಿರ್ಕ ಕ್ಷೇತ್ರಕ್ಕೆ ಹೋಗಿ ಬಂದಿದ್ದರು. ಅವರಲ್ಲಿ ಸವದಿ ಗ್ರಾಮದ 7, ನಂದಗಾಂವ್​ನ 3 ಹಾಗೂ ಬೆಳವಕ್ಕಿ, ಜುಂಜರವಾಡ ಮತ್ತು ಹುಕ್ಕೇರಿ ಪಟ್ಟಣದಲ್ಲಿ ತಲಾ 1 ಸೇರಿ ಒಟ್ಟು 13 ಜನರಲ್ಲಿ ಮಂಗಳವಾರ ಕರೊನಾ ದೃಢಪಟ್ಟಿತ್ತು. ಇವರಲ್ಲಿ ಸೋಂಕಿತ ಮಹಿಳೆಯೊಬ್ಬಳು ಧಾಮಿರ್ಕ ಕ್ಷೇತ್ರಕ್ಕೆ ಹೋಗಿ ಬಂದ ನಿಮಿತ್ತ ವಾಡಿಕೆಯಂತೆ ತನ್ನ ಬಂಧು, ಬಳಗದವರೆಲ್ಲರಿಗೂ ಭೋಜನಕೂಟ ಏರ್ಪಡಿಸಿ, ಖುದ್ದಾಗಿ ಎಲ್ಲರಿಗೂ ಅಡುಗೆ ಬಡಿಸಿದ್ದಳು.
ಇದನ್ನೂ ಓದಿರಿVIDEO/ ರೈತರ ಕೊಳವೆಬಾವಿಯಲ್ಲಿ ನೀರಿನ ಬದಲು ಬೆಂಕಿ ಬರ್ತಿದೆ!
ಇದೀಗ ಆ ಮಹಿಳೆಯಲ್ಲಿ ಕೊರನಾ ಸೋಂಕು ದೃಢಪಟ್ಟಿರುವುದರಿಂದ ಖವಟಗೊಪ್ಪ ಗ್ರಾಮಸ್ಥರು ಸೇರಿ ಸುತ್ತಮುತ್ತಲ ಹಳ್ಳಿಯ ಜನರು ತಮ್ಮನೆಲ್ಲ ಕ್ವಾರಂಟೈನ್​ ಮಾಡುತ್ತಾರೆ ಎಂಬ ಭಯದಲ್ಲಿದ್ದಾರೆ. ಕೆಲವರು ಕ್ವಾರಂಟೈನ್​ಗೆ ಹೆದರಿ ಭೋಜನಕೂಟದಲ್ಲಿ ಭಾಗವಹಿಸಿರುವವರೂ ಅಲ್ಲಗಳೆಯುತ್ತಿದ್ದಾರೆ ಎನ್ನಲಾಗಿದೆ.
ಸೋಂಕಿತ ಮಹಿಳೆಯೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿರುವವರ ಮಾಹಿತಿ ಕಲೆ ಹಾಕುವ ಕಾರ್ಯದಲ್ಲಿ ತೊಡಗಿರುವ ಆಶಾ, ಅಂಗನವಾಡಿ ಕಾರ್ಯಕರ್ತೆ, ಗ್ರಾಪಂ ಮತ್ತು ಪೊಲೀಸ್​ ಸಿಬ್ಬಂದಿಗೆ ಪತ್ತೆ ಹಚ್ಚುವುದು ಸಮಸ್ಯೆ ಆಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿನ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಚಿಕ್ಕೋಡಿ ವಿಭಾಗದ ವೈದ್ಯಾಧಿಕಾರಿ ಡಾ. ಶೈಲಜಾ ತಿಳಿಸಿದ್ದಾರೆ.
ಇದನ್ನೂ ಓದಿರಿಮಂಡ್ಯದ ಮರುವನಹಳ್ಳಿಯಲ್ಲಿ ಸೋಂಕು ಹೆಚ್ಚಲು ಮಾವಿನಹಣ್ಣು ಕಾರಣವಂತೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
