ಬೆಂಗಳೂರು:ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ 11 ಹೊಸ ಪ್ರಕರಣಗಳು ಪತ್ತೆಯಾಗಿವೆ. ಎಂಟು ಪ್ರಕರಣಗಳು ಕಲಬುರಗಿಯಿಂದಲೇ ವರದಿಯಾಗಿದ್ದು, ಇಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಉಳಿದಂತೆ ಬೆಳಗಾವಿಯ ಹುಕ್ಕೇರಿ, ದಾವಣಗೆರೆ ಮತ್ತು ನಂಜನಗೂಡಿನಲ್ಲಿ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ.ಹುಕ್ಕೇರಿಯಲ್ಲಿ 12 ವರ್ಷದ ಬಾಲಕನಲ್ಲಿ ಸೋಂಕು ಪತ್ತೆಯಾಗಿದ್ದರೆ, ಕಲಬುರಗಿಯಲ್ಲಿ ನಾಲ್ಕೂವರೆ ತಿಂಗಳ ಹೆಣ್ಣು ಮಗು, 12, 14 ಮತ್ತು 17 ವರ್ಷದ ಬಾಲಕಿಯರಲ್ಲಿ ಸೋಂಕು ಪತ್ತೆಯಾಗಿದೆ. ಉಳಿದಂತೆ ಕಲಬುರಗಿಯಲ್ಲಿ 20 ಮತ್ತು 28 ವರ್ಷದ ಯುವಕರು, 40 ವರ್ಷದ ಮಹಿಳೆ ಹಾಗೂ ದಾವಣಗೆರೆಯಲ್ಲಿ 35 ವರ್ಷದ ಯುವಕ ಸೋಂಕು ಪೀಡಿತರಾಗಿದ್ದಾರೆ.ಈ ಮೂಲಕ ರಾಜ್ಯದಲ್ಲಿ ಇದುವರೆಗಿನ ಸೋಂಕಿನ ಪ್ರಮಾಣ 534ಕ್ಕೆ ಏರಿದ್ದು 216 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. ಕರೊನಾ ಮಾರಿ ಈವರೆಗೆ 20 ಮಂದಿಯನ್ನು ಬಲಿ ಪಡೆದಿದೆ. 297 ಸೋಂಕಿತ ವ್ಯಕ್ತಿಗಳ ಪೈಕಿ 290 ಮಂದಿ ಪ್ರತ್ಯೇಕ ವಾರ್ಡ್​ಗಳಲ್ಲಿ ಚಿಕಿತ್ಸೆ ಪಡೆಯುತ್ತಿದದರೆ, ಏಳು ಮಂದಿಯನ್ನು ಐಸಿಯುನಲ್ಲಿ ಇಡಲಾಗಿದೆ.ನಿಮ್ಮ ಜಿಲ್ಲೆಗಳಲ್ಲಿ ಹೇಗಿದೆ ಸ್ಥಿತಿ? ಇಲ್ಲಿದೆ ವಿವರ:

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
