ಚೆನ್ನೈ:ಅಯ್ಯೋ ವಿಧಿಯೇ.. ನೀನೆಷ್ಟು ಕ್ರೂರಿ? ಇಡೀ ಕುಟುಂಬಕ್ಕೆ ಆಧಾರಸ್ತಂಭ ಆಗಿದ್ದ ಯಜಮಾನ ಸತ್ತರೂ ಅವರನ್ನು ಕೊನೇ ಬಾರಿಗೆ ಅಪ್ಪಿಕೊಳ್ಳುವ, ಕಡೇ ಪಕ್ಷ ಮುಟ್ಟೋಕು… ಮುಖವನ್ನಾದರೂ ಹತ್ತಿರದಿಂದ ಕಣ್ತುಂಬಿಕೊಳ್ಳುವ ಅವಕಾಶವನ್ನೇ ನೀಡದಷ್ಟು ನಿರ್ಧಯಿ ಆಗಿಬಿಟ್ಟೆ ಏಕೆ?
ಇಂತಹದ್ದೊಂದು ಕರುಣಾಜನಕ ದೃಶ್ಯಕ್ಕೆ ಚೆನ್ನೈನ ಕೋವಿಡ್​ ಆಸ್ಪತ್ರೆಯೊಂದು ಸಾಕ್ಷಿಯಾಗಿದೆ. ಕರೊನಾ ಸೋಂಕು ಮಣಿಸುವ ಹೋರಾಟದಲ್ಲಿ ಮೂರು ತಿಂಗಳಿಂದ ಕರ್ತವ್ಯ ನಿರ್ವಹಿಸಿದ್ದ ಚೆನ್ನೈನ ಪೊಲೀಸ್​ ಅಧಿಕಾರಿಯೊಬ್ಬರು ಕರೊನಾಗೆ ಬಲಿಯಾದರು. ಅವರ ಮೃತದೇಹ ಆಸ್ಪತ್ರೆಯಿಂದ ಹೊರ ತರುತ್ತಿದ್ದಂತೆ ಬಾಗಿಲಲ್ಲೇ ಕಾಯುತ್ತಿದ್ದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.ಇದನ್ನೂ ಓದಿರಿvideo/ ಕರೊನಾ ವಾರ್ಡಿನಲ್ಲಿ ‘ನರಕ’ ದರ್ಶನ, ಶೌಚಗೃಹದ ನೀರನ್ನೇ ಕುಡಿದ ಸೋಂಕಿತರು!
ಕೊನೇ ಬಾರಿಗೆ ಅವರನ್ನು ನೋಡಬೇಕು, ಅಪ್ಪಿಕೊಳ್ಳಬೇಕು ಎಂದು ಕುಟುಂಬಸ್ಥರು ಅಂಗಲಾಚುತ್ತಿರುವ … ಶವ ಮುಟ್ಟಲು ಓಡಿ ಹೋಗುತ್ತಿದ್ದವರನ್ನು ಇತರರು ಎಳೆದುಕೊಳ್ಳುತ್ತಿರುವ… ಅಸಹಾಯಕವಾಗಿ ನಿಂತಿದ್ದ ಸಿಬ್ಬಂದಿ… ಈ ದೃಶ್ಯ ನೋಡುತ್ತಿದ್ದರೆ ಎಂತಹವರ ಕಣ್ಣಲ್ಲಿ ನೀರು ಜಿನುಗದೆ ಇರದು. ಕರೊನಾ ವಾರಿಯರ್ಸ್ ಸಾವಿನ ದೃಶ್ಯ ನೋಡಿದರೆ ಸಾವಿನಲ್ಲೂ ವಿಧಿಯ ಕ್ರೂರತೆಗೆ ಹಿಡಿಶಾಪ ಹಾಕುತ್ತೀರಿ.
ಕರ್ತವ್ಯ ನಿರತ ಪೊಲೀಸ್​ ಅಧಿಕಾರಿಯೊಬ್ಬರು ಕರೊನಾ ಸೋಂಕಿಗೆ ಬಲಿಯಾದ ದೃಶ್ಯ ಕೋವಿಡ್​19ನ ಕರಾಳತೆಗೆ ಹಿಡಿದ ಕನ್ನಡಿ. ಕೋವಿಡ್​ ನಿಯಮದಂತೆ ಅಂತ್ಯಸಂಸ್ಕಾರ ಮಾಡಲು ಮೃತದೇಹ ಕೊಂಡೊಯ್ಯುವ ವೇಳೆ ಕಂಡು ಬಂದ ಮನಕಲಕುವ ದೃಶ್ಯ ಇಲ್ಲಿದೆ. ಕೆಳಗಿನ ಲಿಂಕ್​ ಕ್ಲಿಕ್​ ಮಾಡಿ.
ಇದನ್ನೂ ನೋಡಿ
https://www.facebook.com/VVani4U/videos/281180466335601/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 14 =
Remember me
