ಬೀದರ್​:ಹುಲಸೂರು ತಾಲೂಕಿನ ಬೇಲೂರಿನ ಗ್ರಾಮದ ಯುವಕನು ಮದುವೆಯಾದ ಕೆಲವೇ ಗಂಟೆಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ನವದಂಪತಿಗಳು ಒಟ್ಟಿಗೆ ಇರಬೇಕಿದ್ದ ಸಮಯದಲ್ಲೇ ಮನೆ ಬಾಗಿಲಿಗೆ ಬಂದ ಆರೋಗ್ಯ ಸಿಬ್ಬಂದಿ ಆತನ್ನು ಕುಟುಂಬಸ್ಥರ ವಿರೋಧದ ನಡುವೆಯೂ ಕರೆಯೊಯ್ದಿದ್ದಾರೆ.
ಭಾಲ್ಕಿ ತಾಲೂಕಿನ ಕೋನಮೆಳಕುಂದ ಗ್ರಾಮದಲ್ಲಿ ಬೇಲೂರಿನ 25 ವರ್ಷದ ಯುವಕ ಮದುವೆ ಸೋಮವಾರ ಬೆಳಗ್ಗೆ ನಡೆದಿತ್ತು. ಅಂದು ಮದುವೆ ಮುಗಿಸಿಕೊಂಡು ಸ್ವಗ್ರಾಮಕ್ಕೆ ಬಂದ ಯುವಕ‌ನಿಗೆ ಶಾಕ್ ಕಾದಿತ್ತು!ಇದನ್ನೂ ಓದಿರಿಲೈಂಗಿಕವಾಗಿ ಬಳಸಿಕೊಂಡು ಸಾಲ ಕೊಟ್ಟ, ಆಕೆ ಹಣ ಹಿಂತಿರುಗಿಸಿದರೂ ಮತ್ತೆ ಬರುವಂತೆ ಪೀಡಿಸಿದ…
ಮಹಾರಾಷ್ಟ್ರದ ಪುನಾದಿಂದ ಬೀದರ್​ ಜಿಲ್ಲೆಗೆ ಆಗಮಿಸಿದ ಬೇಲೂರಿನ ಯುವಕನಿಗೆ ಮೇ 19ರಿಂದ 30ರವೆರಗೂ ಕ್ವಾರಂಟೈನ್ ಮಾಡಲಾಗಿತ್ತು. ಆಗ ಯುವಕನ ಗಂಟಲು ದ್ರವ ಪಡೆದು ಕರೊನಾ ಪರೀಕ್ಷೆಗೆ ಕಳುಹಿಸಲಾಗಿತ್ತು. ಕ್ವಾರಟೈನ್ ಅವಧಿ ಮುಗಿದ ಹಿನ್ನೆಲೆಯಲ್ಲಿ ವರದಿ ಬರುವ‌ ಮುನ್ನವೇ ಈತ ಸ್ವಗ್ರಾಮಕ್ಕೆ ಆಗಮಿಸಿದ್ದ.
15 ದಿನಗಳ ಬಳಿಕ ಈತನಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಹಾಗಾಗಿ ಈತನನ್ನು ಹುಡುಕಿಕೊಂಡು ವೈದ್ಯರು ಮತ್ತು ಸಿಬ್ಬಂದಿ ಆ್ಯಂಬುಲೆನ್ಸ್ ಜತೆ ಯುವಕನ ಮನೆ ಮುಂದೆ ಬಂದಿದ್ದರು. ಆಸ್ಪತ್ರೆಗೆ ಹೋಗಲು ತೀವ್ರ ವಿರೋಧದ ನಡುವೆಯೂ ಮದುಮಗನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮದುವೆಯಲ್ಲಿ ಪಾಲ್ಗೊಂಡಿದ್ದ ಸಂಬಂಧಿಕರಲ್ಲಿ ಕರೊನಾ ಆತಂಕ ಆವರಿಸಿದೆ.
ಇದನ್ನೂ ಓದಿರಿಕಂಡವರ ಹೆಂಡ್ತಿ ಜತೆ ಅವಿವಾಹಿತನ ಲವ್ವಿ ಡವ್ವಿ… ಆಕೆಯ ಮನೆಯವರಿಗೆ ತಾನೇ ಫೋಟೋ ಕಳಿಸಿ ಗುಟ್ಟನ್ನು ರಟ್ಟು ಮಾಡಿದ!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 − 7 =
Remember me
