ಬೆಂಗಳೂರು :ಕರೊನಾ ಸೋಂಕು ಏನಿದ್ದರೂ ವಯಸ್ಕರಿಗೇ ಹೆಚ್ಚು ತಗುಲುತ್ತದೆ. ಈ ಸೋಂಕಿನ ವಿರುದ್ಧ ಮಕ್ಕಳಿಗೆ ಸ್ವಾಭಾವಿಕವಾದ ರೋಗ ನಿರೋಧಕ ಶಕ್ತಿ ಇರುತ್ತದೆ ಎಂಬುದು ಈ ಮುನ್ನ ಹಲವರ ಅಭಿಪ್ರಾಯವಾಗಿತ್ತು. ಆದರೆ, ಇದೀಗ ಕರೊನಾ ಹರಡುವಿಕೆಯ ಎರಡನೇ ಅಲೆಯಲ್ಲಿ ಅಂಕಿಅಂಶಗಳು ಬೇರೆಯೇ ಕಥೆಯನ್ನು ಹೇಳುತ್ತಿವೆ.
ಬೆಂಗಳೂರು ನಗರದಲ್ಲಿ ಮಾರ್ಚ್ 1 ರಿಂದ ಈವರೆಗೆ ಹತ್ತು ವರ್ಷದ ಕೆಳಗಿನ 470 ಮಕ್ಕಳಲ್ಲಿ ಕರೊನಾ ಸೋಂಕು ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರೊನಾ ಸೋಂಕು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೇಸಿಗೆ ರಜೆಗಳು ಆರಂಭವಾಗುತ್ತಿರುವಾಗ, ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಇದು ಎಚ್ಚರಿಕೆ ಘಂಟೆಯಾಗಿದೆ.
ಇದನ್ನೂ ಓದಿ:1ರಿಂದ 9ನೇ ತರಗತಿ ಮಕ್ಕಳಿಗೆ ಸಿಹಿ ಸುದ್ದಿ ಕೊಡಲಿದೆ ಸರ್ಕಾರ- ಎಲ್ಲರೂ ಪಾಸ್​ ಪಾಸ್​….
ಈ ಮುನ್ನ ಲಾಕ್​ಡೌನ್ ಮತ್ತು ಕರೊನಾ ಬಗೆಗಿನ ಮುನ್ನೆಚ್ಚರಿಕೆ ಕ್ರಮಗಳನ್ನು ಹೆಚ್ಚಾಗಿ ಪಾಲಿಸುತ್ತಿದ್ದರ ಪರಿಣಾಮವಾಗಿ ಮಕ್ಕಳು ಕರೊನಾ ಸೋಂಕಿಗೆ ಒಳಗಾಗುತ್ತಿರಲಿಲ್ಲ. ಆದರೆ ಇತ್ತೀಚೆಗೆ ಹೊರಾಂಗಣ ಚಟುವಟಿಕೆಗಳು, ಸಭೆ-ಸಮಾರಂಭಗಳಲ್ಲಿ ಎಲ್ಲರೂ ಮುಕ್ತವಾಗಿ ಭಾಗವಹಿಸಲು ಆರಂಭಿಸಿರುವುದರಿಂದ ಮಕ್ಕಳಿಗೂ ಸೋಂಕಿನ ಅಪಾಯ ಹೆಚ್ಚಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಂಕಿಅಂಶಗಳ ಪ್ರಕಾರ ಜಗತ್ತಿನಾದ್ಯಂತ ವರದಿಯಾಗಿರುವ ಕರೊನಾ ಪ್ರಕರಣಗಳಲ್ಲಿ ಕೇವಲ ಶೇ. 8.5 ರಷ್ಟು ಪ್ರಕರಣಗಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಕಂಡುಬಂದಿದೆ ಎನ್ನಲಾಗಿದೆ. ಬಹುತೇಕ ಚಿಕ್ಕ ವಯಸ್ಸಿನವರಲ್ಲಿ ಮೆದು ಪ್ರಮಾಣದಲ್ಲಿ ರೋಗಲಕ್ಷಣಗಳು ಕಂಡುಬಂದಿದ್ದರೂ, ಅನ್ಯ ವೈದ್ಯಕೀಯ ಸಮಸ್ಯೆಗಳಿದ್ದಲ್ಲಿ ಅಂತಹ ಮಕ್ಕಳು ಸೋಂಕಿಗೆ ಒಳಗಾಗದಂತೆ ಎಚ್ಚರ ವಹಿಸುವುದು ಅವಶ್ಯಕ ಎಂದು ತಜ್ಞರು ಹೇಳಿದ್ದಾರೆ.(ಏಜೆನ್ಸೀಸ್)
ಚುನಾವಣಾ ಪ್ರಚಾರದ ನಡುವೆ ದೋಸೆ ಹಾಕಿದ ಖುಷ್​ಬೂ !
VIDEO | ಹೊರಟೇಬಿಟ್ಟಿತು ಪರಿಸರಸ್ನೇಹಿ ವಿದ್ಯುತ್ ರೈಲು… ನೀವೂ ನೋಡಿ!
‘ಸುಳ್ಳು ಸುದ್ದಿ’ ಎಂದು ಹೌಹಾರಿದ ಕಾಂಗ್ರೆಸ್ ನಾಯಕ… ಮತ್ತೆ ‘ಸಾರಿ’ ಕೇಳಿದ್ದೇಕೆ ?!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
