| ಪಂಕಜ ಕೆ.ಎಂ. ಬೆಂಗಳೂರು
ರಾಜ್ಯದಲ್ಲಿ ಕರೊನಾ ಸೋಂಕಿಗೆ ತುತ್ತಾದವರಲ್ಲಿ ಶೇ.63.4 ಪುರುಷರಿದ್ದರೆ, ಶೇ.36.6 ಮಹಿಳೆಯರಿದ್ದಾರೆ. ಆ ಮೂಲಕ ಸೋಂಕಿನಲ್ಲೂ ಪುರಷರ ಪಾಲೇ ಅಧಿಕ ಎಂಬಂತಾಗಿದೆ. ಉದ್ಯೋಗ ಸೇರಿ ನಾನಾ ಕಾರಣಗಳಿಗೆ ಪುರುಷರು ಹೊರಗೆ ಸುತ್ತಾಡುವುದರಿಂದ ಸೋಂಕಿತರ ಪ್ರಮಾಣ ಹೆಚ್ಚಿದೆ ಎಂದು ರಾಜ್ಯ ಕೋವಿಡ್ -19 ವಾರ್ ರೂಮ್ ವಿಶ್ಲೇಷಣಾ ವರದಿಯಲ್ಲಿ ಉಲ್ಲೇಖಿಸಿದೆ. ಈವರೆಗೂ ಸೋಂಕಿಗೆ ಒಳಗಾದವರಲ್ಲಿ ಎರಡು ತಿಂಗಳ ಮಗುವಿನಿಂದ 90 ವರ್ಷದ ವೃದ್ಧರವರೆಗೂ ಇದ್ದಾರೆ. ಇವರಲ್ಲಿ ಶೇ.5.76 ಹಿರಿಯ ನಾಗರಿಕರು ಹಾಗೂ ಶೇ. 8 ಮಕ್ಕಳಲ್ಲಿ ಸೋಂಕು ಕಂಡುಬಂದಿದೆ. ಲಾಕ್​ಡೌನ್ ಸಂದರ್ಭ ಮಹಿಳೆಯರು, ವೃದ್ಧರೂ ಹಾಗೂ ಮಕ್ಕಳು ಹೆಚ್ಚಾಗಿ ಮನೆಯಲ್ಲಿಯೇ ಉಳಿದಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಕಂಡುಬಂದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಏರುತ್ತಿರುವ ಪ್ರಕರಣಗಳ ದರ:ಕಳೆದೊಂದು ವಾರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿವೆ. ಇದರಿಂದ ಸೋಂಕಿತ ಪ್ರಕರಣಗಳ ದರ ಶೇ.8.50ಕ್ಕೆ ಏರಿಕೆಯಾಗಿದೆ. ಈ ಪ್ರಮಾಣ ಉಡುಪಿ, ಕಲಬುರಗಿ ಮತ್ತು ಯಾದಗಿರಿಯಲ್ಲಿ ತೀವ್ರ ತರಹದಲ್ಲಿ ಹೆಚ್ಚುತ್ತಿದೆ. ಮೃತರ ಸಂಖ್ಯೆಯಲ್ಲಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದೆ. ಆರಂಭದಲ್ಲಿ ಕೇವಲ ಪ್ರಯಾಣ ಹಿನ್ನೆಲೆ ಹೊಂದಿದ್ದವರು ಹಾಗೂ ಅವರೊಂದಿಗೆ ನೇರ ಸಂಪರ್ಕಕ್ಕೆ ಬಂದವರಲ್ಲಿ ಮಾತ್ರ ಸೋಂಕು ಕಾಣಿಸಿಕೊಳ್ಳುತ್ತಿತ್ತು. ಆದರೀಗ, ದ್ವಿತೀಯ ಸಂರ್ಪತರು ಸೇರಿ ಪರೋಕ್ಷ ಸಂಪರ್ಕದಿಂದ ಸೋಂಕಿಗೆ ಒಳಗಾಗುವವರ ಸಂಖ್ಯೆ ಹೆಚ್ಚಿದೆ. ಇದರೊಂದಿಗೆ ರೋಗ ಲಕ್ಷಣಗಳೇ ಇಲ್ಲದವರಲ್ಲೂ ಸೋಂಕು ದೃಢಪಡುತ್ತಿರುವುದು ಆತಂಕ ಹೆಚ್ಚಿಸಿದೆ.ಇದನ್ನೂ ಓದಿ:24 ಗಂಟೆಯಲ್ಲಿ ತ್ರಿಶತಕ ಬಾರಿಸಿದ ಕೊವಿಡ್​-19; ಕಲಬುರಗಿಯಲ್ಲೇ ಹೆಚ್ಚು
ಎಚ್ಚರ ತಪ್ಪದಿರಿ:ಉದ್ಯೋಗ ಸೇರಿ ಅನಿವಾರ್ಯ ಹಾಗೂ ತುರ್ತು ಅಗತ್ಯತೆ ಹೊರತುಪಡಿಸಿ ಅನಗತ್ಯವಾಗಿ ಮನೆಯಿಂದ ಹೊರಗೆ ಹೋಗಬೇಡಿ. ಹಾಗೇ ಹೋಗುವವರು ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಕೊಂಡೊಯ್ಯುವುದರ ಜತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಸಾಕಷ್ಟು ಎಚ್ಚರಿಕೆ ವಹಿಸುವ ಅಗತ್ಯವಿದೆ. ವೃದ್ಧರು, ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತಾದ್ದರಿಂದ ಅನಗತ್ಯವಾಗಿ ಅವರನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಬೇಡಿ. ಇನ್ನು ಮಧುಮೇಹ, ರಕ್ತದೊತ್ತಡ ಇನ್ನಿತರ ಆರೋಗ್ಯ ಸಮಸ್ಯೆ ಹೊಂದಿರುವವರು ಹೆಚ್ಚಿನ ಜಾಗರೂಕತೆ ವಹಿಸುವ ಅಗತ್ಯವಿದೆ ಎನ್ನುತ್ತಾರೆ ವೈದ್ಯರು.
ಉಡುಪಿ: ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ಲ್ಯಾಬ್ ಟೆಕ್ನೀಶಿಯನ್ ಒಬ್ಬರಿಗೆ ಭಾನುವಾರ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಸೋಮವಾರ ಅವರ ಐದು ವರ್ಷದ ಮಗುವಿಗೂ ಪಾಸಿಟಿವ್ ಬಂದಿದೆ. ಈ ಲ್ಯಾಬ್ ಟೆಕ್ನೀಶಿಯನ್ ಯಾವುದೇ ಟ್ರಾವೆಲ್ ಹಿಸ್ಟರಿ ಹೊಂದಿರಲಿಲ್ಲ.ಇದನ್ನೂ ಓದಿ:ಪ್ರಿಯಕರನ ಜತೆ ಮನೆ ಬಿಟ್ಟು ಬಂದಿದ್ದ ಯುವತಿ; ಪಾಲಕರಿಗೆ ಹೆದರಿ ಆತ್ಮಹತ್ಯೆಗೆ ಯತ್ನ
ಕಂಟೇನ್ಮೆಂಟ್ ವಲಯದಿಂದ ಬಂದವರು ಅಥವಾ ರೋಗ ಲಕ್ಷಣ ಇಲ್ಲದ ಗರ್ಭಿಣಿಯರಿಗೆ ಕೋವಿಡ್-19 ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡುವ ಅವಶ್ಯಕತೆ ಇಲ್ಲ. ಆರೋಗ್ಯವಾಗಿರುವ ಗರ್ಭಿಣಿಯರಿಗೆ ನೇರವಾಗಿ ಹೆರಿಗೆಗೆ ಅವಕಾಶ ಮಾಡಿಕೊಡಬಹುದು.
| ಶ್ರೀರಾಮಲುಆರೋಗ್ಯ ಸಚಿವ (ಕಾರವಾರದಲ್ಲಿ)
ಅಪ್ಪ-ಅಮ್ಮ ಮನೆಯಲ್ಲಿ ಇಲ್ಲದ ರಾತ್ರಿ ತಂಗಿ ಮೇಲೆ ಕಣ್ಣು ಹಾಕಿದ ಅಣ್ಣ; ನಡೆದೇ ಹೋಯ್ತು ಒಂದು ಕ್ರೈಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
