ಮಂಡ್ಯ: ಮಿಮ್ಸ್​ (ಮಂಡ್ಯ ವೈದ್ಯಕೀಯ ಸಂಶೋಧನಾ ಸಂಸ್ಥೆ) ಐಸೋಲೇಷನ್ ವಾರ್ಡ್​ನಿಂದ ಪರಾರಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು 2 ತಾಸುಗಳಲ್ಲಿ ಪತ್ತೆ ಮಾಡಿದ್ದಾರೆ.
ಆಸ್ಪತ್ರೆಯಿಂದ ಪರಾರಿಯಾದ ಆತ ಶಂಕರಮಠದಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ಇದ್ದ. ಪೊಲೀಸರು ಪತ್ತೆ ಮಾಡಿ ನಂತರ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದರು.
ದೆಹಲಿಯಲ್ಲಿ ನಡೆದ ನಿಜಾಮುದ್ದೀನ್​ ಸಭೆಗೆ ಈತ ಹೋಗಿದ್ದ. ಅಲ್ಲದೆ ಈತ 10 ಮಂದಿ ಧರ್ಮ ಗುರುಗಳ ಸಂಪರ್ಕ ಕೂಡ ಹೊಂದಿದ್ದ. ಮಳವಳ್ಳಿಯಲ್ಲಿ ವಾಸವಾಗಿದ್ದ. ಭಾನುವಾರ ರಾತ್ರಿ ಮಳವಳ್ಳಿಯಲ್ಲಿ ಈತನನ್ನು ಪತ್ತೆ ಮಾಡಿ ಮಂಡ್ಯದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಸೋಮವಾರ ಬೆಳಗ್ಗೆ ಈತ ವಾರ್ಡ್​ನಿಂದ ಪರಾರಿಯಾಗಿದ್ದ. ಸೋಂಕಿತ ವ್ಯಕ್ತಿ ಪರಾರಿಯಾಗಿರುವ ಸುದ್ದಿ ಹರಡುತ್ತಿದ್ದಂತೆ ಮಂಡ್ಯದ ಜನರಲ್ಲಿ ಭೀತಿ ಆವರಿಸಿತ್ತು. ಪೊಲೀಸರು ಕೂಡಲೇ ಶೋಧ ಆರಂಭಿಸಿದರು. ಅಂತಿಮವಾಗಿ ಪತ್ತೆ ಮಾಡಿ ಆಸ್ಪತ್ರೆಗೆ ದಾಖಲಿಸಿದರು. ಸದ್ಯ ಮಂಡ್ಯದ ಜನರ ನಿರಾಳರಾಗಿದ್ದಾರೆ.ವಾರ್ಡ್​ನಿಂದ ತಪ್ಪಿಸಿಕೊಂಡಿದ್ದ ಕರೊನಾ ಸೋಂಕಿತ ವ್ಯಕ್ತಿಯನ್ನು ಪತ್ತೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಪರಶುರಾಮ್​ ಸ್ಪಷ್ಟಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​)
ಕರೊನಾ ಕರ್ತವ್ಯದಲ್ಲಿದ್ದ ಆರೋಗ್ಯ ನಿರೀಕ್ಷಕನಿಗೆ ತೀವ್ರ ಹೃದಯಾಘಾತ, ಕೋಲಾರ ಜಿಲ್ಲೆಯಲ್ಲಿ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
