ರಾಯಚೂರು: ರಾಯರ ದರ್ಶನ ಅಭಾದಿತ ಎಂದಿರುವ ಮಂತ್ರಾಲಯ ಶ್ರೀ ರಾಘವೇಂದ್ರ ಮಠವು, ಮದುವೆ ಮತ್ತಿತರ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಜನ ಸೇರುವಂತಿಲ್ಲ ಎಂಬ ಸಂದೇಶ ನೀಡಿದೆ.
ಕರೊನಾ ಸೋಂಕು ಹಿನ್ನೆಲೆಯಲ್ಲಿ ವಿದೇಶಿಯರು, ವಿದೇಶದಿಂದ ಬಂದ ಭಾರತೀಯರು ಕನಿಷ್ಠ 15 ದಿನದವರೆಗೆ ಶ್ರೀಮಠಕ್ಕೆ ಬರಬಾರದೆಂದು ಶನಿವಾರ ಮನವಿ ಮಾಡಿತ್ತು. ಅದನ್ನು ತಪ್ಪಾಗಿ ಅರ್ಥೈಸಿಕೊಂಡ ಕೆಲವರು, ರಾಯರ ದರ್ಶನಕ್ಕೆ ಅವಕಾಶವಿಲ್ಲ, ಮಠ ಮುಚ್ಚಲಾಗುವುದು ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಇದರಿಂದ ಗಲಿಬಿಲಿಗೊಂಡ ಶ್ರೀಮಠದ ಆಡಳಿತ ಮಂಡಳಿ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸರಾವ್ ಪ್ರಕಟಣೆ ನೀಡಿದ್ದು, ವದಂತಿಗೆ ಕಿವಿಗೊಡಬಾರದು.
ಭಕ್ತರಿಗೆ ರಾಯರ ದರ್ಶನ ಅಭಾದಿತ. ಮುಂಗಡವಾಗಿ ಮದುವೆ, ಮತ್ತಿತರ ಕಾರ್ಯಕ್ರಮಗಳನ್ನು ನೋಂದಾಯಿಸಿಕೊಂಡ ಭಕ್ತರು, ಮುಂದಿನ 15 ದಿನಗಳ ಕಾಲ ವಧು-ವರರ ಕಡೆಯ ತಲಾ 10 ರಿಂದ 15 ಜನ ಮಾತ್ರವೇ ಬಂದು ಮದುವೆ ಮುಗಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಮಠದಲ್ಲಿ ಪಂಚಾಮೃತ ಮಾತ್ರ ನಿಷಿದ್ಧವಾಗಿದ್ದು, ಪ್ರಸಾದ ಎಂದಿನಂತಿದೆ. ಭಕ್ತರು ತಮ್ಮೊಂದಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ತರುವ ಜತೆಗೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದು ಕಡ್ಡಾಯ ಎಂದು ತಿಳಸಿದ್ದಾರೆ.
ಜಗ್ಗೇಶ್ ಟ್ವೀಟ್
ಮಂತ್ರಾಲಯ ಮಠ ಮುಚ್ಚಲಾಗುತ್ತಿದೆ ಎಂಬ ವದಂತಿಗೆ ಕಿವಿಗೊಡದಂತೆ ರಾಯರ ಭಕ್ತ ಹಾಗೂ ನಟ ಜಗ್ಗೇಶ ಟ್ವೀಟ್ ಮಾಡಿದ್ದಾರೆ. ಶ್ರೀಮಠದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ ಇಂಗ್ಲಿಷ್ ಹೇಳಿಕೆ ಸಮೇತ ಟ್ವಿಟರ್​ನಲ್ಲಿ ಸಂದೇಶ ಹಾಕಿರುವ ಜಗ್ಗೇಶ್ ‘ಆತ್ಮೀಯ ಸಹೃದಯರ ಮಾಹಿತಿಗೆ, ಮಾನ್ಯರೇ ಭವರೋಗ ವೈದ್ಯ ನಮ್ಮ ಗುರುರಾಯರು. ಮಠ ಕರೊನಾ ಹರಡುವಿಕೆ ಪ್ರಯುಕ್ತ ಮುಚ್ಚಲಾಗುತ್ತೆ ಎನ್ನುವ ವದಂತಿ ನಂಬದಿರಿ. ನನ್ನ ಹುಟ್ಟುಹಬ್ಬದ ಪ್ರಯುಕ್ತ ಅಲ್ಲೆ ಇರುವೆ. ರಾಯರು ರೋಗ ರಾಗ ದ್ವೇಷ ಸಂಕಷ್ಟ ದೂರಮಾಡೋ ಮಹನೀಯರು’ ಎಂದು ಪೋಸ್ಟ್ ಮಾಡಿದ್ದಾರೆ.
ಕಲಬುರಗಿಯಲ್ಲಿ ಮತ್ತೊಂದು ಕರೊನಾ ಪ್ರಕರಣ; ಸೋಂಕು ತಗುಲಿ ಮೃತಪಟ್ಟ ವೃದ್ಧನ ಕುಟುಂಬದ ಇನ್ನೋರ್ವರಲ್ಲಿ ವೈರಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
