ಬೆಂಗಳೂರು:ಕರೊನಾ ರಾತ್ರಿ ಬರುತ್ತೆ, ಹಗಲು ಬರಲ್ವಾ? ರಾತ್ರಿ ಕರ್ಫ್ಯೂ ಹಾಕಲು ಯಾವನು ಐಡಿಯಾ ಕೊಟ್ಟಿದ್ದು? ಅದರದ ಯಾವ ರೀತಿ ನಿಯಂತ್ರಣ ಆಗುತ್ತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಸೋಮವಾರ ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಲಸಿಕೆ ಪಡೆದವರಿಗೂ ಕರೊನಾ ಬರುತ್ತಿದೆ. ಸರ್ಕಾರ ಸರಿಯಾದ ರೀತಿಯಲ್ಲಿ ಪರಿಸ್ಥಿತಿ ನಿರ್ವಹಣೆ ಮಾಡಲಿಲ್ಲ ಎಂದು ಟೀಕಿಸಿದರು.ಇದನ್ನೂ ಓದಿರಿಸಾರಿಗೆ ನೌಕರರ ಹೋರಾಟಕ್ಕೆ ಬೆಂಬಲ ಕೊಡ್ತೀನಿ, ಆದ್ರೆ ನಮ್ಮದೊಂದು ಷರತ್ತು ಇದೆ: ಎಚ್​.ಡಿ.ರೇವಣ್ಣ
ಸಾರಿಗೆ ನಿಗಮದ ಮುಷ್ಕರ ಕುರಿತು ಪ್ರತಿಕ್ರಿಯೆ ನೀಡಿದ ಡಿಕೆಶಿ, ಸರ್ಕಾರ ನಿಗಮ ಖಾಸಗಿಗೆ ಮಾರಲು ಹೊಂಚು ಹಾಕಿದೆ ಎಂದು ಟೀಕಿಸಿದರು. ಮುಷ್ಕರ ನಿರತರನ್ನು ಕರೆದು ಮಾತನಾಡಿಸದೆ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸಲಾಗಿದೆ. ಈ ವರ್ಷದಲ್ಲಿ ನಡೆದಷ್ಟು ಪ್ರತಿಭಟನೆಗಳು ಯಾವಾಗಲೂ ನಡೆದಿರಲಿಲ್ಲ ಎಂದರು.
ಸಿಡಿ ಲೇಡಿ ಪ್ರಕರಣ ಕುರಿತು ಮಾತನಾಡಿದ ಡಿಕೆಶಿ, ಪಿಪಿಇ ಕಿಟ್ ಧರಿಸಿ ಮಲಗಿದವರ ಬಗ್ಗೆ ಗೊತ್ತಿದೆ. ತನಿಖೆ ಯಾವ ರೀತಿ ನಡೆಯುತ್ತಿದೆ ಎಂಬುದರ ಅರಿವಿದೆ. ಸಮಯ ಬಂದಾಗ ಮಾತನಾಡುತ್ತೇನೆ ಎಂದರು.
VIDEO| ಹಾವಿನ ಜತೆ ಸರಸವಾಡಲು ಹೋದ ಯುವಕ ಸಾವು! ಬೆಚ್ಚಿಬೀಳಿಸುತ್ತೆ ಈ ದೃಶ್ಯ

ರಮೇಶ್ ಜಾರಕಿಹೊಳಿ ಅಪಾರ್ಟ್​ಮೆಂಟ್​ನಲ್ಲಿದೆ ಸೀಕ್ರೆಟ್​ ಡೋರ್​! ಸ್ಫೋಟಕ ರಹಸ್ಯ ಬಯಲು

ರೌಡಿಶೀಟರ್ ಪತ್ನಿ ಜತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಿಯಕರ! ಮುಂದೆ ಆಗಿದ್ದೆಲ್ಲವೂ ಅವಾಂತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + twelve =
Remember me
