ಬೆಂಗಳೂರು: ಕೋವಿಡ್-19 ಸೋಂಕು ತಡೆಯಲು ಹಗಲು-ರಾತ್ರಿ ಶ್ರಮಿಸುತ್ತಿರುವ ಪೊಲೀಸರಿಗೂ ಆತಂಕ ಎದುರಾಗಿದ್ದು, ರಾಜ್ಯದ 29 ಪೊಲೀಸರಿಗೆ ಸೋಂಕು ತಗುಲಿದೆ. ಮಂಗಳವಾರ ಬೆಳಗಾವಿ ಮತ್ತು ಹಾಸನದಲ್ಲಿ ತಲಾ 7ಪ್ರಕರಣಗಳು ಬೆಳಕಿಗೆ ಬಂದಿದ್ದು, ಇಲಾಖೆ ಮತ್ತು ಕುಟುಂಬ ಸದಸ್ಯರಲ್ಲಿ ಆತಂಕ ಮನೆ ಮಾಡಿದೆ.
ಉಡುಪಿ, ದಕ್ಷಿಣ ಕನ್ನಡ ಮತ್ತು ಬೆಂಗಳೂರಿನ ಪುಲಿಕೇಶಿನಗರದ ಠಾಣೆಗಳನ್ನು ಸೀಲ್​ಡೌನ್ ಮಾಡಲಾಗಿದೆ. ಸ್ಯಾನಿಟೈಸರ್ ಸಿಂಪಡಿಸಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಮಂಗಳವಾರ ಹಾಸನದ ಕೆಎಸ್​ಆರ್​ಪಿ ಪಿಎಸ್​ಐ ಸೇರಿ 6 ಮಂದಿಗೆ ಕರೊನಾ ಇರುವುದು ಗೊತ್ತಾಗಿದೆ.
ಇದನ್ನೂ ಓದಿವಿಶ್ವ ಆರೋಗ್ಯ ಸಂಸ್ಥೆ ಬೇಡ ಎಂದರೂ ಭಾರತದಲ್ಲಿ ಎಚ್‌ಸಿಕ್ಯೂ ಬಳಕೆ ಮುಂದುವರಿಕೆ
29 ಮಂದಿಗೆ ಕರೊನಾ : ಬಾಗಲಕೋಟೆ-4, ಉಡುಪಿ-3, ಬೆಂಗಳೂರು ನಗರ-2, ಬೆಳಗಾವಿ-7, ಹಾಸನ-7 ಹಾಗೂ ಬೆಂಗಳೂರು ಗ್ರಾಮಾಂತರ, ಮಂಡ್ಯ, ಕಲುಬುರಗಿ, ದಕ್ಷಿಣ ಕನ್ನಡ, ಬಿಜಾಪುರ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ತಲಾ ಒಂದು ಕರೊನಾ ಪ್ರಕರಣ ದೃಢವಾಗಿದೆ.
ಹಂತ ಹಂತವಾಗಿ ತಪಾಸಣೆ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅಂದಾಜು 92 ಸಾವಿರಕ್ಕೂ ಅಧಿಕ ಅಧಿಕಾರಿ/ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಾಗಲೇ 50 ವರ್ಷ ಮೇಲ್ಪಟ್ಟ ಮಹಿಳಾ ಮತ್ತು 55 ವರ್ಷ ಮೇಲ್ಪಟ್ಟ ಪುರುಷ ಅಧಿಕಾರಿ/ಸಿಬ್ಬಂದಿಗೆ ಒತ್ತಡದ ಕೆಲಸದಿಂದ ವಿಮುಕ್ತಿ ಮಾಡಲಾಗಿದೆ. ಅನಾರೋಗ್ಯ ಪೀಡಿತರಿಗೆ ರಜೆಯನ್ನು ಕೊಡಲಾಗಿದೆ. 35 ವರ್ಷ ಮೇಲ್ಪಟ್ಟವರಿಗೆ ಹಂತ ಹಂತವಾಗಿ ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಟೆಂಟ್​ನಡಿ ವಿಟ್ಲ ತಾತ್ಕಾಲಿಕ ಠಾಣೆ
ಸಿಬ್ಬಂದಿಗೆ ಕರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ 48 ಗಂಟೆಗಳ ಕಾಲ ಸೀಲ್​ಡೌನ್ ಆದ ವಿಟ್ಲ ಪೊಲೀಸ್ ಠಾಣೆ ಇದೀಗ ನಾಲ್ಕು ಮಾರ್ಗ ಜಂಕ್ಷನ್ ಸಮೀಪ ಟೆಂಟ್ ಹಾಕಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಎಸ್​ಐ ಸಹಿತ 33 ಸಿಬ್ಬಂದಿ ಹಾಗೂ 12 ಹೋಂಗಾರ್ಡ್ ಕಾರ್ಯನಿರ್ವಹಿಸುತ್ತಿದ್ದು, ಮಂಗಳವಾರ ಒಬ್ಬರು ರಜೆಯಲ್ಲಿದ್ದರು. ಉಳಿದವರು ಹೋಂ ಕ್ವಾರಂಟೈನ್​ನಲ್ಲಿದ್ದರು.
ಇದನ್ನೂ ಓದಿಭಾರತ-ಚೀನಾ ಉದ್ವಿಗ್ನತೆ: ರಕ್ಷಣಾ ಮುಖ್ಯಸ್ಥರ ಜತೆ ಪ್ರಧಾನಿ ಸಭೆ
ಫೀಲ್ಡ್ ಆಫೀಸರ್​ಗೆ ಸೋಂಕು
ಕೊಪ್ಪಳ: ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮದ 27 ವರ್ಷದ ಬ್ಯಾಂಕ್ ಉದ್ಯೋಗಿಗೆ ಮಂಗಳವಾರ ಕರೊನಾ ಸೋಂಕು ದೃಢಪಟ್ಟಿದೆ. ಸೋಂಕಿತ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಕೆನರಾ ಬ್ಯಾಂಕ್ ನೌಕರನಾಗಿದ್ದಾನೆ. ಈತ ಈವರೆಗೆ ಅನೇಕ ಗ್ರಾಮಗಳಿಗೆ ಸಾಲ ವಸೂಲಿಗೆ ತೆರಳಿದ್ದು, ಮನೆ ಅಕ್ಕಪಕ್ಕದ 5-6 ವರ್ಷದ ಮಕ್ಕಳ ಸಂಪರ್ಕಕ್ಕೆ ಬಂದಿದ್ದಾರೆ. ಇದು ಮಸ್ಕಿ ಮತ್ತು ಕುಷ್ಟಗಿ ತಾಲೂಕಿನಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಸೋಂಕು ಕಾಣಿಸಿಕೊಂಡಿರುವ ವ್ಯಕ್ತಿ ಮೂಲತಃ ಬಾಗಲಕೋಟೆ ಜಿಲ್ಲೆಗೆ ಸೇರಿದ್ದು, ಸೋಂಕಿತ ಆ ಜಿಲ್ಲೆಗೆ ತೆರಳಿದ್ದನೇ ಅಥವಾ ಆ ಜಿಲ್ಲೆಯ ಸೋಂಕಿತರ ಸಂಪರ್ಕಕ್ಕೆ ಬಂದಿದ್ದನೇ ಎನ್ನುವುದನ್ನು ಪರಿಶೀಲಿಸಲಾಗುತ್ತಿದ್ದು, ಬ್ಯಾಂಕ್ ಸಿಬ್ಬಂದಿ ಹಾಗೂ ಆತನ ಸಂಪರ್ಕಕ್ಕೆ ಬಂದಿರುವ ಗ್ರಾಹಕರ ಪತ್ತೆ ಕಾರ್ಯವನ್ನು ನಡೆಸಲಾಗುತ್ತಿದೆ.
ಶುಶ್ರೂಷಕನಿಗೆ ಕರೊನಾ ಸೋಂಕು
ಬಳ್ಳಾರಿ: ನಗರದ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 35 ವರ್ಷದ ಶುಶ್ರೂಷಕನಿಗೆ ಕರೊನಾ ಸೋಂಕು ತಗುಲಿದೆ. ಇದು ಜಿಲ್ಲೆಯಲ್ಲಿ ಕರೊನಾ ವಾರಿಯರ್​ಗೆ ಸೋಂಕು ತಗುಲಿರುವ ಮೊದಲ ಪ್ರಕರಣವಾಗಿದೆ. ಸೋಂಕಿತರಿಗೆ ಚಿಕಿತ್ಸೆ ನೀಡುವ ವಾರ್ಡ್​ನಲ್ಲಿ ಇವರು ಕೆಲಸ ಮಾಡುತ್ತಿದ್ದರು. 14 ದಿನಗಳ ಕೆಲಸದ ಬಳಿಕ ನಿಯಮದಂತೆ 14 ದಿನದ ಹೋಟೆಲ್ ಕ್ವಾರಂಟೈನ್​ನಲ್ಲಿದ್ದರು. ಕ್ವಾರಂಟೈನ್​ನಲ್ಲಿದ್ದಾಗ ಕರೊನಾ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ. ಸೋಂಕಿತನಿಗೆ ರೋಗದ ಯಾವುದೇ ಲಕ್ಷಣಗಳಿಲ್ಲ. ಪಿಪಿಇ ಕಿಟ್ ಸೇರಿ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಶುಶ್ರೂಷಕ ಕಾರ್ಯನಿರ್ವಹಿಸಿದ್ದ. ಇದರಿಂದಾಗಿ ಸೋಂಕು ಹೇಗೆ ತಗುಲಿತು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಕ್ವಾರಂಟೈನ್ ತಪ್ಪಿಸಲು ಹೊರಗಡೆಯಿಂದ ಬಂದವರ ಹೊಸ ಹೊಸ ತಂತ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + four =
Remember me
